ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 1991ರಲ್ಲಿ ಆರ್ಥಿಕ ಉದಾರೀಕರಣ ಮತ್ತು ಭಾರತೀಯ ಆರ್ಥಿಕತೆ ಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಮತ್ತು ಆಗಿನ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರನ್ನು ಶ್ಲಾಘಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಮನಮೋಹನ್ ಸಿಂಗ್ ಅವರ ಈ ಕ್ರಮವು ‘ಪರವಾನಗಿ ರಾಜ್’ ಯುಗದ ಅಂತ್ಯವನ್ನು ಪರಿಣಾಮಕಾರಿಯಾಗಿ ಗುರುತಿಸಿದೆ. ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಪೀಠಕ್ಕೆ ಕೇಂದ್ರದ ಪರವಾಗಿ ಇದನ್ನು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್
“ರಾವ್ ಮತ್ತು ಸಿಂಗ್ ಅವರು ಪರಿಚಯಿಸಿದ ಆರ್ಥಿಕ ಸುಧಾರಣೆಗಳು ಕಂಪನಿಯ ಕಾನೂನು ಮತ್ತು ವ್ಯಾಪಾರ ಅಭ್ಯಾಸಗಳ ಕಾಯ್ದೆ ಎಂಆರ್‌ಟಿಪಿ ಸೇರಿದಂತೆ ಹಲವಾರು ಕಾನೂನುಗಳನ್ನು ಉದಾರಗೊಳಿಸಿವೆ. ಆದರೆ ಮುಂದಿನ ಮೂರು ದಶಕಗಳಲ್ಲಿ ನಂತರದ ಸರ್ಕಾರಗಳು ಕೈಗಾರಿಕೆ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ, 1951 ಅನ್ನು ತಿದ್ದುಪಡಿ ಮಾಡುವ ಅಗತ್ಯವನ್ನು ಪರಿಗಣಿಸಿಲ್ಲ” ಎಂದು ಹೇಳಿದ್ದಾರೆ.
1991 ರಲ್ಲಿ, ವಿದೇಶಿ ಮೀಸಲು ಬಿಕ್ಕಟ್ಟನ್ನು ಎದುರಿಸಿದ ನರಸಿಂಹರಾವ್ ನೇತೃತ್ವದ ಸರ್ಕಾರವು ಮೂರು ಪರಿವರ್ತಕ ಆರ್ಥಿಕ ಸುಧಾರಣೆಗಳನ್ನು ಪರಿಚಯಿಸಿತು. ಅದು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣವಾಗಿದೆ.