ತಾಪಮಾನ ಏರಿಕೆ | ಅತಿ ಹೆಚ್ಚು ಬಿಸಿ ಗಾಳಿ ಸಂಭವ; ಐಎಂಡಿ

Date:

  • ಜಗ್ತಿಯಾಲ್‌ನಲ್ಲಿ ಅತಿ ಹೆಚ್ಚು ತಾಪಮಾನ
  • ಏಪ್ರಿಲ್‌ 2ನೇ ವಾರದಲ್ಲಿ ಅಪ್ಪಳಿಸಲಿರುವ ಬಿಸಿ ಗಾಳಿ

ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ರಾಷ್ಟ್ರವಾಗುವತ್ತ ಸಾಗುತ್ತಿರುವ ಭಾರತಕ್ಕೆ ಈ ವರ್ಷ ತಾಪಮಾನ ಏರಿಕೆಯಿಂದ ಬಿಸಿ ಗಾಳಿಯ ವಾತಾವರಣ ಉಂಟಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಹೇಳಿದೆ.

ತಾಪಮಾನ ಹೆಚ್ಚಳದಿಂದ ಮುಂದಿನ ಕೆಲ ತಿಂಗಳುಗಳ ಕಾಲ ಬಿಸಿಯ ಹವೆ ಬೀಸಲಿದೆ. ಇದು ಮಾನವ ಜೀವಿತದ ಮೇಲೆ ಪರಿಣಾಮ ಬೀರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

1901ರಲ್ಲಿ ಅತಿಹೆಚ್ಚು ತಾಪಮಾನ ದಾಖಲಾಗಿತ್ತು. ಶತಮಾನದ ನಂತರ ಕಳೆದ ಫೆಬ್ರವರಿಯಲ್ಲಿ ಹೆಚ್ಚಿನ ತಾಪಮಾನ ದಾಖಲಾಗಿತ್ತು. ಈಗ ಮುಂದಿನ ದಿನಗಳಲ್ಲಿ ಬಿಸಿಯಾದ ಹವೆಯು ಬೀಸಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಈ ಕುರಿತು ಅಂತಾರಾಷ್ಟ್ರೀಯ ಹವಾಮಾನ ಬದಲಾವಣೆ ತಜ್ಞ ಪೀಟರ್‌ ಎಂಬುವರರು ಟ್ವೀಟ್‌ ಮಾಡಿದ್ದಾರೆ.

ಕಳೆದ ವರ್ಷ ಉಂಟಾದ ದಾಖಲೆಯ ಶಾಖದ ಅಲೆಗಳ ಪುನರಾವರ್ತನೆಯಾಗಲಿದೆ ಎಂದು ಐಎಂಡಿ ಕಳವಳ ವ್ಯಕ್ತಪಡಿಸಿದೆ. ಹೆಚ್ಚಿನ ತಾಪಮಾನ, ಬಿಸಿ ಗಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. “ದೇಶದಲ್ಲಿ ಈ ಬಾರಿ ಏಪ್ರಿಲ್‌ ಎರಡನೇ ವಾರದಲ್ಲಿ ಬಿಸಿ ಗಾಳಿಯು ಅಪ್ಪಳಿಸಲಿದೆ” ಎಂದು ಐಎಂಡಿ ಹೇಳಿದೆ.

ಸೋಮವಾರ (ಮಾರ್ಚ್‌ 27) ತೆಲಂಗಾಣದ ಜಗ್ತಿಯಾಲ್‌ ನಗರದಲ್ಲಿ ಅತಿ ಹೆಚ್ಚು ತಾಪಮಾನ ಅಂದರೆ 41.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇದು ಈ ವರ್ಷ ದಾಖಲಾದ ಅತಿ ಹೆಚ್ಚು ತಾಪಮಾನ. ಈ ವಾತಾವರಣ ಏಪ್ರಿಲ್‌ವರೆಗೆ ಮುಂದುವರಿಯಲಿದೆ ಎಂದು ಐಎಂಡಿ ಹೇಳಿದೆ. “50 ಡಿಗ್ರಿ ಸೆಲ್ಸಿಯಸ್‌ವರೆಗಿನ ತಾಪಮಾನ ಅಸಹನೀಯವೆನಿಸಿ ಭಾರತದ 1.4 ಕೋಟಿ ಜನರಿಗೆ ಹಾನಿ ಉಂಟು ಮಾಡಲಿದೆ” ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ನಮ್ಮ ನಿಜವಾದ ಹೋರಾಟ ಮೋದಿ ವಿರುದ್ಧ, ಸಾವರ್ಕರ್‌ ಅಲ್ಲ: ಶರದ್‌ ಪವಾರ್

ಬಿಸಿ ಗಾಳಿ ಹೆಚ್ಚಾಗುವ ಜಾಗತಿಕ ತಾಪಮಾನ ಏರಿಕೆಯಿಂದ ಯಾವುದೇ ದೇಶ ಹೊರತಾಗಿಲ್ಲ. ಆದರೆ ಭಾರತ ಇತರ ದೇಶಗಳಿಗಿಂತ ಭಿನ್ನವಾಗಿದೆ. ಭಾರತದಲ್ಲಿ ಶತಮಾನದ ಹಿಂದೆ ಕೈಗಾರಿಕಾ ಪೂರ್ವ ಅವಧಿಯಲ್ಲಿ ತಾಪಮಾನ ಏರಿಕೆಯು 1.5 ಸೆಲ್ಸಿಯಸ್‌ನಷ್ಟು ಹೆಚ್ಚಾಗಿತ್ತು. ಇದರಿಂದ ಆಗ ಬಿಸಿ ಗಾಳಿ ಉಂಟಾಗಿತ್ತು. ಈಗ ತಾಪಮಾನ ಏರಿಕೆಗೆ ಅರಣ್ಯ ನಾಶ, ಕೈಗಾರೀಕರಣದ ರೀತಿ ಹಲವು ಕಾರಣಗಳಿವೆ. ಈಗ ಮತ್ತೆ ತಾಪಮಾನ ಏರಿಕೆಯಾಗಿದೆ. ಇದರಿಂದ ಬಿಸಿ ಹವೆಯು ಎಲ್ಲೆಡೆ ಬೀಸಲಿದೆ ಎಂದು ಐಎಂಡಿ ಹೇಳಿದೆ.

ಸಿಂಥೆಸಿಸ್ ವರದಿ ಏನು ಹೇಳುತ್ತದೆ?

ಹವಾಮಾನ ಬದಲಾವಣೆ ಕುರಿತ ಅಂತಾರಾಷ್ಟ್ರೀಯ ಅಧ್ಯಯನದ ಸಿಂಥೆಸಿಸ್‌ ವರದಿ ಕೂಡ ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದೆ. ಈ ವರದಿಯು 2030ರ ವೇಳೆಗೆ ಈ ದಶಕದಲ್ಲಿ ಜಾಗತಿಕ ಭೂಮೇಲ್ಮೈ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ ಮೀರುವ ಸಾಧ್ಯತೆ ಶೇ. 50ರಷ್ಟಿದೆ. ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಲು ಸೈದ್ಧಾಂತಿಕವಾಗಿ ಸಾಧ್ಯ ಎಂದು ಹಲವು ಮಾದರಿಗಳು ತೋರಿಸುತ್ತಿವೆ. ಆದರೆ,  ಪ್ರಸ್ತುತ ವಾಯುಮಾಲಿನ್ಯದ ಪ್ರಮಾಣ, ವ್ಯಾಪ್ತಿ ಹಾಗೂ ಜಾಗತಿಕ ಕ್ರಿಯೆಯ ವೇಗವು ತಾಪಮಾನ ಏರಿಕೆಗೆ ಪೂರಕವಾಗಿವೆ ಎಂದಿದೆ.

ಕೈಗಾರಿಕಾ ವಲಯದಿಂದಲೂ 1.1 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಿದ್ದು, ಸುಮಾರು 1.07 ಡಿಗ್ರಿ ಸೆಲ್ಸಿಯಸ್ ಮಾನವ ಚಟುವಟಿಕೆಗಳಿಂದ ಕೊಡುಗೆಯಾಗಿದೆ ಎಂದು ಈ ವರದಿ ಹೇಳಿದೆ.

1850 ಮತ್ತು 2019ರ ನಡುವೆ ಪ್ರಪಂಚವು ಸುಮಾರು 2,400 ಶತಕೋಟಿ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸಿದೆ. ಅದರಲ್ಲಿ 1,000 ಶತಕೋಟಿ ಟನ್‌ಗಳಿಗಿಂತ ಸ್ವಲ್ಪ ಹೆಚ್ಚು ಅಥವಾ ಸುಮಾರು ಶೇ. 42ರಷ್ಟು 1990ರ ನಂತರ ಹೊರಸೂಸಲ್ಪಟ್ಟಿದೆ ಎಂದು ಅದು ಹೇಳಿದೆ.

1.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ಉಳಿಸಿಕೊಳ್ಳಲು ಶೇ. 50ರಷ್ಟು ಅವಕಾಶ ಹೊಂದಲು, 2020ರ ನಂತರ ಪ್ರಪಂಚವು 500 ಶತಕೋಟಿ ಟನ್‌ಗಳಿಗಿಂತ ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸುವಂತೆ ನೋಡಿಕೊಳ್ಳಬೇಕಾಗಿದೆ ಎಂದು ವರದಿ ಹೇಳಿದೆ. 2019ರಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ 59 ಬಿಲಿಯನ್ ಟನ್‌ಗಳಷ್ಟಿರುವುದು ದಾಖಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೊ. ಅರ್ನಾಲ್ಡ್ ಡಿಕ್ಸ್ : ಉತ್ತರಾಖಂಡ ಸುರಂಗ ರಕ್ಷಣಾ ಕಾರ್ಯಾಚರಣೆಯ ಹಿಂದಿನ ಶಕ್ತಿ

ಉತ್ತರಾಖಂಡನ ಸಿಲ್ಕ್ಯಾರಾ ಸುರಂಗದಲ್ಲಿ 17 ದಿನಗಳ ಕಾಲ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು...

ತೆಲಂಗಾಣ ಚುನಾವಣೆ | ಬೆಳಗ್ಗೆ 11ರವರೆಗೆ ಶೇ.27ರಷ್ಟು ಹಕ್ಕು ಚಲಾಯಿಸಿದ ಮತದಾರರು

ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಘಡ, ಮಿಝೋರಾಂ, ರಾಜಸ್ಥಾನ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭಾ...

ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಪಯಣ ಕುರಿತ ಪುಸ್ತಕ ಬಿಡುಗಡೆ ಮಾಡಿದ ಸೋನಿಯಾ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ರಾಜಕೀಯದಲ್ಲಿ 50 ವರ್ಷಗಳನ್ನು...

ಉತ್ತರ ಪ್ರದೇಶ : ನಲ್ಲಿ ನೀರು ಕುಡಿದಿದ್ದಕ್ಕೆ ದಲಿತ ಯುವಕನ ಹತ್ಯೆ

ಸಾರ್ವಜನಿಕ ನಲ್ಲಿ ನೀರು ಕುಡಿದ ಕಾರಣಕ್ಕಾಗಿ ದಲಿತ ಸಮುದಾಯದ ಯುವಕನೊಬ್ಬನನ್ನು ಅಮಾನುಷವಾಗಿ...