ತುಮಕೂರು | ಚೈನ್‌ಲಿಂಕ್ ಆನ್‌ಲೈನ್‌ ವಂಚನೆ; ಮುಗ್ದರ ₹4 ಕೋಟಿ ದೋಖಾ ಮಾಡಿದ ವ್ಯವಸ್ಥಿತ ಜಾಲ

Date:

ಚೈನ್‌ಲಿಂಕ್ ಆನ್‌ಲೈನ್‌ ವಂಚನೆ ನಡೆದಿದ್ದು, ವ್ಯವಸ್ಥಿತ ಜಾಲವೊಂದು ಮುಗ್ದ ಜನರ ₹4 ಕೋಟಿ ದೋಖಾ ಮಾಡಿದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಡೆದಿದೆ.

- Advertisement -

ವಾಟ್ಸಾಪ್ ಗ್ರೂಪ್ ಮೂಲಕ ಆ್ಯಪ್‌ ಅಪ್‌ಲೋಡ್ ಮಾಡಿ ಹೂಡಿದ ಹಣಕ್ಕೆ ನಿತ್ಯವೂ ದುಪ್ಪಟ್ಟು ಹಣ ನೀಡುವ ಆಮಿಷಕ್ಕೆ ಬಲಿಯಾದ ಸುಮಾರು 500 ಮಂದಿಯ 4-5 ಕೋಟಿ ರೂಪಾಯಿ ಹಣ ಲಪಾಟಿಯಿಸಿದ ಬೃಹತ್ ಅನ್‌ಲೈನ್‌ ವಂಚನೆ ಪ್ರಕರಣ ಗುಬ್ಬಿ ತಾಲೂಕಿನ ಸಿ ಎಸ್ ಪುರ ಪೊಲೀಸ್ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಕಲ್ಲೂರು ಗ್ರಾಮದಲ್ಲಿ ವಾಟ್ಸಾಪ್ ಗ್ರೂಪ್ ರಚಿಸಿದ ವಂಚಕರ ಜಾಲ ಮೊದಲು ಡಾಟಾ ಮೀರ್ ಎಐ ಎಂಬ ಆ್ಯಪ್‌ ಡೌನ್‌ಲೋಡ್‌ ಮಾಡಲು ಸೂಚಿಸಿ ಹಣದ ಹೂಡಿಕೆ ಹಾಗೆಯೇ ನಿತ್ಯ ಹಣ ಲಾಭ ಬರುವ ಬಗ್ಗೆ ಹೇಳಿದ್ದರು. 300 ರಿಂದ ಆರಂಭಿಸಿ 4 ಲಕ್ಷದ ವರೆಗೆ ವಹಿವಾಟು ಮಾಡುವ ಮುಗ್ಧ ಜನರು ತಮ್ಮ ಹೂಡಿಕೆ ಹಣಕ್ಕೆ 80 ದಿನದಲ್ಲಿ ದುಪ್ಪಟ್ಟ ಹಣ ನೀಡುವ ಆಸೆಗೆ ವಂಚಕ ಜಾಲ ಮೊದಲ ಹಂತದಲ್ಲಿ ದುಪ್ಪಟ್ಟು ಹಣ ನೀಡಿ ನಂಬಿಸಿದ್ದಾರೆ.

ಚೈನ್‌ಲಿಂಕ್ ಮೂಲಕ ವಾಟ್ಸಾಪ್ ಗ್ರೂಪ್‌ಗೆ ಸೇರಿದ ಕಲ್ಲೂರಿನ 600ಕ್ಕೂ ಅಧಿಕ ಜನ ಹಣದ ಆಸೆ ಮತ್ತು ಒಬ್ಬ ಗ್ರಾಹಕರನ್ನು ಹುಡುಕಿಕೊಟ್ಟರೆ ಶೇ.10ರಷ್ಟು ಕಮಿಷನ್ ಆಸೆಗೆ ಬಲಿಯಾಗಿದ್ದಾರೆ. ಬೆಂಗಳೂರು ವಾಸಿಯಾಗಿರುವ ಕಲ್ಲೂರು ಮೂಲದ ಮೂರು ಮಂದಿ ಈ ಚೈನ್‌ಲಿಂಕ್ ಪ್ರಚಾರ ಮಾಡಿ ನಂತರ ಕೆಲವರನ್ನು ಬೆಂಗಳೂರು ನಗರದಲ್ಲಿ ಮೀಟಿಂಗ್ ನಡೆಸಿ ದೊಡ್ಡ ವೇತನ ನೀಡುವ ಆಸೆಯನ್ನೂ ಹುಟ್ಟಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪುರುಷಾಧಿಪತ್ಯದ ಕ್ರೌರ್ಯ | ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು

“₹500 ಹೂಡಿಕೆ ಮಾಡಿದರೆ ಐದು ದಿನದಲ್ಲಿ ₹450 ಬರುವ ಆಸೆ, ಕೆಲವರಿಗೆ 80 ದಿನದಲ್ಲಿ ದ್ವಿಗುಣ ಹಣ ನೀಡುವ ಆಮಿಷ ಸೇರಿದಂತೆ ಹಲವು ರೀತಿಯ ಯೋಜನೆಗಳನ್ನು ವಿವರಿಸಿ ವಂಚಿಸಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹದ ಬಳಿಕ ಆ್ಯಪ್ ರದ್ದು ಮಾಡಿ ವ್ಯವಸ್ಥಿತವಾಗಿ ನಾಪತ್ತೆಯಾಗಿದ್ದಾರೆ. ವಂಚನೆಗೆ ಒಳಗಾದ ಸುಮಾರು 40 ಮಂದಿ ಸಂತ್ರಸ್ತರು ಸಿ ಎಸ್ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವ್ಯವಸ್ಥಿತ ಜಾಲ ರಾಜ್ಯದೆಲ್ಲೆಡೆ ಆನ್‌ಲೈನ್‌ ಮೋಸ ನಡೆಸಿರುವ ಅನುಮಾನವಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ತನಿಖೆ ನಡೆಸಲಾಗುವುದು” ಎಂದು ಡಿವೈಎಸ್‌ಪಿ ಶೇಖರ್ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಡ

ಹಾಸನ ಜಿಲ್ಲೆ ಆಲೂರು ತಾಲ್ಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ರೈತರಿಗೆ...

ಯಾದಗಿರಿ | ಕಾಂಗ್ರೆಸ್‌ ತೆಕ್ಕೆಗೆ ಯುವ ನಾಯಕ ವೀರಾರಡ್ಡಿ ಮುನ್ನಾಳ

ಗುರುಮಿಠಕಲ್, ಯಾದಗಿರಿ ಮತಕ್ಷೇತ್ರದ ಯುವ ನಾಯಕ ಬಿ.ಎಸ್. ವೀರಾರಡ್ಡಿ ಮುನ್ನಾಳ ಅವರು...

ಹಾಸನ | ತಡೆಗೋಡೆ ಕಾಮಗಾರಿ ವೇಳೆ ಭೂಕುಸಿತ

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ನಡಹಳ್ಳಿ ಗ್ರಾಮದ ಬಳಿ ತಡೆಗೋಡೆ ಕಾಮಗಾರಿ...

ಯಾದಗಿರಿ | ಮಾಜಿ ತಾ.ಪಂ ಸದಸ್ಯನ ಮೇಲೆ ಹಲ್ಲೆ ಆರೋಪ; ಆರು ಮಂದಿ ವಿರುದ್ಧ ಪ್ರಕರಣ ದಾಖಲು

ಸಾಲದ ಬಡ್ಡಿ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಶಹಾಪುರ ತಾಲ್ಲೂಕು ಪಂಚಾಯಿತಿ ಮಾಜಿ...