ತಮಿಳುನಾಡು | ಚಿತ್ರಮಂದಿರಗಳಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನ ರದ್ದು

Date:

  • ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾ
  • ತಮಿಳುನಾಡಿನ 13 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ

ಚಿತ್ರಕಥೆಯಿಂದಲೇ ಭಾರೀ ವಿವಾದಕ್ಕೆ ಈಡಾಗಿದ್ದ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಚಿತ್ರಮಂದಿರಗಳ ಪ್ರದರ್ಶನ ತಮಿಳುನಾಡಿನಲ್ಲಿ ಭಾನುವಾರದಿಂದ (ಮೇ 7) ರದ್ದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಚಿತ್ರದ ಬಗ್ಗೆ ನೀರಸ ಪ್ರತಿಕ್ರಿಯೆ, ಪ್ರತಿಭಟನೆ ಮೊದಲಾದ ಕಾರಣಗಳಿಂದ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.

‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನ ರದ್ಧಾಗಿರುವ ಬಗ್ಗೆ ಪತ್ರಕರ್ತ ಶ್ರೀಧರ್‌ ಪಿಳೈ ಎಂಬುವವರು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

‘ಭಾನುವಾರ ಸಿನಿಮಾ ಟಿಕೆಟ್‌ ಬುಕ್‌ ಮಾಡಲು ಹೋದಾಗ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಪ್ರದರ್ಶನ ರದ್ದಾಗಿರುವುದು ತಿಳಿದು ಬಂದಿದೆ. ಕಾನೂನು ತೊಡಕು ಹಾಗೂ ಸಿನಿಮಾ ಪ್ರದರ್ಶನದ ಬಗ್ಗೆ ಇದ್ದ ನಿರಾಸಕ್ತಿ ಪ್ರದರ್ಶನ ರದ್ದತಿಗೆ ಕಾರಣ ಎಂದು ಮಲ್ಟಿಫ್ಲೆಕ್ಸ್‌ ಮಾಲೀಕರು ಹೇಳಿತ್ತಿದ್ದಾರೆ” ಎಂದು ಟ್ವೀಟ್‌ ಮಾಡಿದ್ದಾರೆ.

ರಾಜ್ಯದಲ್ಲಿ 13 ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿತ್ತು. ಹಲವು ಆನ್‌ಲೈನ್‌ನ ಸಿನಿಮಾ ಬುಕಿಂಗ್‌ ವೇದಿಕೆಗಳು ಚೆನ್ನೈನಲ್ಲಿ ಸಿನಿಮಾ ಇದ್ದ ಚಿತ್ರಮಂದಿರಗಳ ಪಟ್ಟಿಯನ್ನು ಈಗಾಗಲೇ ತೆಗೆದುಹಾಕಿದೆ.

ಸಿನಿಮಾ ಪ್ರದರ್ಶನ ರದ್ದತಿಯ ಬಗ್ಗೆ ತಮಿಳುನಾಡು ಥಿಯೇಟರ್‌ ಮತ್ತು ಮಲ್ಟಿಫ್ಲೆಕ್ಸ್‌ ಮಾಲೀಕರ ಸಂಘದ ಅಧ್ಯಕ್ಷ ತಿರುಪ್ಪೂರ್‌ ಸುಬ್ರಹ್ಮಣ್ಯಂ ಮಾಹಿತಿ ನೀಡಿದ್ದು, “ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಪ್ರದರ್ಶಿಸುವ ಪಿವಿಆರ್‌ನಂತಹ ಚಿತ್ರಮಂದಿರಗಳು ಮಾತ್ರ ಸಿನಿಮಾ ಪ್ರದರ್ಶನಕ್ಕೆ ಮುಂದಾಗಿದ್ದವು. ಆದರೆ ಸ್ಥಳೀಯ ಚಿತ್ರಮಂದಿರಗಳು ಸಿನಿಮಾ ಪ್ರದರ್ಶನಕ್ಕೆ ಒಲವು ತೋರಿರಲಿಲ್ಲ. ಜನಪ್ರಿಯ ತಾರೆ ಇಲ್ಲದಿರುವುದೇ ಇದಕ್ಕೆ ಕಾರಣ” ಎಂದು ಹೇಳಿದರು.

“ಸಿನಿಮಾ ಕೊಯಮತ್ತೂರಿನ ಚಿತ್ರಮಂದಿರವೊಂದರಲ್ಲಿ ಎರಡು ದಿನ ಪ್ರದರ್ಶನವಾಯಿತು. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಬಂದಿರಲಿಲ್ಲ. ಪ್ರತಿಭಟನೆ, ವಿವಾದ ಮತ್ತು ಪ್ರೇಕ್ಷಕರ ನೀರಸ ಪ್ರತಿಕ್ರಿಯೆಯಿಂದ ಚಿತ್ರಪ್ರದರ್ಶನ ರದ್ದತಿಗೆ ಮಾಲೀಕರು ನಿರ್ಧರಿಸಿದ್ದಾರೆ” ಎಂದು ಸುಬ್ರಹ್ಮಣಂ ತಿಳಿಸಿದರು.

ಸಿನಿಮಾ ಬಿಡುಗಡೆಯ ವಿರುದ್ಧ ತಮಿಳುನಾಡಿನ ‘ನಾಮ್‌ ತಮಿಳರ್‌ ಕಚ್ಚಿ’ ಪಕ್ಷ ಶನಿವಾರ ಪ್ರತಿಭಟನೆ ನಡೆಸಿತು. ಚಲನಚಿತ್ರದ ವಿರುದ್ಧ ಪಕ್ಷದ ಸಂಘಟಕ, ನಟ ಹಾಗೂ ನಿರ್ದೇಶಕ ಸೀಮನ್‌ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಚೆನ್ನೈ ಅಣ್ಣಾ ನಗರ ಪ್ರವೇಶ ದ್ವಾರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕಳೆದ ವಾರದ ಆರಂಭದಲ್ಲಿ ಮದ್ರಾಸ್‌ ಹೈಕೋರ್ಟ್ ವಜಾಗೊಳಿಸಿತ್ತು.

ಈ ಸುದ್ದಿ ಓದಿದ್ದೀರಾ? ‘ಎಎಲ್‌ಎಚ್‌ ಧ್ರುವ’ ಕಾರ್ಯಾಚರಣೆ ಸ್ಥಗಿತ: ಭಾರತೀಯ ಸೇನೆ

ಈ ಮಧ್ಯೆ ಸಿನಿಮಾ ನಿರ್ಮಾಪಕರು ಟೀಸರ್‌ ಜೊತೆಗೆ ಬರೆಯಲಾಗಿದ್ದ ವಿವಾದಾತ್ಮಕ ವಿವರಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದು ಹಾಕುವುದಾಗಿ ಕೇರಳ ಹೈಕೋರ್ಟ್‌ಗೆ ತಿಳಿಸಿದ್ದರು, ನಂತರ ಟೀಸರ್‌ ವಿವರಗಳನ್ನು ಬದಲಿಸಲಾಯಿತು.

ಚಲನಚಿತ್ರ ತಂಡ ಬಿಡುಗಡೆ ಮಾಡಿದ್ದ ಟೀಸರ್‌ನಲ್ಲಿ “ಕೇರಳದ 32 ಸಾವಿರ ಯುವತಿಯರನ್ನು ಬಲವಂತವಾಗಿ ಮತಾಂತರಿಸಿ ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಯುವತಿಯರನ್ನು ಸೇರ್ಪಡೆ ಮಾಡಲಾಗಿದೆ. ಈ ವಾಸ್ತವದ ಕುರಿತ ಕಥೆ ಸಿನಿಮಾದಲ್ಲಿದೆ” ಎಂದು ಹೇಳಿತ್ತು. ನಂತರ ಹೈಕೋರ್ಟ್‌ನಲ್ಲಿ ಈ ಕಲ್ಪಿತ ವಿವರಗಳನ್ನು ಸಾಬೀತುಮಾಡಲಾಗದೆ, ಚಿತ್ರತಂಡ ವಿವರಗಳನ್ನು ಅಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾವಡ್ ಯಾತ್ರೆ ವಿವಾದ | ಸುಪ್ರೀಂ ಕೋರ್ಟ್ ಕದ ತಟ್ಟಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಕಾವಡ್ ಯಾತ್ರೆಯ ಮಾರ್ಗದಲ್ಲಿರುವ ತಿನಿಸುಗಳ ಸ್ಟಾಲ್‌ಗಳ ಮಾಲೀಕರು ಸ್ಟಾಲ್‌ನಲ್ಲಿ ತಮ್ಮ ಹೆಸರನ್ನು...

ಉಮರ್ ಖಲೀದ್ ಜಾಮೀನು ಅರ್ಜಿ: ವಿಚಾರಣೆಯಿಂದ ಹಿಂದೆ ಸರಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ

ದೆಹಲಿ ಗಲಭೆಗಳ ಪಿತೂರಿ ಪ್ರಕರಣಗಳ ಆರೋಪಿಯಾಗಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್‌...

ಕುತ್ತು ತಂದ ಕಾಂಟ್ಯಾಕ್ಟ್ ಲೆನ್ಸ್; ಕಣ್ಣು ಕಳೆದುಕೊಳ್ಳುವ ಭೀತಿಯಲ್ಲಿ ಕನ್ನಡದ ನಟಿ?

ಕನ್ನಡ, ತಮಿಳು ಸಿನಿಮಾಗಳು ಹಾಗೂ ಹಲವು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ...