ಫ್ಯಾಕ್ಟ್ ಚೆಕ್ ಹಾಗೂ ಜವಾಬ್ದಾರಿಯುತ ವರದಿ ಮಾಡುವ ಮೂಲಕ ಕೋಮು ಸೌಹಾರ್ದಕ್ಕೆ ಶ್ರಮಿಸುತ್ತಿರುವ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಝುಬೇರ್ ಅವರಿಗೆ ತಮಿಳುನಾಡಿನ ಸ್ಟ್ಯಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ‘ಕೋಟ್ಟೈ ಅಮೀರ್ ಕೋಮು ಸೌಹಾರ್ದ ಪ್ರಶಸ್ತಿ’ ನೀಡಿ ಗೌರವಿಸಿದೆ.
ಮೂಲತಃ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯವರಾದ ಮೊಹಮ್ಮದ್ ಝುಬೇರ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟ್ಯಾಲಿನ್ ಅವರು ಜನವರಿ 26ರಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
Congratulations team Alt News! 🎉
Communal Harmony Award @zoo_bear pic.twitter.com/bvr30PVDOD— Abhishek (@AbhishekSay) January 26, 2024
‘ಕೋಟ್ಟೈ ಅಮೀರ್ ಕೋಮು ಸೌಹಾರ್ದ ಪ್ರಶಸ್ತಿ’ಯನ್ನು ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ಸಲ್ಲಿಸಿದ ಅತ್ಯುತ್ತಮ ಸೇವೆಗಳಿಗಾಗಿ ತಮಿಳುನಾಡಿಗೆ ಸೇರಿದ ವ್ಯಕ್ತಿಗೆ ನೀಡುವ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ರೂ.25,000 ನಗದು ಬಹುಮಾನ, ಪದಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.
ಝುಬೇರ್ ಅವರು ಮೂಲತಃ ತಮಿಳುನಾಡಿನವರಾದ ಹಿನ್ನೆಲೆಯಲ್ಲಿ ಈ ವರ್ಷ ಅವರನ್ನು ತಮಿಳುನಾಡು ಸರ್ಕಾರವು ಆಯ್ಕೆ ಮಾಡಿತ್ತು.
Didn’t know this thread and multiple fact checks by my team debunking dangerous Fake News related to Migrant workers from Bihar in Tamil Nadu would be recognised by the govt.
Thank you everyone. I am overwhelmed to receive the ‘Kottai Ameer Communal Harmony Award’ from the… https://t.co/3eyt8eojnb pic.twitter.com/0qnMC1Pu37— Mohammed Zubair (@zoo_bear) January 26, 2024
ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರು ದಾಳಿಗೆ ಒಳಗಾಗುತ್ತಿದ್ದಾರೆ ಎಂದು ಬಲಪಂಥೀಯ ಸಂಘಟನೆಯ ಕೆಲವರು ಸುಳ್ಳು ಹೇಳಿಕೆ ಹರಡಿದ್ದರು. ಇದು ವೈರಲ್ ಆಗಿತ್ತು. ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ನಡೆಸಿದಾಗ ಅದು ಸುಳ್ಳು ಎಂಬುದು ಪತ್ತೆಯಾಗಿತ್ತು.
Tamil Nadu Government presents fact-checker @zoo_bear with ‘Kottai Ameer Communal Harmony Award’ for the year 2024. pic.twitter.com/NaD7WwLZaG
— Arvind Gunasekar (@arvindgunasekar) January 26, 2024
ತಮಿಳುನಾಡಿನಲ್ಲಿ ಉತ್ತರ ಭಾರತದ ಕಾರ್ಮಿಕರ ಮೇಲೆ ಹಲ್ಲೆ ಮತ್ತು ಕೊಲೆ ಮಾಡಲಾಗುತ್ತಿದೆ ಎಂಬ ವದಂತಿಗಳನ್ನು ಕಳೆದ 2023ರ ಮಾರ್ಚಿನಲ್ಲಿ ಹರಡಲಾಗಿತ್ತು. ಹಿಂಸಾಚಾರಕ್ಕೆ ಸಂಬಂಧವಿಲ್ಲದ ವಿಡಿಯೋಗಳನ್ನು ಹರಡಿದ ಮತ್ತು ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರು ದಾಳಿಗೆ ಒಳಗಾಗಿದ್ದಾರೆ ಎಂದು ತಪ್ಪಾಗಿ ಹೇಳಿದ್ದಕ್ಕಾಗಿ ಬಿಜೆಪಿ ವಕ್ತಾರ, ಹಿಂದಿ ಪತ್ರಿಕೆಗಳಾದ ದೈನಿಕ್ ಭಾಸ್ಕರ್, ಬಲಪಂಥೀಯ ಪ್ರಚಾರ ವೆಬ್ಸೈಟ್ ಆಫ್ ಇಂಡಿಯಾ, ಯೂಟ್ಯೂಬರ್ಗಳು ಮತ್ತು ಟ್ವಿಟರ್ ಬಳಕೆದಾರರ ವಿರುದ್ಧ ಪೊಲೀಸ್ ಪ್ರಕರಣಗಳನ್ನು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಮೊಹಮ್ಮದ್ ಝುಬೇರ್ ನಿರಂತರವಾಗಿ ಬಿಜೆಪಿ ಹಾಗೂ ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 2022ರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರಿಗೆ ನ್ಯಾಯಾಲಯವು ಜುಲೈ 2022ರಲ್ಲಿ ಜಾಮೀನು ನೀಡಿತ್ತು.