ತಮ್ಮೂರಿನಲ್ಲೇ ಮತಗಟ್ಟೆ ರಚನೆಗೆ ಆಗ್ರಹ; ಇಲ್ಲದಿದ್ದರೆ ಮತದಾನ ಬಹಿಷ್ಕಾರ; ಆದಿವಾಸಿಗಳ ಎಚ್ಚರಿಕೆ

Date:

ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ ತಮ್ಮೂರಿನಲ್ಲೇ ಮತಗಟ್ಟೆ ರಚಿಸಬೇಕು. ಇಲ್ಲದಿದ್ದರೆ, ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಮೈಸೂರು ಜಿಲ್ಲೆಯ ಚನ್ನಗುಂಡಿ ಹಾಡಿಯ ಆದಿವಾಸಿ ಸಮುದಾಯ ಎಚ್ಚರಿಕೆ ನೀಡಿದೆ.

“ನಮ್ಮ ಊರಿನಲ್ಲೇ ಇದ್ದ ಮತಗಟ್ಟೆಯನ್ನು ಪಕ್ಕದ ಊರಿಗೆ ಸ್ಥಳಾಂತರಿಸಲಾಗಿದೆ. ಅದನ್ನು ಕೈಬಿಟ್ಟು, ನಮ್ಮೂರಿನಲ್ಲೇ ಮತಗಟ್ಟೆ ಸ್ಥಾಪಿಸಬೇಕು. ನಾವು ಬೇರೆ ಊರಿಗೆ ಹೋಗಿ ಮತ ಚಲಾಯಿಸುವುದಿಲ್ಲ” ಎಂದು ಸಮುದಾಯದ ಜನರು ಪಟ್ಟು ಹಿಡಿದಿದ್ದಾರೆ.

“ಹಲವಾರು ವರ್ಷಗಳಿಂದ ಚನ್ನಗುಂಡಿ ಹಾಡಿಯಲ್ಲೇ ಮತಗಟ್ಟೆ ಸ್ಥಾಪಿಸಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮತಗಟ್ಟೆಯನ್ನು ಅರಳಹಳ್ಳಿ ಗ್ರಾಮಕ್ಕೆ ವರ್ಗಾಯಿಸಲಾಗಿದೆ. ಗ್ರಾಮದಲ್ಲಿ ವೃದ್ಧರು, ವಿಷೇಶ ಚೇತನರು, ಗರ್ಭಿಣಿ, ಬಾಣಂತಿಯರಿದ್ದಾರೆ. ಸುಮಾರು 5 ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಿ ಮತ ಚಲಾಯಿಸಲು ಸಾಧ್ಯವಿಲ್ಲ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಳಹಳ್ಳಿ ಗ್ರಾಮಕ್ಕೆ ಹೋಗಿ ಮತವನ್ನು ಚಲಾಯಿಸಿದ್ದೇವೆ. ಸಂಚಾರಕ್ಕೆ ಯಾವುದೇ ವಾಹನದ ವ್ಯವಸ್ಥೆ ಮಾಡಿರಲಿಲ್ಲ. ಈ ಬಾರಿ, ಮತಗಟ್ಟೆಯನ್ನು ನಮ್ಮ ಗ್ರಾಮದಲ್ಲೇ ಸ್ಥಾಪಿಸಬೇಕು. ಇಲ್ಲದಿದ್ದರೆ, ಮತದಾನ ಬಹಿಷ್ಕರಿಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ದೇಶ ಭಕ್ತಿಯನ್ನು ಬಿಜೆಪಿಯವರಿಗೆ, ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ: ಶಾಸಕ ಲಕ್ಷ್ಮಣ ಸವದಿ

ದೇಶ ಭಕ್ತಿಯನ್ನು ಈ ಬಿಜೆಪಿಯವರಿಗೆ ಹಾಗೂ ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ. ನಾವು...

ರಾಯಚೂರು ಕ್ಷೇತ್ರಕ್ಕೆ ಬೇರೆ ಜಿಲ್ಲೆಯವರನ್ನು ಕಣಕ್ಕಿಳಿಸಿದ್ದಾರೆ, ಇದಕ್ಕೆ ಏನು ಹೇಳುತ್ತಾರೆ; ವಿ.ಸೋಮಣ್ಣ ಪ್ರಶ್ನೆ

ರಾಯಚೂರು ಕ್ಷೇತ್ರಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಚಾರ...

ಚಿತ್ರದುರ್ಗ | ಪೋಕ್ಸೊ ಪ್ರಕರಣ; ಜಿಲ್ಲಾ ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರಿ

ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇರೆಗೆ ಬಂಧನವಾಗಿದ್ದ ಚಿತ್ರದುರ್ಗದ...

ದಾವಣಗೆರೆ | ಮೇ.4ರಂದು ಪ್ರಿಯಾಂಕಾ ಗಾಂಧಿ ಪ್ರಚಾರ: ಸಚಿವ ಮಲ್ಲಿಕಾರ್ಜುನ

ರೈತರು ದೇಶದ ಬೆನ್ನೆಲುಬು, ದಾವಣಗೆರೆ ಕಾಂಗ್ರೆಸ್ ಪಕ್ಷಕ್ಕೆ ರೈತರು ಬೆನ್ನೆಲುಬಾಗಿರುವುದು ಸಂತಸದ...