ನರೇಂದ್ರ ಮೋದಿಯವರನ್ನು ಹೊಗಳುವ ಭರದಲ್ಲಿ ಮಾನವೀಯತೆ ಮರೆತ ಶೋಭಾ ಕರಂದ್ಲಾಜೆ

Date:

Advertisements
ಮಣಿಪುರದಲ್ಲಿ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ ಎರಡು ಸಮುದಾಯಗಳ ನಡುವಿನ ಗಲಭೆ, ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಶ್ರಮ ವಹಿಸದ ಮೋದಿ ಸರ್ಕಾರ ಮತ್ತು ಮಣಿಪುರದ ಬಿಜೆಪಿ ಸರ್ಕಾರ ಜಗತ್ತಿನ ಮುಂದೆ ಬೆತ್ತಲಾಗಿವೆ. ಆದರೂ ಒಬ್ಬ ಸ್ತ್ರೀಯಾಗಿ ಮಣಿಪುರದ ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆಯನ್ನು ಖಂಡಿಸಲಾಗದ ಸಚಿವೆ ಶೋಭಾ ಕರಂದ್ಲಾಜೆ ನಮ್ಮ ತುಳುನಾಡಿನವರು ಎಂದು ಹೇಳಲು ನಾಚಿಕೆಯಾಗುತ್ತಿದೆ

ಮಣಿಪುರದಲ್ಲಿ ನಡೆಯುತ್ತಾ ಇರುವ ಗಲಭೆ ಮೋದಿಯವರ ಹೆಸರು ಕೆಡಿಸಲು ನಡೆಸುತ್ತಾ ಇರುವುದು” ಎಂದು ಸಚಿವೆ ಶೋಭಾ ಹೇಳಿರುವುದು ನೋಡಿ ಸಖೇದಾಶ್ಚರ್ಯವಾಯಿತು. ಒಮ್ಮೆಗೆ ಅದನ್ನು ಒಪ್ಪಿದರೂ ಮೋದಿ‌ ಹೆಸರು ಕೆಡಿಸಲು ಮಾಡುವ ಗಲಭೆಯನ್ನು ನಿಲ್ಲಿಸಲು ಮೋದಿಗೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆಯನ್ನೂ ಅವರಿಗೆ ಕೇಳಬೇಕಾಗುತ್ತೆ. ಅದಕ್ಕೆ ಅವರು ಉತ್ತರ ನೀಡಲೇಬೇಕು.

ಹೆಣ್ಣುಮಕ್ಕಳನ್ನು ಸಾರ್ವಜನಿಕರ ಮುಂದೆ ಬೆತ್ತಲೆ ಮಾಡಿ‌, ಅವರ ಅಂಗಗಳ ಮೇಲೆಲ್ಲಾ ಅಸಭ್ಯವಾಗಿ ಕೈಯಾಡಿಸುತ್ತಾ ಮೆರವಣಿಗೆ ಮಾಡಿದ ಘಟನೆಯನ್ನು ಇಡೀ ವಿಶ್ವ ಒಕ್ಕೊರಲಿನಿಂದ ಖಂಡಿಸುತ್ತಾ ಇರುವಾಗ ಬಿಜೆಪಿ ಮತ್ತು ಶೋಭಾ ಕರಂದ್ಲಾಜೆಯಂತಹ ಹಲವರು ಇದನ್ನು‌ ಬಹು ಲಘುವಾಗಿ ಸ್ವೀಕರಿಸಿದ್ದು ನಾಚಿಕೆಗೇಡು. ಒಬ್ಬ ಮಹಿಳೆಯಾಗಿ ಆ ಇಬ್ಬರು ನಗ್ನರಾದ ಮಹಿಳೆಯರ ಮಾನಸಿಕ ವೇದನೆಯನ್ನು ಅರಿತುಕೊಳ್ಳದೇ ಇರುವುದು ಶೋಭಾರವರ ಅಸಂವೇದನೀಯ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ಯಾವುದೇ ಸರಕಾರಕ್ಕೆ ರಾಜ್ಯದಲ್ಲಿ‌ ಕಾನೂನು ಸುವ್ಯವಸ್ಥೆ ಇಂದಿನ ದಿನಗಳಲ್ಲಿ ಕಾಪಾಡಲು ಸಾಧ್ಯ ಇಲ್ಲ ಎಂಬುದು ನಂಬಲಾಗುವುದಿಲ್ಲ. ಇಷ್ಟೆಲ್ಲಾ ತಂತ್ರಜ್ಞಾನ ಇದ್ದಾಗ ಮನಸ್ಸು ‌ಮಾಡಿದರೆ ಕೂಡಲೇ ಶಾಂತಿ‌ ಸ್ಥಾಪನೆ ಮಾಡಬಹುದು. ಇಲ್ಲಿ ಹಿಂದೆ ಗುಜರಾತ್ ದಂಗೆ ಆದಾಗ ಯಾವ ರೀತಿ ಅಂದಿನ ಮುಖ್ಯಮಂತ್ರಿ ಜಾಣ‌ಕುರುಡುತನ ಹಾಗೂ ಕಿವುಡುತನ ತೋರಿದರೋ‌ ಅದೇ ರೀತಿ ಅದೇ‌ ಮೋದಿ ಪ್ರಧಾನಿ ಸ್ಥಾನದಲ್ಲಿ ಕೂತು ವರ್ತಿಸುತ್ತಿದ್ದಾರೆ. ಮಣಿಪುರದ ಮುಖ್ಯಮಂತ್ರಿಯೂ ಅದನ್ನೇ ಮಾಡುತ್ತಾ ಇದ್ದಾರೆ. ಶೋಭಾ‌‌ ಆದಿಯಾಗಿ ಬಿಜೆಪಿಯ‌ ಎಲ್ಲಾ ಐ ಟಿ‌ ಸೆಲ್ ನ ವೀರಾಧಿವೀರರು ನಿತ್ಯ ನಿರಂತರ ಮಣಿಪುರದ‌ ಬಗ್ಗೆ ಹೊಸ ಹೊಸ ಸುಳ್ಳುಗಳನ್ನು‌ ಸಂಶೋಧಿಸುವಲ್ಲಿ ಹಾಗೂ ಹರಡುವಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದಾರೆ.

ಮಾನವೀಯತೆಯ ಮೌಲ್ಯಗಳನ್ನು ಅರಿಯದ ಭಾಜಪಾದ ನಾಯಕರು ಇವತ್ತು ಮಣಿಪುರದಲ್ಲಿ ನಡೆಯುತ್ತಾ ಇರುವ ಕೊಲೆ, ಅತ್ಯಾಚಾರ, ದೊಂಬಿ, ಹಲ್ಲೆ ಇವೆಲ್ಲವುದಕ್ಕೆ ಮೌನವಾಗಿ ಬೆಂಬಲ ಸೂಚಿಸುತ್ತಾ ಇದ್ದಾರೆ.

1683414560 new project 2023 05 07t043757 638

ಶೋಭಾ‌ರವರು ಅಧಿಕಾರ‌ ಶಾಶ್ವತ ಅಲ್ಲ ಎಂಬ ಸತ್ಯಾಂಶ ತಿಳಿದು, ಕೂಡಲೇ ಮೋದಿಯವರ ಭಜನೆ ನಿಲ್ಲಿಸಿ ಜನಪರ ನಿಲುವನ್ನು ವ್ಯಕ್ತಪಡಿಸಬೇಕು. ಏಕೆಂದರೆ ಕರ್ನಾಟಕದ ಜನ ಮೊನ್ನೆಯಷ್ಟೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಪಾಳಮೋಕ್ಷ ಮಾಡಿದ್ದಾರೆ. ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್,‌ ಪ್ರತಾಪ್‌ ಸಿಂಹ, ತೇಜಸ್ವಿ ‌ಸೂರ್ಯ‌ ಇನ್ನಿತರ ಸಂಸದರಿಗೆ ಮನೆ ಬಾಗಿಲನ್ನು ತೋರಿಸಲು‌ ಮತದಾರರು‌ ಸಜ್ಜಾಗಿದ್ದಾರೆ. ಇಂತಹ ಹೇಳಿಕೆಗಳು ಅವರ ಸೋಲಿನ ಅಂತರವನ್ನು‌ ಇನ್ನೂ‌ ಜಾಸ್ತಿ‌ ಮಾಡುತ್ತವೆ, ಹೊರತು‌‌ ಪಡಿಸಿ ಯಾವುದೇ ರಾಜಕೀಯ ‌ಲಾಭ‌‌ ತರುವುದಿಲ್ಲ ಎಂದು ಶೋಭಾ ಅರ್ಥಮಾಡಿಕೊಂಡರೆ ಒಳಿತು.

ಮೊನ್ನೆ ಮಣಿಪುರದಲ್ಲಿ‌ ಗಲಭೆ‌ ಪ್ರಾರಂಭವಾದಾಗ ಇದೇ ಶೋಭಾ ಮತ್ತು ರಾಜ್ಯದ ಬಿಜೆಪಿ ಮುಖಂಡರು ಇದೇ ಮೋದಿಯವರಿಗೆ ಪುಷ್ಪವರ್ಷ ಮಾಡುವುದರಲ್ಲಿ‌‌ ಮಗ್ನರಾಗಿದ್ದರು. ರಾಜ್ಯದ ಪುಣ್ಯ, ಮೋದಿಯವರ ಅಪಾರ ಅಬ್ಬರದ‌ ಪ್ರಚಾರದ ಬಳಿಕವೂ ಬಿಜೆಪಿ‌‌ ಹೀನಾಯವಾಗಿ ಸೋತಿತು. ಮಣಿಪುರದಲ್ಲಿ ಶಾಂತಿ‌ ನೆಲೆಸಬೇಕಾದರೆ ಬಿಜೆಪಿ ವಿರುದ್ಧ ‌ದೇಶದಾದ್ಯಂತ ಅಲೆ ಏಳಬೇಕು. ಅದನ್ನು ಶೀಘ್ರದಲ್ಲೇ ಆಶಿಸೋಣ‌.

Advertisements
ಅಮೃತ್ ಶೆಣೈ
ಅಮೃತ್‌ ಶೆಣೈ
+ posts

ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಅಮೃತ್‌ ಶೆಣೈ
ಅಮೃತ್‌ ಶೆಣೈ
ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

4 COMMENTS

  1. ನಾಲಿಗೆಗೆ ಮತ್ತು ಮೆದುಳಿಗೆ ಕನೆಕ್ಷನ್ ಇಲ್ಲದವರು,,, ಮಹಿಳೆಯಾಗಿ ಮಹಿಳಾ ಸ್ವಾಭಿಮಾನ ಗೌರವದ ಪ್ರಜ್ಞೆ ಬೇಡವಾ

    • ಕಾಂಗ್ರೆಸ್ಸ್ನ ಗಂಜಿ ಗಿರಾಕಿಗಳು ಲೂಟಿ ಕೋರ EAST I.N.D.I.A ಕಂಪನಿಯವರು ಆಡಳಿತ ನಡೆಸುತ್ತಿರುವ ರಾಜಸ್ತನ, ಚತ್ತೀಸ್ ಗಡ ಮತ್ತು ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅನೈತಿಕತೆ,ಕಿರುಕುಳ ಮತ್ತು ನರಮೇದದ ಬಗ್ಗೆ ಮೌನ ವಹಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಪ್ರತಿಯೊಂದು ರಾಜ್ಯದಲ್ಲು ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ಯನ್ನು ಕಾಪಾಡಲು ಮುಖ್ಯ ಮಂತ್ರಿ ಮತ್ತು ಪೊಲೀಸ್ ವ್ಯವಸ್ಥೆ ಇರುತ್ತದೆ.ಪ್ರತಿಯೊಂದಕ್ಕು ಮೋದಿಜಿಯವರನ್ನು ದೂಶಿಸುವ ಕೀಳು ಮನ: ಸ್ಥಿತಿ ಹೊಂದಿರುವ ನಿಮ್ಮಂತವರಿಗೆ ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠವನ್ನು ಕಲಿಸುತ್ತಾರೆ.

    • ಅಮೃತ ಶಣೈ ಆವರೆ ನಿಮ್ಮ ಊರಿನ ಉಡುಪಿಯ ಕಾಲೇಜಿನಲ್ಲಿ ಇತ್ತೀಚೆಗೆ ಒಂದು ಅಮಾನವೀಯ ಘಟನೆ ನಡೆದಿದೆ.ಅಲ್ಪ ಸಂಖ್ಯಾತ ಸಮಾಜಕ್ಕೆ ಸೇರಿದ ಹುಡುಗಿಯರು ಟಾಯ್ಲೆಟ್ ನಲ್ಲಿ ಕ್ಯಾಮರ ಇಟ್ಟು ಹಿಂದು ಹಿಡುಗಿಯರ ಫೋಟೊ ತೆಗೆದು ತಮ್ಮ ಜನಾಗದ ವಾಟ್ ಸಪ್ ಗ್ರೂಪಿನಲ್ಲಿ ಹಂಚಿಕೊಂಡಿದ್ದಾರೆಂದು ವರದಿಯಾಗಿದೆ. ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಅನೈತಿಕತೆಯ ಬಗ್ಗೆಯು ನಿಮ್ಮ ದೃಷ್ಟಿಕೋಣವಿರಲಿ.ಪ್ರತಿಯೊಂದಕ್ಕೂ ಮೋದಿಜಿ ಯವರನ್ನು ದೂಶಿಸುವ ನಿಮ್ಮ ಮನ: ಸ್ಥಿತಿಯನ್ನು ಬದಲಿಸಿಕೊಳ್ಳಿ .

  2. ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ನುಡಿಸುತ್ತಿದ್ದನಂತೆ. ಒಲೆ ಹೊತ್ತಿ ಉರಿದರೆ ನಿಲಬಹುದಲ್ಲದೆ ಧರೆ ಹೊತ್ತಿ ಉರಿದರೆ ನಿಲಬಹುದೆ?

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X