ಈ ಬಾರಿಯ ಉಪಚುನಾವಣೆಯಲ್ಲಿ ಹೈ ವೊಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದ್ದ ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೀನಾಯವಾಗಿ ಸೋತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮೊದಲ 6 ಸುತ್ತಿನಲ್ಲಿ ನಿಖಿಲ್ ಮುನ್ನಡೆಯಲ್ಲಿದ್ದರು. ಆದರೆ ಚನ್ನಪಟ್ಟಣ ನಗರದ ಇವಿಎಂ ಓಪನ್ ಆಗುತ್ತಿದ್ದಂತೆ ಯೋಗೇಶ್ವರ್ ಅವರಿಗೆ ಭರ್ಜರಿ ಮುನ್ನಡೆ ಸಿಕ್ಕಿತ್ತು. ಈ ಮುನ್ನಡೆಯನ್ನು ಯೋಗೇಶ್ವರ್ ಕೊನೆಯವರೆಗೂ ಉಳಿಸಿಕೊಂಡು ಬರುವ ಮೂಲಕ, ಗೆಲುವು ಸಾಧಿಸಿದ್ದಾರೆ.

ಯೋಗೇಶ್ವರ್‌ಗೆ ಅವರಿಗೆ ಬಾರಿ ಸೋಲಿನ ಅನುಕಂಪ ಕೈ ಹಿಡಿದಿದೆ. ಎರಡು ಬಾರಿ ಶಾಸಕರಾಗಿ ಕುಮಾರಸ್ವಾಮಿ ಕ್ಷೇತ್ರಕ್ಕೆ ಬರಲಿಲ್ಲ ಎಂಬ ಬೇಸರ ಇತ್ತು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸೋಲಿನ ನಂತರ ಡಿಕೆ ಬ್ರದರ್ಸ್ ಚನ್ನಪಟ್ಟಣವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು.
ಇನ್ನು, ಚನ್ನಪಟ್ಟಣದಲ್ಲಿ ಜಮೀರ್ ಹೇಳಿಕೆಯಿಂದ ಕಾಂಗ್ರೆಸ್ ಹಿನ್ನಡೆಯಾಗಿದೆ ಎನ್ನಲಾಗಿತ್ತು. ಆದರೆ ಸಚಿವ ಜಮೀರ್ 20 ಸಾವಿರ ಅಂತರದಲ್ಲಿ ಯೋಗೇಶ್ವರ್ ಗೆಲ್ಲುತ್ತಾರೆ. ಬರೆದಿಟ್ಟುಕೊಳ್ಳಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಯೋಗೇಶ್ವರ್ ಗೆಲುವಿನ ಅಂತರ 18ರಿಂದ20 ಸಾವಿರ @BZZameerAhmedK ನಿಖರ ಭವಿಷ್ಯ 🔥🔥 pic.twitter.com/CvP6skflEA
— ಕೋಮುವಾದಿಗಳ ವಿರುದ್ಧ🇮🇳 (@KomuvadiVirudda) November 23, 2024
ಅಲ್ಲದೇ, ಮತದಾನ ನಡೆದ ಬಳಿಕ ಮಾತನಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್, “ಹೆಚ್ ಡಿ ಕುಮಾರಸ್ವಾಮಿ ಕುರಿತು ಸಚಿವ ಜಮೀರ್ ಅಹಮದ್ ನೀಡಿದ ಹೇಳಿಕೆ ಕ್ಷೇತ್ರದಲ್ಲಿ ಪರಿಣಾಮ ಬೀರಿದೆ. ಇದರಿಂದ ನನಗೆ ಬರುವ ಒಂದಿಷ್ಟು ಮತಗಳ ಬಂದಂತೆ ಕಾಣುತ್ತಿಲ್ಲ. ನಾನು ನಿರೀಕ್ಷಿಸಿದ ಮತಗಳಲ್ಲಿ ಹಿನ್ನಡೆಯಾಗಲಿದೆ” ಎಂದಿದ್ದರು. ಇದರಿಂದಾಗಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸುತ್ತಾರೆ, ಫಲಿತಾಂಶಕ್ಕೂ ಮುನ್ನವೇ ಯೋಗೇಶ್ವರ್ ಸೋಲೊಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ವ್ಯಂಗ್ಯವಾಡಿದ್ದರು. ಆದರೆ, ಇಂದಿನ ಫಲಿತಾಂಶ ಎಲ್ಲರ ಲೆಕ್ಕವನ್ನೂ ತಲೆಕೆಳಗಾಗಿಸಿದೆ.
ಹೈ ವೊಲ್ಟೇಜ್ ಕ್ಷೇತ್ರ ಚನ್ನ ಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ಹೀನಾಯವಾಗಿ ಸೋತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜಮೀರ್ ಅಹ್ಮದ್ ಅಭಿಮಾನಿಗಳಿಂದ ಕಾರ್ಯಕರ್ತರಿಂದ ಸಂಭ್ರಮ pic.twitter.com/VuDlOQ7GQm
— eedina.com ಈ ದಿನ.ಕಾಮ್ (@eedinanews) November 23, 2024
ನಿಂದನೆಗಳಿಂದ ಬಚಾವಾದ ಸಚಿವ ಜಮೀರ್
ಒಂದು ವೇಳೆ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಸೋತಿದ್ದಿದ್ದರೆ, ಸಚಿವ ಜಮೀರ್ ಅವರ ಹೇಳಿಕೆಯೆ ಕಾರಣ ಎಂದು ಎಲ್ಲರೂ ಟ್ರೋಲ್ ಸಹಿತ ನಿಂದನೆಗೂ ಗುರಿ ಮಾಡುತ್ತಿದ್ದರು. ಆದರೆ, ಮತದಾರರು ‘ಮನೆ ಮಗ’ ಎಂದು ಯೋಗೇಶ್ವರ್ ಅವರನ್ನು ಕೈ ಹಿಡಿದಿದ್ದರಿಂದ ಗೆಲುವು ಸಾಧಿಸಿದ್ದಾರೆ. ಜೊತೆಗೆ, ಸಚಿವ ಜಮೀರ್ ಅಹ್ಮದ್ ಕೂಡ ನಿಂದನೆಗಳಿಂದ ಬಚಾವಾಗಿದ್ದಾರೆ.
ಇದನ್ನು ಓದಿದ್ದೀರಾ? ಶಿಗ್ಗಾಂವಿ | ಬಹುವರ್ಷಗಳ ನಂತರ ಹಾರಿದ ಕಾಂಗ್ರೆಸ್ ಬಾವುಟ, ಯಾಸೀರ್ ಅಹ್ಮದ್ ಖಾನ್ ಪಠಾಣ್ ಗೆಲುವು
ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ, ಕೆಲವು ಕಾಂಗ್ರೆಸ್ ಕಾರ್ಯಕರ್ತರು, ಜಮೀರ್ ಅಹ್ಮದ್ ಅಭಿಮಾನಿಗಳು ಪೋಸ್ಟರ್ ಹಿಡಿದುಕೊಂಡು, ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಭರ್ಜರಿ ಗೆಲುವು: ಕಾಂಗ್ರೆಸ್ ಕಾರ್ಯಕರ್ತರಿಂದ ಭರ್ಜರಿ ಸಂಭ್ರಮಾಚರಣೆ@CPYogeeshwara @INCKarnataka @BJP4Karnataka #cpyogeshwar #ChannapattanaByelections2024 #nikhilkumaraswamy pic.twitter.com/ZFWAvHzDgo
— eedina.com ಈ ದಿನ.ಕಾಮ್ (@eedinanews) November 23, 2024
