“ಜೂನ್ 1ರಂದು ಕೆಲವು ಖಾಸಗಿ ಸಂಸ್ಥೆಗಳು ನಡೆಸಿದ್ದ EXIT POLLನಿಂದ ಲೋಕಸಭಾ ಚುನಾವಣೆಯ ಫಲಿತಾಂಶದ ದಿನ ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ಕೋಟಿ ನಷ್ಟವಾಗಿದೆ. ದೇಶದ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಇದು ಬೃಹತ್ ಹಗರಣ. ಇದರ ಬಗ್ಗೆ ಜಂಟಿ ಸಂಸದೀಯ ಸಮಿತಿಯ ಮೂಲಕ ತನಿಖೆ ನಡೆಯಬೇಕು” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
प्रधानमंत्री, गृहमंत्री, उनके लिए काम कर रहे एक्जिट पोल्स्टर्स और मित्र मीडिया ने मिलकर हिंदुस्तान के सबसे बड़े ‘स्टॉक मार्केट स्कैम’ की साजिश रची है।
5 करोड़ छोटे निवेशक परिवारों के 30 लाख करोड़ रु डूबे हैं।
हम मांग करते हैं कि JPC गठित कर इस ‘क्रिमिनल एक्ट’ की जांच की जाए। pic.twitter.com/jMp5lxwRXg
— Rahul Gandhi (@RahulGandhi) June 6, 2024
ದೆಹಲಿಯಲ್ಲಿರುವ ಎಐಸಿಸಿಯ ಮುಖ್ಯ ಕಚೇರಿಯಲ್ಲಿ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜೂನ್ 4 ರಂದು ಷೇರು ಮಾರುಕಟ್ಟೆ ಏರಿಕೆಯಾಗಲಿದೆ ಮತ್ತು ನೀವೆಲ್ಲರೂ ಹೂಡಿಕೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರು. ಜೊತೆಗೆ ಹಣಕಾಸು ಸಚಿವರೂ ಇದೇ ರೀತಿ ಹೇಳಿದ್ದರು. ಜೂನ್ 4ರ ಮೊದಲು ಷೇರುಗಳನ್ನು ಖರೀದಿಸಿ ಎಂದು ಖುದ್ದು ಪ್ರಧಾನಿ ಮೋದಿ ಕೂಡ ಹೇಳಿದ್ದರು. ಅಲ್ಲದೇ, ಜೂನ್ 4ರಂದು ಮಾರುಕಟ್ಟೆಯ ಹಿಂದಿನ ದಾಖಲೆಗಳನ್ನು ಮುರಿಯಲಿದೆ ಎಂದಿದ್ದರು. ಬಿಜೆಪಿಗೆ ಬಹುಮತ ಬರುವುದಿಲ್ಲ ಎಂದು ಪಕ್ಷದ ಆಂತರಿಕ ಸರ್ವೇಯಿಂದ ಖಚಿತ ಮಾಹಿತಿ ಇದ್ದರೂ ಕೂಡ ಈ ರೀತಿಯ ಹೇಳಿಕೆಗಳನ್ನು ನೀಡಿ, ದೇಶದ ಜನರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಮಾಡಿದ್ದಾರೆ. EXIT POLLನಿಂದ ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ಕೋಟಿ ನಷ್ಟವಾಗಿದೆ. ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಇದು ದೇಶದ ಬೃಹತ್ ಹಗರಣ” ಎಂದು ಹೇಳಿದ್ದಾರೆ.
13th May 2024:
Amit Shah – “Buy shares before June 4th.”
19th May 2024:
Narendra Modi – “Stock markets will break records on June 4th.”
1st June 2024:
Last phase of polling. Media releases exit polls.
3rd June 2024:
Stock market breaks records and reaches an all-time high.… pic.twitter.com/CstIHq8jLD
— Congress (@INCIndia) June 6, 2024
“ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ 5 ಕೋಟಿ ಕುಟುಂಬಗಳಿಗೆ ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ನಿರ್ದಿಷ್ಟ ಸಲಹೆಯನ್ನು ಏಕೆ ನೀಡಿದರು? ಜನರಿಗೆ ಹೂಡಿಕೆ ಸಲಹೆ ನೀಡುವುದು ಅವರ ಕೆಲಸವೇ? ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆ” ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
“ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಎಂದು ಸಲಹೆ ನೀಡುವುದಕ್ಕೆ ಎರಡೂ ಸಂದರ್ಶನಗಳನ್ನು ಒಂದೇ ಮಾಧ್ಯಮಕ್ಕೆ ನೀಡಲಾಗಿದೆ. ಈ ಮಾಧ್ಯಮ ಸಂಸ್ಥೆಯ ಮಾತೃಸಂಸ್ಥೆಯು ಷೇರು ಮಾರುಕಟ್ಟೆಯನ್ನು ತಿರುಚಿದ ಆರೋಪಕ್ಕಾಗಿ ಸೆಬಿಯಿಂದ ತನಿಖೆ ಎದುರಿಸುತ್ತಿದೆ. ಇದೇ ಸಂಸ್ಥೆಗೆ ಯಾಕೆ ಸಂದರ್ಶನ ನೀಡಿದ್ದಾರೆ? ಬಿಜೆಪಿ ಮತ್ತು ನಕಲಿ ಎಕ್ಸಿಟ್ ಪೋಲ್‌ಗಳನ್ನು ಪ್ರಕಟಿಸಿದ ಸಂಸ್ಥೆಗಳಿಗೂ ಹಾಗೂ ಎಕ್ಸಿಟ್ ಪೋಲ್‌ಗೂ ಮುಂಚೆ ಷೇರು ಖರೀದಿಸಿದ ಸಂಶಯಾಸ್ಪದ ವಿದೇಶಿ ಹೂಡಿಕೆದಾರರಿಗೂ ನಡುವಿನ ಸಂಬಂಧವೇನು? ಇದಕ್ಕೆಲ್ಲ ಉತ್ತರ ಸಿಗಬೇಕಿದೆ. ಇದು ಅತಿದೊಡ್ಡ ಷೇರು ಮಾರುಕಟ್ಟೆಯ ಹಗರಣ. ಈ ಕುರಿತು ನಾವು ಜಂಟಿ ಸಂಸದೀಯ ಸಮಿತಿಯ ಮೂಲಕ ತನಿಖೆ ನಡೆಯಬೇಕು ಎಂದು ಒತ್ತಾಯಿಸುತ್ತೇವೆ. 30 ಲಕ್ಷ ಕೋಟಿ ನಷ್ಟವಾಗಿರುವುದರಿಂದ 5 ಕೋಟಿ ಕುಟುಂಬಗಳಿಗೆ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ದೇಶದ ಜನರಿಗಾದ ನಷ್ಟಕ್ಕೆ ಯಾರು ಹೊಣೆ ಎಂಬುದಕ್ಕೆ ಉತ್ತರ ಸಿಗಬೇಕಿದೆ” ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
The common people of India lost Rs 30 lakh crore in the stock market on June 4. We ask:
1. Why did the PM and HM give specific investment advice to the 5 crore families investing in the stock markets? Is it their job to give investment advice to the people?
2. Why both… pic.twitter.com/lMCkMGBHBa
— Congress (@INCIndia) June 6, 2024
