ತುಮಕೂರು | ಸಿಪಿಐ ಜನಪರ ಹೋರಾಟಕ್ಕೆ ಜನರ ಬೆಂಬಲ ಬೇಕು : ಡಾ. ಜಿ ರಾಮಕೃಷ್ಣ

Date:

 ದೇಶದಲ್ಲಿ ಕಾರ್ಮಿಕರು ದುಡಿಯುವ ಮತ್ತು ಬಡವರ ಪರವಾಗಿ ಬೀದಿಗಿಳಿದು ಸರ್ಕಾರ ಸ್ಥಳೀಯ ಆಡಳಿತಗಳನ್ನು ಟೀಕಿಸುತ್ತ ಪ್ರತಿಭಟನೆಗಳ ಮೂಲಕ ಎಚ್ಚರಿಕೆ ಗಂಟೆಯಾಗಿರುವ ಸಿಪಿಐ ಪಕ್ಷ ಶತಮಾನದ ಒಸ್ತಿಲಲ್ಲಿ ಇದ್ದು ಅದರ ಸೈದ್ಧಾಂತಿಕ ನಿಲುವುಗಳ ಪ್ರಣಾಳಿಕೆಯನ್ನು ಜನರು ಒಪ್ಪಿಕೊಂಡರೆ ಮುಂಬರುವ ದಿನಗಳಲ್ಲಿ ಸುಧಾರಿತವಾದ ಆಡಳಿತವನ್ನು ದೇಶದಲ್ಲಿ ಕಾಣಬಹುದು ಎಂದು ಹಿರಿಯ ಚಿಂತಕ ಡಾ.ಜಿ ರಾಮಕೃಷ್ಣ ಅವರು ತಿಳಿಸಿದರು.

- Advertisement -

 ತುಮಕೂರು ನಗರದ ಅಮಾನಿಕೆರೆ ರಸ್ತೆಯ ಕನ್ನಡ ಭವನದಲ್ಲಿ ಸಿಪಿಐ  ಪಕ್ಷದ ನೂರು ವರ್ಷಗಳ ಶತಮಾನದ ಸಂಭ್ರಮ  ಕಾರ್ಯಕ್ರಮದಲ್ಲಿ  ಮಾತನಾಡಿದ  ಅವರು,  ಸಿಪಿಐ ಪಕ್ಷಕ್ಕೆ ನೂರು ವರ್ಷಗಳು ಇದ್ದರೆ ಇದರ ಜೊತೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ರೇವಣ್ಣ ಅವರು ಶತಮಾನದ ಸಂಭ್ರಮವನ್ನು ಎದುರು ನೋಡುತ್ತಿದ್ದಾರೆ ಜನರು ಸಿಪಿಐ ಪ್ರಜ್ಞಾಶಿಲಾ ಕಾರ್ಯಕ್ರಮಗಳನ್ನ ಗುರುತಿಸಿ ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಪಕ್ಷ ಸಂಘಟನೆಗೆ ಮುಂದಾಗ ಬೇಕಿದೆ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

 ಸಿಪಿಐ ಪಕ್ಷದ ಪ್ರಣಾಳಿಕೆ ಚಿಂತನೆ ಹೋರಾಟಗಳು ದುಡಿಯುವ ವರ್ಗದ ಜನಪರ ಕಾಳಜಿಯನ್ನ ಹೊಂದಿವೆ ಆದರೆ ನಮ್ಮ ದೇಶವನ್ನ ದುರಾಡಳಿತದಿಂದ ವಿವಿಧ ಸರ್ಕಾರದವರು ಲೂಟಿ ಹೊಡೆಯುವವರನ್ನು ನೋಡಿದರೆ ಕೇದಕರ ವೆನಿಸುತ್ತದೆ. ಮಿತ್ರ ಪಕ್ಷಗಳು ಸಿಪಿಐ ಪಕ್ಷವನ್ನು ಬಲಪಡಿಸಿ ಜನಸಾಮಾನ್ಯರ ರಕ್ಷಣೆಗೆ ಮುಂದಾಗಬೇಕೆಂದು ನುಡಿದರು.

 ಮಾರ್ಕ್ಸ್ ಮತ್ತು ಲೆನಿನ್ ವಾದವನ್ನು ಒಪ್ಪಿಕೊಂಡ ಅಂದಿನ ಜನನಾಯಕರು 1924ರಲ್ಲಿ ಸಿಪಿಐ ಪಕ್ಷವನ್ನು ಒಗ್ಗೂಡಿಕೊಂಡು ಸಂಘಟನೆ ಮಾಡಿದ ಸಂದರ್ಭದಲ್ಲಿ ಜೈಲುವಾಸ ನೇಣುಗಂಬ ಅನುಭವಿಸಿ ಅನೇಕರು ಜೀವವನ್ನೇ ಕಳೆದುಕೊಂಡರು. ಆದರೆ ಇವರ ಮುಖ್ಯ ಉದ್ದೇಶ ದುಡಿಯುವ ವರ್ಗ ಮತ್ತು ಕಾರ್ಮಿಕರನ್ನು ರಕ್ಷಣೆ ಮಾಡುವುದು ಆಗಿತ್ತು. ಸ್ವಾತಂತ್ರ್ಯಕ್ಕಾಗಿ  ದುಡಿದ ಚಂದ್ರಶೇಖರ್ ಅಜಾದ್ ಅವರು ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದು, ಸಿಪಿಐ ಪಕ್ಷದ ಸೈದಾಂತಿಕ ನಿಲುವುಗಳನ್ನು ಒಪ್ಪಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಬಂಡವಾಳ ಶಾಹಿ ಆಡಳಿತದ ವಿರುದ್ಧವಾಗಿ ಸಿಪಿಐ ಪಕ್ಷದ ನೂರು ವರ್ಷಗಳ ಹೋರಾಟ ಗುರ್ತಿಸಿ ಜನರು ಎಚ್ಚರಗೊಳ್ಳಬೇಕು  ಎಂದು ತಿಳಿಸಿದರು.

1001868087

 ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಕಾಮ್ರೆಡ್ ಸಾತಿ ಸುಂದರೇಶ್  ಮಾತನಾಡಿ 1925 ರಲ್ಲಿ ಕಾನ್ಪುರದಲ್ಲಿ ಜನ್ಮತಾಳಿದ ಸಿಪಿಐ ಪಕ್ಷ ರಾಜ್ಯದಾದ್ಯಂತ ಶತಮಾನದ ಸಂಭ್ರಮವನ್ನು ರೈತರು ದುಡಿಯುವ ವರ್ಗ ಕಾರ್ಮಿಕದ ನಡುವೆ ಆಚರಣೆ ಮಾಡುತ್ತಾ 1950ರಲ್ಲಿ ರಾಜ್ಯದಲ್ಲಿ ಪಕ್ಷ ಸ್ಥಾಪನೆಗೊಂಡಿದೆ. ಪಕ್ಷ ಸಂಘಟಿಸುವ ಸಂದರ್ಭದಲ್ಲಿ ಬ್ರಿಟಿಷ್ ಅವರು ಅನೇಕರನ್ನು ಜೈಲಿಗೆ ಕಳಿಸಿದ್ದಾರೆ, ಕೇಂದ್ರ ಮತ್ತು ರಾಜ್ಯದಲ್ಲಿರುವ ಸರ್ಕಾರಗಳು ಬಡವರ ಬೇಡಿಕೆಗಳನ್ನು ಈಡೇರಿಸದೇ ಹಣ ಮಾಡುವ ದಾರಿಯನ್ನು ಮಾತ್ರ ಯೋಚನೆ ಮಾಡುತ್ತಿದೆ. ಇನ್ನೂ ನಮ್ಮ ರಾಜ್ಯದಲ್ಲಿ 10 ಲಕ್ಷ ಜನರು ಭೂಮಿ ಇಲ್ಲದೆ ಪರದಾಡುತ್ತಿದ್ದಾರೆ. ವಿದೇಶದ ಬಿಳಿಯರು ನಮ್ಮ ದೇಶದ ಕರಿಯರಿಗೆ ಅಧಿಕಾರ ಕೊಟ್ಟು ಹೋಗಿರುವ ಪರಿಣಾಮವಾಗಿ ಬಂಡವಾಳ ಶಾಹಿ ಆಡಳಿತ ಬಡವರ ಮೇಲೆ ದಬ್ಬಾಳಿಕೆಯ ನಡೆಸುತ್ತಾ ಬ್ರಿಟಿಷರಿಗಿಂತ ಕ್ರೂರವಾದ ಆಡಳಿತವನ್ನು ನೀಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದರು.

 ಹಿರಿಯ ಪರಿಸರವಾದಿ ಸಿ ಯತಿರಾಜ್  ಮಾತನಾಡಿ ನಮ್ಮ ದೇಶದಲ್ಲಿ ಭ್ರಮೆಗೆ ಒಳಗಾಗಿರುವ ಜನರು ಉತ್ತಮ ಅಧಿಕಾರ ನೀಡುವ ಪಕ್ಷಗಳನ್ನು ಆಡಳಿತಕ್ಕೆ ತರುವುದಿಲ್ಲ. ಅದರ ಜೊತೆಗೆ ಮೇಲಿನಿಂದ ಮೇಲೆ ಒತ್ತಡ ಏರಿ ತಾಂತ್ರಿಕವಾಗಿ ಹಾಳು ಮಾಡುವ ಯೋಜನೆಗಳನ್ನು ಜನರು ಒಪ್ಪಿಕೊಳ್ಳುತ್ತಾರೆ.  ಇನ್ನು ಮುಂದಾದರೂ ಸಿಪಿಐ ಪಕ್ಷದ ಜನಪರ ಹೋರಾಟಗಳನ್ನು ಒಪ್ಪಿಕೊಂಡು ಜನರು ಅದಕ್ಕೆ ಬೆಂಬಲ ನೀಡಿ ಬಡವರು ಮತ್ತು ದುಡಿಯುವ ವರ್ಗವನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಶತಮಾನ ಸಂಭ್ರಮದ ಅಧ್ಯಕ್ಷತೆ ವಹಿಸಿದ್ದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಮ್ರೆಡ್ ಗಿರೀಶ್  ಮಾತನಾಡಿ ದುಡಿಯುವರ, ಕಾರ್ಮಿಕರ, ಬಡವರ ರೈತರ ಪರವಾಗಿ ಸಿಪಿಐ ಪಕ್ಷ ಪ್ರತಿನಿತ್ಯ ಹೋರಾಟಗಳನ್ನು ನಡೆಸುತ್ತಿದೆ.    ಸಮ ಸಮಾಜದ ನಿರ್ಮಾಣ ಮತ್ತು ಉತ್ತಮ ಆಡಳಿತಕ್ಕಾಗಿ ಸಿಪಿಐ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಸ್ವತಂತ್ರ ಹೋರಾಟಗಾರ ಟಿ ಆರ್ ರೇವಣ್ಣ, ಸಿಪಿಐಎಂ ಪಕ್ಷದ ಎನ್ ಕೆ ಸುಬ್ರಹ್ಮಣ್ಯ, ಎಸ್ ಯುಸಿಐಸಿಯ ಎಸ್ ಎನ್ ಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು, ಎಐಟಿಯುಸಿ ಕಂಬೇಗೌಡ, ಸಿಪಿಐ ಪಕ್ಷದ ಜಿಲ್ಲಾ ಖಜಾಂಚಿ ಅಶ್ವತ್ ನಾರಾಯಣ, ಚಂದ್ರಶೇಖರ್, ರವಿಪ್ರಸಾದ್, ಆರ್ ಗೋವಿಂದರಾಜು, ರಮೇಶ್, ಜಾಫರ್, ಬಸವರಾಜು ಸೇರಿದಂತೆ ಇತರರು ಇದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುಣಿಗಲ್ | ಸಕಾಲಕ್ಕೆ ನಡೆಯದ ದಲಿತರ ಕುಂದುಕೊರತೆ ಸಭೆ: ಅಧಿಕಾರಿಗಳ ವಿರುದ್ಧ ಮುಖಂಡರ ಆಕ್ರೋಶ

ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪರಿಶಿಷ್ಟ ಜಾತಿ ಮತ್ತು...

ಗುಬ್ಬಿ | ಸ್ವಚ್ಚತೆ ನಮ್ಮ ಆಂತರಿಕ ಪ್ರತಿಬಿಂಬ : ಪಿಡಿಒ ಶೇಖರ್

 ಗಾಂಧೀಜಿ ಅವರ ಸ್ವಚ್ಛ ಭಾರತ್ ಕನಸು ನಮ್ಮ ಪರಿಸರ ಮಾಲಿನ್ಯ ನಿಯಂತ್ರಣದ...

ಕಲಬುರಗಿ | ಎಸ್‌ಐಆರ್ ವಿರೋಧಿಸಿ ಧರಣಿ; ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಿಲ್ಲಿಸುವುದು, ಪಟ್ಟಿಯಿಂದ...

ಗದಗ | ಸಾರಿಗೆ ಬಸ್ ಟಾಯರ್ ಸ್ಪೋಟ ಪರಿಣಾಮ ಕಂಡಕ್ಟರ್ ಕಾಲಿಗೆ ಗಾಯ

ಲಕ್ಷ್ಮೇಶ್ವರ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ (ಸಂಖ್ಯೆ:...