ಅಪರೂಪದ ಅದ್ಭುತ ಕ್ರಿಕೆಟಿಗ ಧೋನಿ ನಿವೃತ್ತಿ ಘೋಷಿಸಲಿದ್ದಾರೆಯೇ?

Date:

Advertisements
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಎಂದಾಕ್ಷಣ ಎಲ್ಲರೂ ಹೇಳುವ ಮಾತು- ಸೌಮ್ಯ ಸ್ವಭಾವದ, ಅಪಾರ ತಾಳ್ಮೆಯ, ಸಿಕ್ಕಾಪಟ್ಟೆ ಶಿಸ್ತಿನ, ವಿವಾದಗಳಿಲ್ಲದ, ವಿಪರೀತಕ್ಕೆ ಹೋಗದ ಅಪ್ರತಿಮ ಕ್ರಿಕೆಟಿಗ. ಐಪಿಎಲ್ ನಲ್ಲಿ ಚೆನ್ನೈ ತಂಡ ಗೆಲ್ಲಿಸಿ ಕ್ರಿಕೆಟ್ ಆಟಕ್ಕೆ ವಿದಾಯ ಹೇಳುತ್ತಿದ್ದಾರೆಯೇ?

ಕ್ರಿಕೆಟ್ ಇವತ್ತು ಕೇವಲ ಆಟವಾಗಿ ಉಳಿದಿಲ್ಲ. ಕೋಟ್ಯಂತರ ರೂಪಾಯಿಗಳ ವಹಿವಾಟುಳ್ಳ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಕ್ರಿಕೆಟ್ ಆಟಗಾರ ರನ್ ಹೊಳೆ ಹರಿಸುವ, ವಿಕೆಟ್ ಉರುಳಿಸುವ ಮೈದಾನದ ಮೆಷಿನ್ ಆಗಿದ್ದಾನೆ. ಹಣದ ದಾಹಕ್ಕೆ, ಖ್ಯಾತಿಯ ಗೀಳಿಗೆ ಒಳಗಾಗಿದ್ದಾನೆ. ಸಂಯಮವೇ ಸಂಸ್ಕೃತಿ ಎಂಬುದನ್ನು ಮರೆತ ಪ್ರೇಕ್ಷಕರು ಹುಚ್ಚು ಅಭಿಮಾನಿಗಳಾಗಿ, ದೇಶಪ್ರೇಮಿಗಳಾಗಿ ರೂಪಾಂತರಗೊಂಡಿದ್ದಾರೆ. ಗೆದ್ದರೆ ಹೊಗಳುವ, ಸೋತರೆ ಕೆರಳುವ ಜನ, ಅದು ಆಟ, ಅಲ್ಲಿ ಸೋಲು-ಗೆಲುವು ಸಾಮಾನ್ಯ ಎನ್ನುವುದನ್ನೇ ಮರೆತಿದ್ದಾರೆ. ಇಂತಹ ಒತ್ತಡದಲ್ಲಿ ಆಡಬೇಕಾದ ಆಟಗಾರ, ಆಟದ ಸೊಗಸನ್ನು, ಕಲಾತ್ಮಕತೆಯನ್ನು ಕಡೆಗಣಿಸಿ, ತಂತ್ರಗಾರಿಕೆಗೆ ತಲೆಬಾಗಿದ್ದಾನೆ. ಪ್ರೇಕ್ಷಕರು, ಆಯ್ಕೆದಾರರು, ಜಾಹೀರಾತುದಾರರು, ಬೆಟ್ಟಿಂಗ್ ಕಟ್ಟುವವರ ಒತ್ತಡಕ್ಕೆ ಒಳಗಾಗಿ ಜೀವವನ್ನು ಒತ್ತೆಯಿಟ್ಟು ಆಡುತ್ತಿದ್ದಾನೆ.

ಇಷ್ಟೆಲ್ಲ ಹಳವಂಡಗಳನ್ನು ಒಳಗೊಂಡ ಅಬ್ಬರದ ಐಪಿಎಲ್ ಜಾತ್ರೆ ಮುಗಿದಿದೆ. ಬಾರ್, ಕ್ಲಬ್, ಪಬ್‌ಗಳಲ್ಲಿ ಸದ್ಯಕ್ಕೆ ಸದ್ದಡಗಿದೆ. ಹಾಗೆಯೇ ಈ ಬಾರಿಯ ಐಪಿಎಲ್‌ನಲ್ಲಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ- ಗುಜರಾತಿನ ಅಮಿತ್ ಶಾ ಪುತ್ರ ಬಿಸಿಸಿಐನ ಕಾರ್ಯದರ್ಶಿ ಜಯ್ ಶಾನ ಕೃಪಾಶೀರ್ವಾದವಿದ್ದ ತಂಡ- ಫೈನಲ್‌ನಲ್ಲಿ ಉತ್ತಮವಾಗಿ ಆಡಿದರೂ, ಅನುಭವಿ ಆಟಗಾರ ಧೋನಿ ತಂಡದ ಆಟದ ಮುಂದೆ ತಲೆಬಾಗಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಎಲ್ಲರ ಚಿತ್ತ ರಾಂಚಿಯ 42ರ ಹರೆಯದ ಮಹೇಂದ್ರ ಸಿಂಗ್ ಧೋನಿಯತ್ತಲೇ ಇತ್ತು. ಇದೇ ಅವರ ಕೊನೆ ಐಪಿಎಲ್ ಆಟವಾಗಲಿದೆ, ನಿವೃತ್ತಿ ಘೋಷಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಹಾಗಾಗಿ ಐಪಿಎಲ್‌ನಿಂದ ನಿರ್ಗಮಿಸುವ ಮುನ್ನ, ತನ್ನ ತಂಡಕ್ಕೆ ಜಯ ತಂದುಕೊಡಬೇಕೆಂಬ ಮಹದಾಸೆ ಮಹೇಂದ್ರ ಸಿಂಗ್ ಧೋನಿಗಿದ್ದಂತೆ ಕಾಣುತ್ತಿತ್ತು. ಅದಕ್ಕಾಗಿ ಅವರು ತಮ್ಮ ವಯಸ್ಸನ್ನು ಬದಿಗಿಟ್ಟು ಹರೆಯದ ಹುಡುಗರೊಂದಿಗೆ ಹುಡುಗರಾಗಿ ಆಡಿ ತಂಡವನ್ನು ಫೈನಲ್‌ವರೆಗೆ ತಂದಿದ್ದರು.

Advertisements

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ 215 ರನ್ ಗಳ ಗುರಿ ನೀಡಿತ್ತು. ಸಾಯಿ ಸುದರ್ಶನ್ ಅತ್ಯುತ್ತಮವಾಗಿ ಆಡಿ, ತಂಡವನ್ನು ಸುಭದ್ರ ಸ್ಥಿತಿಯಲ್ಲಿ ನಿಲ್ಲಿಸಿದ್ದರು. ಆದರೆ ಅಪಾರ ಅನುಭವಗಳ ಧೋನಿ, ತನ್ನ ತಂಡದ ಆಟಗಾರರಿಗೆ ತಿಳಿವಳಿಕೆ ತುಂಬಿದರು ಮತ್ತು ನಂಬಿದರು. ಅವರು ಧೋನಿಗಾಗಿ ಆಡಿದರು ಮತ್ತು ಗೆದ್ದು ಧೋನಿಗೆ ಸಮರ್ಪಿಸಿದರು. ಕೊನೆಯ ಓವರ್‍‌ನ ಎರಡು ಎಸೆತಗಳಲ್ಲಿ ಅಜಯ್ ಜಡೇಜಾ ಎಂಬ ಆಲ್ ರೌಂಡರ್, ಒಂದು ಸಿಕ್ಸರ್ ಮತ್ತು ಒಂದು ಫೋರ್ ಬಾರಿಸುವ ಮೂಲಕ ತಂಡಕ್ಕೆ ಜಯ ತಂದಿತ್ತರು. ‍ಆ ಮೂಲಕ ಗುಜರಾತ್-ಚೆನ್ನೈ ನಡುವಿನ ಆ ಫೈನಲ್ ಪಂದ್ಯ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಬಹುಕಾಲ ಉಳಿಯುವಂತೆ ಮಾಡಿದರು.

ಇದನ್ನು ಓದಿದ್ದೀರಾ?: ಹಿಜಾಬು ಮತ್ತು ಕುಸ್ತಿ ಅಖಾಡದಲ್ಲಿ ಮನುವಾದಿ ಮಸಲತ್ತು

ಧೋನಿ ಎಂಬ ಆಟಗಾರನೇ ಬೇರೆ. ಅವರ ಆಟವೂ ಬೇರೆ. ಕೀಪಿಂಗ್‌ನಲ್ಲಿ ಅವರನ್ನು ಮೀರಿಸುವ ಮತ್ತೊಬ್ಬ ಆಟಗಾರನಿಲ್ಲ. ಅವರ ಸ್ಟಂಪ್ ಟೈಮಿಂಗ್ ಅಂತೂ ಅದ್ಭುತ. ಇನ್ನು ಬ್ಯಾಟಿಂಗ್ ಶೈಲಿ- ಅದರಲ್ಲೂ ಅವರ ಹೆಲಿಕಾಪ್ಟರ್ ಶಾಟ್ ಅಂತೂ ಸೂಪರ್‍ಬ್‌. ಧೋನಿಯವರ ಕೀಪಿಂಗ್ ಶೈಲಿಯಲ್ಲಿ ಸೈಯದ್ ಕಿರ್ಮಾನಿ, ಜೆಫ್ ಡುಜೋನ್, ಆಡಂ ಗಿಲ್‌ಕ್ರಿಸ್ಟ್- ಮೂವರ ಮಿಶ್ರಣವಿದೆ. ಆದರೆ ಸ್ಟಂಪಿಂಗ್ ನಲ್ಲಿ, ಆ ಟೈಮಿಂಗ್ ನಲ್ಲಿ ಧೋನಿಗೆ ಧೋನಿಯೇ ಸಾಟಿ. ಐಪಿಎಲ್‌ ಫೈನಲ್‌ನಲ್ಲೂ ಸ್ಟಂಪಿಂಗ್ ಕೈಚಳಕ ತೋರಿದ ಮಹಿ, ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್‌ರನ್ನು ಕಣ್ಮುಚ್ಚಿ ಬಿಡುವುದರೊಳಗೆ ಸ್ಪಂಪ್ ಮಾಡಿ, ಪೆವಿಲಿಯನ್‌ಗೆ ಕಳಿಸಿದ್ದರು. ಇದು ಅವರ ಐಪಿಎಲ್‌ನ 300ನೇ ಸ್ಟಂಪಿಂಗ್ ಆಗಿ ದಾಖಲೆ ಬರೆದಿದೆ. ಅವರ ಒಂದೊಂದು ಸ್ಟಂಪಿಂಗ್ ಕೂಡ ದಾಖಲೆಗೆ ಅರ್ಹವಾದ, ಕ್ರಿಕೆಟ್ ಪ್ರೇಮಿಗಳ ಖುಷಿಗೆ ಕಾರಣವಾದ, ಅಧ್ಯಯನಕ್ಕೆ ಯೋಗ್ಯವಾದವು.

ಧೋನಿ ಎಲ್ಲರಂತಲ್ಲ. ತಮ್ಮ ಆಟದಿಂದ ತಂಡ ಗೆದ್ದರೂ ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದಿಲ್ಲ. ಮೆರೆದಾಡಿದ್ದಂತೂ ಇಲ್ಲವೇ ಇಲ್ಲ. ಅವರ ಸಂಯಮ ಮತ್ತು ತಣ್ಣನೆ ವ್ಯಕ್ತಿತ್ವ ಮಿಕ್ಕವರಿಗೆ ಮಾದರಿಯಾಗುವಂಥದ್ದು. ಧೋನಿಗೆ ಕ್ರಿಕೆಟ್ ಲೋಕದ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಭಾರತ ಸರಕಾರ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಸಿಗಬಾರದಷ್ಟು ದುಡ್ಡು ಸಿಕ್ಕಿದೆ. ಆದರೆ ಧೋನಿ ಅವೆಲ್ಲವನ್ನು ಬದಿಗಿಟ್ಟವರು; ಪ್ರಚಾರಕ್ಕೆ, ಪ್ರಶಸ್ತಿಗಳಿಗೆ, ಸನ್ಮಾನಗಳಿಗೆ ಆಸೆಪಡದವರು.

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಎಂದಾಕ್ಷಣ ಎಲ್ಲರೂ ಹೇಳುವ ಮಾತು- ಸೌಮ್ಯ ಸ್ವಭಾವದ, ಅಪಾರ ತಾಳ್ಮೆಯ, ಸಿಕ್ಕಾಪಟ್ಟೆ ಶಿಸ್ತಿನ, ವಿವಾದಗಳಿಲ್ಲದ, ವಿಪರೀತಕ್ಕೆ ಹೋಗದ ಅಪ್ರತಿಮ ಕ್ರಿಕೆಟಿಗ. ಆತ್ಮೀಯತೆಗೂ, ಕಲಾತ್ಮಕ ಶೈಲಿಯ ಹೊಡೆತಕ್ಕೂ ಹೆಸರಾದ, ತಂಡಕ್ಕಾಗಿ ತುಡಿಯುವ, ದೇಶಕ್ಕಾಗಿ ಆಡುವ, ಜವಾಬ್ದಾರಿಯನ್ನೆಂದೂ ಮರೆಯದ ಆಟಗಾರ. ಗೆದ್ದಾಗ ಮೆರೆಯದ, ಸೋತಾಗ ಸೊರಗದ ಸ್ಥಿತಪ್ರಜ್ಞ. ಮೈದಾನದಿಂದ ಹೊರಗೆ, ಸಾಮಾಜಿಕ ಬದುಕಿನಲ್ಲೂ ಅದೇ ಸಂಯಮದ ನಡೆ-ನುಡಿಗೆ ಹೆಸರಾದವರು. ತಾನೊಬ್ಬ ಸ್ಟಾರ್ ಎಂಬ ಅಹಂನಿಂದ ಆಚೆಗೆ ನಿಂತವರು.

ಹಾಗಾಗಿ ಧೋನಿ ಆಟ ಮತ್ತು ಅವರು ಮೈಗೂಡಿಸಿಕೊಂಡ ವ್ಯಕ್ತಿತ್ವವೇ ಅವರನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿದೆ. ಅವರು ಆಡಲಿ, ಆಡದಿರಲಿ- ಅವರು ಎಂದೆಂದಿಗೂ ಕ್ರಿಕೆಟ್ ಲೋಕದ ಧ್ರುವತಾರೆಯಾಗಿ ಮಿನುಗಲಿದ್ದಾರೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X