ಚೈತ್ರಾ ಎಂಬ ಗಾಳವನ್ನು ಬಳಸಿ, ಗೋವಿಂದ ಎಂಬ ಮೀನನ್ನು‌ ಹಿಡಿದವರಾರು?

Date:

ಬಿಜೆಪಿ ಮುಖಂಡರೇ ಚೈತ್ರಾ ಹೇಳಿದ ದೊಡ್ಡವರು ಎಂಬುದು ಮೇಲ್ನೋಟಕ್ಕೆ ಕಂಡುಬರುವ ಸಂಗತಿ. ಅದಲ್ಲದೇ ಸಾಮಾನ್ಯ ಜ್ಞಾನ ‌ಇರುವ ಯಾರಾದರೂ ಇದೇ ನಿಟ್ಟಿನಲ್ಲಿ ಆಲೋಚನೆ‌ ಮಾಡುತ್ತಾರೆ. 

ಚೈತ್ರಾ ಕುಂದಾಪುರ ಹೇಳಿದ್ದು ಇಷ್ಟು: “ಸ್ವಾಮೀಜಿ ಬಂಧನವಾಗಲಿ ದೊಡ್ಡವರ ಹೆಸರು ಹೊರ ಬರತ್ತೆ!”. ಯಾರು‌ ದೊಡ್ಡವರು? ಖಂಡಿತಾ ಬಿಜೆಪಿ ಅಥವಾ ಆರ್‌‌ಎಸ್‌‌ಎಸ್‌ ಮುಖಂಡರು ಯಾರಾದರೂ ಇರಬಹುದು. ಏಕೆಂದರೆ ಕೋಟಿ ಸಂಪಾದಿಸುವಷ್ಟು ಬುದ್ಧಿ ಇರುವ ಗೋವಿಂದರು, ಅದನ್ನು ಯಾರಾದರೂ ಅಧಿಕೃತ ಅಥವಾ ಜನಪ್ರಿಯ ಬಿಜೆಪಿ ಮುಖಂಡರಿಗೆ ತಲುಪಿಸಿದರೆ ಮಾತ್ರ ತನಗೆ ಟಿಕೆಟ್ ಸಿಗಬಹುದು, ಚೈತ್ರಾರಿಗೆ ಕೊಟ್ಟರೆ ಅದು ಅಸಾಧ್ಯ ಎಂದು ತಿಳಿಯದಷ್ಟು‌ ಮೂರ್ಖರಾಗಿರಲು ಸಾಧ್ಯವಿಲ್ಲ.

- Advertisement -

ಬಿಜೆಪಿ ಈ ದೇಶದಲ್ಲಿ ಕೋಮುವಾದ, ಹಿಂದುತ್ವ, ಧರ್ಮ ರಕ್ಷಣೆ ಎಂಬ ವಿಷಯಗಳಿಂದ ಅಧಿಕಾರಕ್ಕೆ ಬಂದರೂ ಅಧಿಕಾರಕ್ಕೆ ಬಂದ ಮೇಲೆ ಮಾಡುತ್ತಾ ಇರುವುದು ವ್ಯಾಪಕ ಅವ್ಯಾಹತ ಭ್ರಷ್ಟಾಚಾರ. ದೇಶವನ್ನೇ ಬೆರಳೆಣಿಕೆಯ ಬಹುರಾಷ್ಟ್ರೀಯ ಕಂಪೆನಿ ಮಾಲೀಕರ ಕೈಗೆ ಪರೋಕ್ಷವಾಗಿ ನೀಡುತ್ತಾ ಇದೆ. ಚೈತ್ರಾ ಪ್ರಕರಣವನ್ನು ಸೂಕ್ಷ್ಮವಾಗಿ ನೋಡಿದಾಗ ಗೋವಿಂದ ಎಂಬ ಉದ್ಯಮಿಗೆ ಮೊದಲು ಕೇಸರಿ ಶಾಲು ಹಾಕಿಸಿದ್ದು, ಆಮೇಲೆ ಅವರನ್ನು ಹಿಂದೂ ಮುಖಂಡ ಎಂದು ಹೊಗಳಿ ಅಟ್ಟಕ್ಕೇರಿಸಿದ್ದು, ಆಮೇಲೆ ಅವರಿಂದ ಕೋಟ್ಯಂತರ ರೂ. ಕಬಳಿಸಿದ್ದು, ಇದಾದ ಬಳಿಕ ಬಿಜೆಪಿಯ ನಾಯಕರಾದ ಶೋಭಾ ಹಾಗೂ ಸುನೀಲ್ ಅವರು ಪ್ರತಿಕ್ರಿಯಿಸಿ, “ನಮಗೆ ಚೈತ್ರಾ ಪರಿಚಯವಿಲ್ಲ” ಎಂದು‌ ಹೇಳಿರುವುದು ಶತಮಾನದ ದೊಡ್ಡ ಜೋಕ್.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಬಿಜೆಪಿ ಮುಖಂಡರೇ ಚೈತ್ರಾ ಹೇಳಿದ ದೊಡ್ಡವರು ಎಂಬುದು ಮೇಲ್ನೋಟಕ್ಕೆ ಕಂಡುಬರುವ ಸಂಗತಿ. ಅದಲ್ಲದೇ ಸಾಮಾನ್ಯ ಜ್ಞಾನ ‌ಇರುವ ಯಾರಾದರೂ ಇದೇ ನಿಟ್ಟಿನಲ್ಲಿ ಆಲೋಚನೆ‌ ಮಾಡುತ್ತಾರೆ. ಹಾಗಾಗಿ‌ ತನಿಖಾ ಸಂಸ್ಥೆಗಳು ಕೂಡ ಇದೇ ನಿಟ್ಟಿನಲ್ಲಿ ತನಿಖೆ ನಡೆಸಿದರೆ ದೊಡ್ಡವರು ಯಾರು ಎಂಬುದು ಗೊತ್ತಾಗುತ್ತದೆ.

ಒಟ್ಟಾರೆ ಸಾರಾಂಶ ಏನೆಂದರೆ ಕರಾವಳಿಯಲ್ಲಿ ಆರ್ಥಿಕವಾಗಿ‌ ಹಿಂದುಳಿದ ಯುವ ಜನತೆಯನ್ನು ಬಿಜೆಪಿ ಯಾವತ್ತೋ ಹಾಳು ಮಾಡಲು ಪ್ರಾರಂಭಿಸಿ ಆಗಿದೆ. ಈಗ ಆರ್ಥಿಕವಾಗಿ ಮುಂದೆ ಬಂದವರೂ ಹಾಳಾಗುತ್ತಾ ಇದ್ದಾರೆ. ಗೋವಿಂದ ಪೂಜಾರಿಯವರು ಸೂಟುಬೂಟಿನ ಮೇಲೆ ಕೇಸರಿ ಶಾಲು ಹಾಕಿ ತಿರುಗಾಡುವುದಕ್ಕಿಂತ ಜೀವನದಲ್ಲಿ ವಾಮಮಾರ್ಗದಲ್ಲಿ ಯಶಸ್ಸು ಕಾಣುವ ಪ್ರಯತ್ನವನ್ನು ನಿಲ್ಲಿಸಿ ನೇರ ಮಾರ್ಗದಲ್ಲಿ‌ ಬದುಕಿ ಯಶಸ್ವಿಯಾದರೆ, ಅದೇ ನೈಜ ಧರ್ಮ ಪಾಲನೆ ಆಗುತ್ತದೆ. ಶಾಲು, ಹಾಡು, ಧ್ವಜ, ಘೋಷಣೆ ಇವೆಲ್ಲವೂ ಸಂಕೇತಗಳು. ಬದುಕು ಸಾಗಿಸುವ ರೀತಿ ಧರ್ಮಮಾರ್ಗದಲ್ಲಿ ಇರದೇ ಸಂಕೇತಗಳಿಂದ ಏನೂ ಲಾಭವಿಲ್ಲ.

WhatsApp Image 2025 11 17 at 3.16.03 PM
ಅಮೃತ್‌ ಶೆಣೈ
+ posts

ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

ಪೋಸ್ಟ್ ಹಂಚಿಕೊಳ್ಳಿ:

ಅಮೃತ್‌ ಶೆಣೈ
ಅಮೃತ್‌ ಶೆಣೈ
ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು

ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು,ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿಓಂಕಾರನಾದವೆಂಬ ಸೆಳೆಕೋಲಂ...

ವಚನ ಕಲ್ಯಾಣ | ಕೊಲ್ಲದಿರ್ಪುದೆ ಧರ್ಮ

ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ.ಕೊಲ್ಲದಿರ್ಪುದೆ ಧರ್ಮ. ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ.ಅಳುಪಿಲ್ಲದಿರ್ಪುದೆ ವ್ರತ....

ವಚನ ಕಲ್ಯಾಣ | ಸತ್ಯಶುದ್ಧವಿಲ್ಲದುದು ಕಾಯಕವಲ್ಲ

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ;ಸತ್ಯಶುದ್ಧವಿಲ್ಲದುದು ಕಾಯಕವಲ್ಲ;ಆಸೆಯೆಂಬುದು ಭವದ ಬೀಜ;ನಿರಾಸೆಯೆಂಬುದು ನಿತ್ಯಮುಕ್ತಿ.ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ ವಚನ...

ವಚನ ಕಲ್ಯಾಣ | ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ?

ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ? ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ? ಮಾಡ ಬನ್ನಿ...