ಹಿಜಾಬು ಮತ್ತು ಕುಸ್ತಿ ಅಖಾಡದಲ್ಲಿ ಮನುವಾದಿ ಮಸಲತ್ತು

Date:

  • ಲೈಂಗಿಕ ದೌರ್ಜನ್ಯದ ವಿರುದ್ಧ ಕುಸ್ತಿಪಟುಗಳ ಹೋರಾಟ
  • ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿ ಪಟುಗಳು

ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ ಭೂಷಣ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೊಸ ಸಂಸತ್‌ ಭವನದ ಎದುರು ಭಾನುವಾರ ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾದ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ದೌರ್ಜನ್ಯದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ದೆಹಲಿ ಪೊಲೀಸರ ವರ್ತನೆಗೆ ದೇಶವ್ಯಾಪಿ ಖಂಡನೆ ವ್ಯಕ್ತವಾಗುತ್ತಿದೆ. ಇದೇ ಹೊತ್ತಿನಲ್ಲಿ ಬಹುಭಾಷಾ ನಟ ಕಿಶೋರ್‌, ಹೋರಾಟನಿರತ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ದೀರ್ಘ ಲೇಖನವನ್ನು ಹಂಚಿಕೊಂಡಿದ್ದಾರೆ.

ಕಿಶೋರ್‌ ಬಹಿರಂಗ ಪತ್ರದ ಸಾರಾಂಶ

ಯಾವ ಮುಸಲ್ಮಾನ ಮಹಿಳೆ, ಪುರುಷ ಪ್ರಾಬಲ್ಯದ ಸಂಕೇತವಾದ ಹಿಜಾಬನ್ನು ವಿರೋಧಿಸಿಯೂ ವಿರೋಧಿಸದಂತೆ ಮೆಲ್ಲ ಮೆಲ್ಲನೆ ಅದರಿಂದ ಸ್ವತಂತ್ರಳಾಗಿ ಶಿಕ್ಷಿತಳು, ಸಶಕ್ತಳಾಗುತ್ತಿದ್ದಳೊ ಅವಳನ್ನು ಅಡ್ಡಗಟ್ಟಿ, ಭಯ ಹುಟ್ಟಿಸಿ ಆಕೆ ತನ್ನ ಆತ್ಮರಕ್ಷಣೆಗಾಗಿ, ತನ್ನ ಅಸ್ಮಿತೆಯ ಹುಡುಕಾಟದಲ್ಲಿ, ತನ್ನನ್ನು ಬಂಧನದಲ್ಲಿಟ್ಟಿದ್ದ ಅದೇ ಹಿಜಾಬಿನ ಮೊರೆ ಹೋಗುವ ಹಾಗೆ ಮಾಡಿದ ಮನುವಾದಿಗಳ ಹಿಜಾಬು ಬ್ಯಾನ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉರುಳಿಸಿತ್ತು.

ಒಂದು ಹೆಣ್ಣು ಶಿಕ್ಷಣ ಪಡೆದರೆ ಅವಳ ಮುಂದಿನ ಇಡೀ ಪೀಳಿಗೆ ಶಿಕ್ಷಣ ಪಡೆಯುತ್ತದೆ. ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಇಂದೂ ಸಹ ನೂರರಲ್ಲಿ 14 ಮುಸ್ಲಿಂ ಹೆಣ್ಣು ಮಕ್ಕಳು ಮಾತ್ರ ಕಾಲೇಜು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಇಂಥ ಕಾಲದಲ್ಲಿ ಅದನ್ನೂ ತಡೆದು ಬಿಟ್ಟರೆ? ಮುಸಲ್ಮಾನರನ್ನು ಮುಖ್ಯವಾಹಿನಿಯಿಂದ ಹೊರಗಿಡುವ ಷಡ್ಯಂತ್ರ ಯಶಸ್ವಿಯಾದಂತೆಯೇ ಸರಿ.

ತನ್ನ ಮನೆ, ಸಂಬಂಧಿಕರು, ಮತ, ಸಂಪ್ರದಾಯವಾದ ಎಲ್ಲವನ್ನೂ ದಾಟಿಬಂದು ಕೊನೆಯ ಹಂತದಲ್ಲಿ ಶಿಕ್ಷಣ ವಂಚಿತಳಾಗುವುದಕ್ಕೆ ಕಾರಣ ಕೂಡ ಸ್ವಯಂ ಅವಳೇ ಆಗಿಬಿಟ್ಟರೆ? ದೇಶದ ಮುಖ್ಯವಾಹಿನಿಯಿಂದ ಮುಸ್ಲಿಂ ಮಹಿಳೆ ಮತ್ತು ಜನಾಂಗ ಎರಡೂ ಹೊರಗೆ. ಅದೂ ತನ್ನ ಕಾಲ ಮೇಲೆ ತಾನೇ ಕೊಡಲಿ ಹಾಕಿಕೊಂಡು. ಇದಲ್ಲವೇ ʼಮಾಸ್ಟರ್ ಸ್ಟ್ರೋಕ್‌ʼ?

ಜಂತರ್ ಮಂತರ್‌ನಲ್ಲಿ ಲೈಂಗಿಕ ದೌರ್ಜನದ ವಿರುದ್ಧ ಧರಣಿ ಕುಳಿತ ಹೆಣ್ಣುಮಕ್ಕಳು, ಅತ್ಯಾಚಾರಿಯ ಹೂಂಕಾರ, ಆಗಾಗ ಆ ಹೆಣ್ಣುಮಕ್ಕಳ ಮೇಲೇ ತನ್ನ ಶಕ್ತಿ ತೋರಿಸುವ ನರಸತ್ತ ಪೊಲೀಸ್, ಕಮಕ್ ಕಿಮಕ್ ಅನ್ನದೇ ಅತ್ಯಾಚಾರಿಗೆ ಪರೋಕ್ಷ ಬೆಂಬಲ ಕೊಟ್ಟು ಕುಳಿತ ಏಕವ್ಯಕ್ತಿ ಸರ್ಕಾರವಾದ ಪ್ರಧಾನಿ.

ಆಗ ಹೊರಟದ್ದು, ವಿಶ್ವಮಟ್ಟದ ತಾರೆಯರಿಗೇ ಹೀಗಾದರೆ ನಮ್ಮಂಥ ಸಾಮಾನ್ಯರ ಸ್ಥಿತಿ ಹೇಗೆ ಎಂಬ ಜನಸಾಮಾನ್ಯರ ಉದ್ಗಾರ. ಶತಮಾನಗಳ ಕಾಲ ಹೋರಾಡಿ ವಿಶ್ವದ ಉತ್ತುಂಗಕ್ಕೇರಿದ ಹೆಣ್ಣು ಮಕ್ಕಳನ್ನು, ಅವರ ಬೆಂಗಾವಲಾಗಿ ನಿಂತ ದೇಶದ ತಾಯಿ ತಂದೆಯರೇ ಮತ್ತೆ ಮನುವಿನ ಕಲ್ಪನೆಯ ನಾಲ್ಕು ಗೋಡೆಗಳ ಕೂಪಕ್ಕೆ ತಳ್ಳಲು ಇಷ್ಟು ಸಾಲದೇ?

ಭಾರತಾಂಬೆ ಅಂದು ಹಿಜಾಬಿನಲ್ಲಿ ಇಂದು ಜಂತರ್ ಮಂತರ್ ಅಖಾಡದಲ್ಲಿ ಮನುವಾದಿಗಳಿಗೆ ಸವಾಲೆಸೆಯುತ್ತಲೇ ಬಂದಿದ್ದಾಳೆ.

– ಕಿಶೋರ್‌ ಕುಮಾರ್‌

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜನ ಪಾಪ್‌ಕಾರ್ನ್ ಬೆಲೆಗೆ ಹೆದರಿ ಮಲ್ಟಿಫ್ಲೆಕ್ಸ್, ಥಿಯೇಟರ್‌ಗಳಿಗೆ ಬರುತ್ತಿಲ್ಲವೇ?

ತೆಲುಗು ಸಿನಿಮಾ ನಿರ್ದೇಶಕ ತೇಜಾ ಇತ್ತೀಚೆಗೆ ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಒಂದು...

ದಸರಾ | ನನಗೆ ಸಿಕ್ಕಿದ್ದು ಸಾಮಾಜಿಕ ಕಲಾ ನ್ಯಾಯ: ಹಂಸಲೇಖ

ಮೈಸೂರು ದಸರಾ ಉದ್ಘಾಟನೆಗೆ ಈ ಬಾರಿ ನನ್ನನ್ನು ಸರ್ಕಾರ ಆಯ್ಕೆ ಮಾಡಿದೆ....

ಶಾರುಖ್ ಖಾನ್‌ ನಟಿಸಿದ ‘ಜವಾನ್’ ಸಿನಿಮಾ ಯಾಕೆ ರಾಜಕೀಯವಾಗಿ ಚರ್ಚೆಯಲ್ಲಿದೆ?

ವಿಶ್ವದಾದ್ಯಂತ ಮೊದಲ ದಿನ 129.6 ಕೋಟಿ ಗಳಿಸಿದ ಶಾರೂಖ್ ಖಾನ್ ನಟನೆಯ...