ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಏಕೈಕ ಪುತ್ರ ನಿಶಾಂತ್ ಕುಮಾರ್ ಅವರು ಸಕ್ರಿಯ ರಾಜಕಾರಣಕ್ಕೆ ಸೇರುವ ವದಂತಿಗೆ ತೆರೆ ಎಳೆದಿದ್ದಾರೆ. ತಾನು ಆಧ್ಯಾತ್ಮಿಕತೆಯತ್ತ ಸಾಗುತ್ತಿರುವುದಾಗಿ ನಿಶಾಂತ್ ಕುಮಾರ್ ಹೇಳಿದ್ದಾರೆ.
ಬಿಹಾರ ರಾಜ್ಯ ರಾಜಧಾನಿಯ ಪಾಟ್ನಾ ಮಾರುಕಟ್ಟೆಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್, “ನಾನು ಆಧ್ಯಾತ್ಮಿಕತೆಯತ್ತ ಸಾಗುತ್ತಿದ್ದೇನೆ. ಹರೇ ರಾಮ ಹರೇ ಕೃಷ್ಣ ಭಜನೆಯನ್ನು ಕೇಳಲು ಸ್ಪೀಕರ್ ಖರೀದಿಸಲು ನಾನು ಇಲ್ಲಿಗೆ ಬಂದಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ನಿತೀಶ್ ಕುಮಾರ್ ಅವರನ್ನು ‘ಮಿಮಿಕ್’ ಮಾಡಿದ ಆರ್‌ಜೆಡಿ ಎಂಎಲ್‌ಸಿ ಸದನದಿಂದ ಉಚ್ಚಾಟನೆ
ಹಾಗೆಯೇ, “ನಾನು ಪ್ರತಿದಿನ ಬೆಳಿಗ್ಗೆ ನನ್ನ ಫೋನ್‌ನಲ್ಲಿ ಈ ಭಜನೆಯನ್ನು ಕೇಳುತ್ತೇನೆ. ಹೊಸ ಸಾಧನದೊಂದಿಗೆ, ನಾನು ಭಜನೆಯನ್ನು ಇನ್ನಷ್ಟು ಸುಲಭವಾಗಿ ಕೇಳಲು ಈ ಸ್ಪೀಕರ್ ನನಗೆ ಸಹಾಯ ಮಾಡುತ್ತದೆ” ಎಂದು ರಾಜಕೀಯಕ್ಕೆ ಸೇರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ನಿಶಾಂತ್ ಕುಮಾರ್ ಉತ್ತರಿಸಿದ್ದಾರೆ.
49 ವರ್ಷದ ನಿಶಾಂತ್ ಕುಮಾರ್ ರಾಜಕೀಯ ಮಹತ್ವಾಕಾಂಕ್ಷೆಯ ಬಗ್ಗೆ ಮಾತನಾಡಲು ಇಷ್ಟಪಡದಿದ್ದರೂ, ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಆಸಕ್ತಿ ಸದ್ಯಕ್ಕಿಲ್ಲ ಎಂಬ ಸುಳಿವು ನೀಡಿದ್ದಾರೆ.