ಬಾಕಿ ಇದ್ದ 3,900 ಕಡತ ವಿಲೇವಾರಿ, ಕಂದಾಯ ಇಲಾಖೆಗೆ 2ನೇ ಸ್ಥಾನ: ಸಚಿವ ಕೃಷ್ಣಭೈರೇಗೌಡ

Date:

Advertisements
  • ‘ಹೊಸದಾಗಿ 2,123 ಕಡತ ಬಂದಿದ್ದು, ಶೀಘ್ರ ವಿಲೇವಾರಿ’
  • ಕಡತ ವಿಲೇವಾರಿ ವಿಚಾರದಲ್ಲಿ ‘ಎ’ ವರ್ಗದ ಕಾರ್ಯಕ್ಷಮತೆ

ಕಂದಾಯ ಇಲಾಖೆಯಲ್ಲಿ ಈವರೆಗೂ ಬಾಕಿ ಉಳಿದಿದ್ದ ಕಡತಗಳನ್ನು ವಿಲೇವಾರಿ ಮಾಡಲು ಆದ್ಯತೆ ನೀಡಲಾಗಿದ್ದು, ಈವರೆಗೆ ಬಾಕಿ ಇದ್ದ 3,900 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಶೇ.183 ರಷ್ಟು ಕಾರ್ಯಕ್ಷಮತೆಯಿಂದ ಇಲಾಖೆ ಕೆಲಸ ನಿರ್ವಹಿಸುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿರುವ ಅವರು, “ಕಂದಾಯ ಇಲಾಖೆಯಲ್ಲಿ ಕಡತಗಳು ಮುಂದಕ್ಕೆ ಹೋಗೋದೆ ಇಲ್ಲ ಎಂಬ ದೂರುಗಳೂ ಸಹ ಜನರಿಂದ ಕೇಳಿದ್ದುಂಟು. ಹಿಂದಿನ ಈ ಎಲ್ಲ ಪರಿಪಾಠಗಳಿಗೂ ಪೂರ್ಣ ವಿರಾಮ ಇಡುವ ಸಂಕಲ್ಪದೊಂದಿಗೆ ಪ್ರಸ್ತುತ ಕಂದಾಯ ಇಲಾಖೆ ಕೆಲಸ ನಿರ್ವಹಿಸುತ್ತಿದೆ” ಎಂದಿದ್ದಾರೆ.

“ಕಂದಾಯ ಇಲಾಖೆಯಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಮೇಲೆ ಭರವಸೆ ಇಟ್ಟು ಕಂದಾಯ ಇಲಾಖೆ ಜವಾಬ್ದಾರಿ ನೀಡಿದರು. ಅಧಿಕಾರ ವಹಿಸಿದ ಕಳೆದ ಎರಡು ತಿಂಗಳಿನಿಂದ ಇಡೀ ಇಲಾಖೆಗೆ ಚುರುಕು ಮುಟ್ಟಿಸಿ ಎಲ್ಲ ಕಡತಗಳನ್ನೂ ತ್ವರಿತವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎದು ಹೇಳಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಗ್ಯಾರಂಟಿ ಯೋಜನೆ ಮುಂದಿಟ್ಟುಕೊಂಡು ಲೋಕಸಭೆ ಎದುರಿಸೋಣ ಬನ್ನಿ: ಮೋದಿಗೆ ಸಿದ್ದರಾಮಯ್ಯ ಸವಾಲು

“ಹೊಸದಾಗಿ 2,123 ಕಡತಗಳು ಬಂದಿದ್ದು ಈ ಕಡತಗಳನ್ನೂ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಡತ ವಿಲೇವಾರಿ ವಿಚಾರದಲ್ಲಿ ಕಂದಾಯ ಇಲಾಖೆ ಈವರೆಗೆ ‘ಎ’ ವರ್ಗದ ಕಾರ್ಯಕ್ಷಮತೆ ಪ್ರದರ್ಶಿಸಿಲ್ಲ. ಆದರೆ, ನಾವು ಕಡತ ವಿಲೇವಾರಿ ವಿಚಾರದಲ್ಲಿ ‘ಎ’ ವರ್ಗದ ಜೊತೆಗೆ ಎಲ್ಲಾ ಇಲಾಖೆಗಳ ಪೈಕಿ ಎರಡನೇ ಸ್ಥಾನದಲ್ಲಿದ್ದೇವೆ ಮತ್ತು ದೊಡ್ಡ ಇಲಾಖೆಗಳ ಪೈಕಿ ಮೊದಲ ಸ್ಥಾನದಲ್ಲಿದ್ದೇವೆ. ಇದಕ್ಕೆ ಕಾರಣವಾದ ನಮ್ಮ ಇಲಾಖೆಯ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸಲು ಇಚ್ಛಿಸುತ್ತೇನೆ” ಎಂದಿದ್ದಾರೆ.

“ಹಲವು ವರ್ಷಗಳಿಂದ ಬಾಕಿ ಇರುವ ಫೈಲ್ ಗಳನ್ನು ತ್ವರಿತವಾಗಿ ತೆರವುಗೊಳಿಸುತ್ತೇವೆ. ಮತ್ತು ಪೇಪರ್ ರಹಿತ ಡಿಜಿಟಲ್ ಸೇವೆ ಸೇರಿದಂತೆ ಏನೆಲ್ಲಾ ಸಾಧ್ಯತೆಗಳಿವೆಯೋ ಆ ಎಲ್ಲವನ್ನೂ ಬಳಸಿಕೊಂಡು ಅತ್ಯಂತ ವೇಗವಾಗಿ ಇಲಾಖೆಯ ಕಡತಗಳನ್ನು ವಿಲೇವಾರಿ ಮಾಡುವಲ್ಲಿ ನಾವು ಬದ್ಧರಾಗಿದ್ದೇವೆ ಎಂದು ಈ ಮೂಲಕ ತಿಳಿಯಪಡಿಸುತ್ತೇವೆ. ಉತ್ತಮ ಆಡಳಿತವನ್ನು ತಲುಪಿಸುವುದೊಂದೆ ನಮ್ಮ ಗುರಿ” ಎಂದು ಕೃಷ್ಣಭೈರೇಗೌಡ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

Download Eedina App Android / iOS

X