ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA)ಗೆ ಸೇರಿದ ಎರಡು ವಾರಗಳ ನಂತರ ಮತ್ತು ಒಂಬತ್ತನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆ ಸಾಬೀತುಪಡಿಸಬೇಕಿತ್ತು. ಈ ಹಾವು ಏಣಿ ಆಟದಲ್ಲಿ ಕೊನೆಗೂ ಬಹುಮತ ಸಾಬೀತುಪಡಿಸುವಲ್ಲಿ ಸಿಎಂ ನಿತೀಶ್ ಕುಮಾರ್ ಯಶಸ್ವಿಯಾಗಿದ್ದಾರೆ.
243 ಸದಸ್ಯರಿರುವ ಬಿಹಾರ ಅಸೆಂಬ್ಲಿಯಲ್ಲಿ 122ರ ಸರಳ ಬಹುಮತಕ್ಕಿಂತ ಹೆಚ್ಚು ಇರಬೇಕು. ಈ ನಡುವೆ 128 ಶಾಸಕರ ಬೆಂಬಲವನ್ನು ನಾವು ಹೊಂದಿದ್ದೇವೆ ಎಂದು ಎನ್‌ಡಿಎ ಹೇಳಿಕೊಂಡಿತ್ತು.
#WATCH | Patna: Bihar CM and JDU national president Nitish Kumar arrives at the Bihar Assembly in Patna, ahead of the floor test of his government today. pic.twitter.com/DmC4bnREqQ
— ANI (@ANI) February 12, 2024
ಇಂದು ವಿಶ್ವಾಸಮತ ಯಾಚನೆಯ ವೇಳೆ ಸರ್ಕಾರದ ಪರವಾಗಿ ಉಪ ಸ್ಪೀಕರ್ ಅವರ ಮತವೂ ಸೇರಿದಂತೆ ಒಟ್ಟು 130 ಮತ ಬಿತ್ತು. ಈ ವೇಳೆ ವಿಪಕ್ಷ ನಾಯಕ ಆರ್‌ಜೆಡಿಯ ತೇಜಸ್ವಿ ಯಾದವ್ ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಆ ಮೂಲಕ ನಿತೀಶ್ ಕುಮಾರ್ ನೇತೃತ್ವದ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರ ಭದ್ರವಾಗಿದೆ.
ಪಾಟ್ನಾದ ಬಿಹಾರ ವಿಧಾನಸಭೆಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಪಕ್ಷವಾದ ಆರ್‌ಜೆಡಿ ಶಾಸಕರಾದ ಚೇತನ್ ಆನಂದ್, ನೀಲಂ ದೇವಿ ಮತ್ತು ಪ್ರಹ್ಲಾದ್ ಯಾದವ್ ಅವರು ಸರ್ಕಾರದ ಪರವಾಗಿ ಮತ ಹಾಕಿದರು. ಆ ಮೂಲಕ ವಿಪಕ್ಷ ನಾಯಕ ಆರ್‌ಜೆಡಿಯ ತೇಜಸ್ವಿ ಯಾದವ್‌ಗೆ ಆಘಾತ ನೀಡಿದರು.
#WATCH | RJD MLAs Chetan Anand, Neelam Devi
and Prahlad Yadav sit on the government side in the Bihar Assembly in Patna.
Floor Test of CM Nitish Kumar’s government to prove their majority will be held today. pic.twitter.com/JhIlNiaiNR
— ANI (@ANI) February 12, 2024
ನಿತೀಶ್ ಕುಮಾರ್ ತಮ್ಮ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸುವುದಕ್ಕಿಂತ ಮೊದಲು ಆಡಳಿತ ಪಕ್ಷದ ಸದಸ್ಯರು ಬಿಹಾರ ವಿಧಾನಸಭೆ ಸ್ಪೀಕರ್ ಹಾಗೂ ಆರ್‌ಜೆಡಿ ನಾಯಕ ಅವಧ್ ಬಿಹಾರಿ ಚೌಧರಿ ವಿರುದ್ಧ ಅವಿಶ್ವಾಸ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದರು.
ಈ ವೇಳೆ 125 ಸದಸ್ಯರು ನಿರ್ಣಯದ ಪರವಾಗಿ ಮತ ಹಾಕಿದರೆ, ವಿರುದ್ಧವಾಗಿ 112 ಮಂದಿ ಮತ ಹಾಕಿದರು. ಆ ಮೂಲಕ ಆರ್‌ಜೆಡಿಯ ಅವಧ್ ಬಿಹಾರಿ ಸ್ಪೀಕರ್ ಹುದ್ದೆ ಕಳೆದುಕೊಂಡರು.
#WATCH | Patna: Motion to remove the Bihar Assembly Speaker and RJD leader Awadh Bihari Choudhary moved in the State Assembly pic.twitter.com/hGR8WzdPWL
— ANI (@ANI) February 12, 2024
ಸರ್ಕಾರದ ಪರವಾಗಿ 128 ಹಾಗೂ ವಿಪಕ್ಷಗಳ ಮಹಾಘಟಬಂಧನ್‌ನ ಭಾಗವಾಗಿರುವ ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು 114 ಶಾಸಕರನ್ನು ಹೊಂದಿವೆ.