ತಮಿಳುನಾಡು ಚುನಾವಣೆ | ಜಯಲಲಿತಾ ಬದುಕಿದ್ದಿದ್ದರೆ ಕ್ಷೇತ್ರ ಮರುವಿಂಗಡಣೆ ವಿರೋಧಿಸುತ್ತಿದ್ದರು: ಸ್ಟ್ಯಾಲಿನ್‌

Date:

ಜಯಲಲಿತಾ ಅವರು ಇಂದು ಬದುಕಿದ್ದಿದ್ದರೆ, ಕೇಂದ್ರ ಸರ್ಕಾರ ಮಾಡುವುದಕ್ಕೆ ಹೊರಟಿರುವ ‘ಕ್ಷೇತ್ರ ಮರುವಿಂಗಡಣೆ’ (Delimitation) ಪ್ರಕ್ರಿಯೆಯ ವಿರುದ್ಧ ಖಂಡಿತವಾಗಿ ಧ್ವನಿ ಎತ್ತುತ್ತಿದ್ದರು ಎಂದು ಮುಖ್ಯಮಂತ್ರಿ ಎಂ.ಕೆ ಸ್ಟ್ಯಾಲಿನ್ ಹೇಳಿದ್ದಾರೆ. ಮಾತ್ರವಲ್ಲದೆ, ಇದೇ ಸಂದರ್ಭದಲ್ಲಿ ಜಯಲಲಿತಾ ಅವರು ಜಿಎಸ್‌ಟಿ ಮತ್ತು ನೀಟ್ (NEET) ಪರೀಕ್ಷೆಗಳ ಬಗ್ಗೆ ತೀವ್ರ ಟೀಕಿಸಿದ್ದರು ಎನ್ನುವುದನ್ನು ನೆನಪಿಸಿದ್ದಾರೆ.

ರಾಣಿಪೇಟೆ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಸ್ಟ್ಯಾಲಿನ್‌ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
 
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರ ಬಗ್ಗೆ ಟೀಕಿಸಿದ ಸ್ಟ್ಯಾಲಿನ್‌, ಎಡಪ್ಪಾಡಿ ಬಿಜೆಪಿಗೆ ಶರಣಾಗಿದ್ದಾರೆ. “ಅಮ್ಮ (ಜಯಲಲಿತಾ) ಮೃತರಾದ ಬಳಿಕ, ಪಳನಿಸ್ವಾಮಿ ಅವರು ಎಐಎಡಿಎಂಕೆಯನ್ನು ಕೇವಲ ಒಂದು ‘ಡಮ್ಮಿ’ ಪಕ್ಷವನ್ನಾಗಿ ಮಾಡಿದ್ದಾರೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : ಅಂಬೇಡ್ಕರ್‌ ಅವರ ‘ಸ್ಟೇಟ್ಸ್‌ ಅಂಡ್‌ ಮೈನಾರಿಟೀಸ್‌’ ಕೃತಿ ಹೇಳುವುದೇನು?

ತಮಿಳುನಾಡು ಇಂದು ಇಡೀ ದೇಶಕ್ಕೆ ಮಾದರಿಯಾಗಿದೆ ಮತ್ತು ಡಿಎಂಕೆ ಸರ್ಕಾರದ ಸಾಧನೆಗಳ ಮುಂದೆ ವಿರೋಧ ಪಕ್ಷದ ನಾಯಕರಿಗೆ ಹೇಳಿಕೊಳ್ಳಲು ಏನೂ ಇಲ್ಲದ ಕಾರಣ ಅವರು ನಿಂದನೆಯ ಹಾದಿ ಹಿಡಿದಿದ್ದಾರೆ. ಡಿಎಂಕೆ ಸರ್ಕಾರದ ‘ದ್ರಾವಿಡ ಮಾದರಿ’ಯ ಅಭಿವೃದ್ಧಿಯನ್ನು ಕಂಡು ಪಳನಿಸ್ವಾಮಿ ಅವರಿಗೆ ಅಸೂಯೆಯಾಗಿದೆ. 2024-25ರಲ್ಲಿ ತಮಿಳುನಾಡು ಶೇ. 11.19 ರಷ್ಟು ಜಿಎಸ್‌ಡಿಪಿ (GSDP) ಬೆಳವಣಿಗೆ ಸಾಧಿಸಿದೆ, ಆದರೆ ಈ ಹಿಂದೆ ಪಳನಿಸ್ವಾಮಿ ಆಡಳಿತದಲ್ಲಿ ಕೇವಲ ಶೇ. 0.07 ರಷ್ಟಿತ್ತು ಎಂದು ಅವರು ಅಂಕಿಅಂಶಗಳನ್ನು ಮುಂದಿಟ್ಟು ಟೀಕಿಸಿದ್ದಾರೆ.

- Advertisement -

ಪ್ರಸ್ತುತ ನಾಲ್ಕು ರಾಜ್ಯಗಳ ಚುನಾವಣೆ ನಡೆಯುತ್ತಿರುವಾಗ ಕೇಂದ್ರ ಸರ್ಕಾರ ತುರ್ತಾಗಿ ಸಂಸತ್ ವಿಶೇಷ ಅಧಿವೇಶನ ಕರೆದಿರುವುದನ್ನು ಅವರು ಪ್ರಶ್ನಿಸಿದ ಅವರು, ಕ್ಷೇತ್ರ ಮರುವಿಂಗಡಣೆಯಿಂದಾಗಿ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇಶ ತೊರೆಯುವಂತೆ ನೋಟಿಸ್‌; ಹೈಕೋರ್ಟ್ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ...

ಅವಧಿ ಮೀರಿದ ಆಹಾರ ಮರುಮಾರಾಟ ಆರೋಪ: ರಿಲಯನ್ಸ್‌, ಬ್ಲಿಂಕಿಟ್‌ ಘಟಕಗಳ ವಿರುದ್ಧ ತನಿಖೆ

ಅವಧಿ ಮೀರಿದ, ಹಾಳಾದ ಹಾಗೂ ಗ್ರಾಹಕರು ತಿರಸ್ಕರಿಸಿದ ಆಹಾರ ಪದಾರ್ಥಗಳನ್ನು ನಾಶಪಡಿಸುವ...

CJPಯ ತಿರಂಗಾ ಯಾತ್ರೆಗೆ ಮುನ್ನ ಬಂಧನ; ಅಭಿಜೀತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು

ಕನ್ನಾಟ್ ಪ್ಲೇಸ್‌ನಲ್ಲಿ ಆಯೋಜಿಸಲಾಗಿದ್ದ ‘ಲೇಹ್ರಾ ದೋ ತಿರಂಗಾ’ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ...

ಲೈಂಗಿಕ ದೌರ್ಜನ್ಯ ಖಂಡಿಸಿ ದೆಹಲಿ ಪೊಲೀಸ್ ಕೇಂದ್ರ ಕಚೇರಿಗೆ ಮಹಿಳಾ ಸಂಘಟನೆಗಳ ಮುತ್ತಿಗೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಮುಖ್ಯ ಚುನಾವಣಾ...