ರಾಜ್ಯದ 5 ಕ್ಷೇತ್ರಗಳಲ್ಲಿ ಸ್ಪರ್ಧೆ; 219 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ: ಸಿಪಿಐ(ಎಂಎಲ್)

Date:

  • ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಿಪಿಐ(ಎಂಎಲ್) ಮುಖಂಡರು
  • ಫ್ಯಾಸಿಸ್ಟ್ ಶಕ್ತಿ ಕೊನೆಗೊಳಿಸಲು ಕಾಂಗ್ರೆಸ್‌ಗೆ ಬೆಂಬಲ ಘೋಷಣೆ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಲು ಹೋರಾಟ ರೂಪಿಸಬೇಕಾಗಿದೆ. ಆ ಗುರಿಯೊಂದಿಗೆ ರಾಜ್ಯದ 224 ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳನ್ನು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಉಳಿದ 219 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇವೆ ಎಂದು ಸಿಪಿಐ(ಎಂಎಲ್) ರೆಡ್ ಸ್ಟಾರ್‌ ನಾಯಕರು ಹೇಳಿದ್ದಾರೆ.

ಚುನಾವಣಾ ಸ್ಪರ್ಧೆ ಮತ್ತು ಕಾಂಗ್ರೆಸ್‌ಗೆ ಬೆಂಬಲ ಕುರಿತು ಪಕ್ಷದ ರಾಜ್ಯ ಮುಖಂಡ ಆರ್. ಮಾನಸಯ್ಯ ಹಾಗೂ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಅವರು ಬುಧವಾರ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ಕರ್ನಾಟಕ ರೈತ ಸಂಘ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ, ಅಖಿಲ ಭಾರತ ಕ್ರಾಂತಿಕಾರಿ ಯುವಜನ ರಂಗ, ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾಥಿ೯ ಸಂಘಟನೆ, ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ, ಕ್ರಾಂತಿಕಾರಿ ಸಾಂಸ್ಕೃತಿಕ ರಂಗ, ಜಾತಿ ನಿಮೂ೯ಲನಾ ಚಳವಳಿ ಮುಂತಾದ ಸಂಘಟನೆಗಳು ಕೂಡ ಪಕ್ಷದ ನಿಲುವನ್ನು ಬೆಂಬಲಿಸಿವೆ” ಎಂದು ಹೇಳಿದ್ದಾರೆ.

“ಕೊಡಗು ಜಿಲ್ಲೆಯ ವಿರಾಜಪೇಟೆ, ಎನ್.ಆರ್ ಪುರ (ಚಿಕ್ಕಮಗಳೂರು), ಕೊಪ್ಪಳ, ಸಿಂಧನೂರು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಿಪಿಐ(ಎಂಎಲ್) ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಬಹು ಮುಖ್ಯವಾಗಿ, ಆರ್‌ಎಸ್‌ಎಸ್‌ ನಿಯೋ ಫ್ಯಾಸಿಸ್ಟ್ ಶಕ್ತಿಯನ್ನು ಸೋಲಿಸುವುದು ನಮ್ಮ ರಾಜಕೀಯದ ತುರ್ತಾಗಿದೆ. ಈ ಫ್ಯಾಸಿಸ್ಟ್ ವಿರೋಧಿ ಹೋರಾಟವನ್ನೂ ರಾಜ್ಯದಲ್ಲಿ ಯಾವುದೆ ಒಂದು ಪಕ್ಷ ಅಥವಾ ಸಂಘಟನೆ ಯಶಸ್ವಿ ಮಾಡಬಲ್ಲದು ಎಂಬ ಹೇಳಿಕೆ ಯಾರೇ ನೀಡಿದರೂ ಅದು ಅತ್ಯಂತ ಅಸಂಬದ್ಧವಾದುದ್ದಾಗುತ್ತದೆ” ಎಂದು ಕಿಡಿಕಾರಿದ್ದಾರೆ.

“ಹೋರಾಟನಿರತ ಜನತೆ, ಎಡಪಕ್ಷಗಳು, ಕ್ರಾಂತಿಕಾರಿ ಕಮ್ಯುನಿಸ್ಟ್ ಪಕ್ಷಗಳು, ಸಂಘಷ೯ಶೀಲ ದಲಿತ ಹಾಗೂ ರೈತ ಚಳವಳಿಗಳು, ವಿಶಾಲವಾದ ಮಧ್ಯಮ ವಗ೯ ಹಾಗೂ ಬುದ್ಧಿವಂತ ಸಮುದಾಯಗಳು ವಿಶೇಷವಾಗಿ ಮಹಿಳಾ, ವಿದ್ಯಾಥಿ೯ ಹಾಗೂ ಯುವಜನ ಸಂಘಟನೆಗಳು ಫ್ಯಾಸಿಸ್ಟ್‌ ವಿರುದ್ಧದ ಹೋರಾಟಕ್ಕೆ ಸಿದ್ದರಾಗಬೇಕಾಗಿದೆ. ಈ ಚುನಾವಣೆಯಲ್ಲಿ ಫ್ಯಾಸಿಸ್ಟ್ ಅಲ್ಲದ ಕಾಂಗ್ರೆಸ್‌ಗೆ ಬೇಷರತ್ತಾಗಿ ಬೆಂಬಲಿಸುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯಬೇಕಾಗಿದೆ” ಎಂದು ಸಲಹೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಆಯನೂರು ಮಂಜುನಾಥ್‌ ರಾಜೀನಾಮೆ ಘೋಷಣೆ; ಜೆಡಿಎಸ್‌ನಿಂದ ಸ್ಪರ್ಧೆ ಸಾಧ್ಯತೆ

“ದನಗಳಿಗೆ ಸಿಕ್ಕ ಸ್ಥಾನಮಾನ ಜನಗಳಿಗೆ ನೀಡಲು ನಿರಾಕರಿಸುವ, ಸಂವಿಧಾನದ ಬದಲು ಮನಸ್ಮೃತಿಯ ಜಾರಿಗೆ ಕತ್ತಿ ಎತ್ತಿರುವ, ಭಾರತವನ್ನು ಧ್ವಂಸಗೊಳಿಸಿ ಹಿಂದೂರಾಷ್ಟ್ರ ನಿಮಾ೯ಣಕ್ಕೆ ಮುಂದಾಗಿರುವ, ಸಾಮಾಜಿಕ ಮೀಸಲಾತಿಯನ್ನು ರದ್ದುಪಡಿಸಿ ಆಥಿ೯ಕ ಮೀಸಲಾತಿಯನ್ನು ಹೇರುವ, ಸರಣಿ ನರಮೇಧ ಕೊಲೆ ಸುಲಿಗೆ ಅತ್ಯಾಚಾರ ನಡೆಯಿಸಿ ಬೋಲೊ ಭಾರತ ಮಾತಾಕೀ ಜೈ ಎನ್ನುವ ಸಂಘ ಪರಿವಾರದ ಸವಾ೯ಧಿಕಾರದ ವಿರುದ್ದ ಹೋರಾಡಲು ಈ ಚುನಾವಣೆಯನ್ನು ಒಂದು ಚಳವಳಿಯಾಗಿ ಮಾಪ೯ಡಿಸಬೇಕಾಗಿದೆ” ಎಂದು ಹೇಳಿದ್ದಾರೆ.

“ನಾಡಿನ ಜನತೆಯ ಜೀವ ಹಾಗೂ ಜೀವನದ ಎರಡು ಅತೀ ದೊಡ್ಡ ಸವಾಲುಗಳು ಈ ಚುನಾವಣೆಯ ಅಜಂಡಗಳಾಗಿವೆ. ಕೊಲೆಗಡುಕ ಬಿಜೆಪಿಯಿಂದ ಜನತೆಯ ಜೀವ ರಕ್ಷಿಸುವ ಹೋರಾಟ ಇದಾಗಲೆ ಬೇಕಾಗಿದೆ. ಹಾಗೆಯೆ, ಜೀವನಕ್ಕೆ ಆಪತ್ತಾಗಿ ನಿಂತಿರುವ ನವ ಉದಾರವಾದಿ ನೀತಿಗಳ ವಿರುದ್ಡದ ಹೋರಾಟವು ಬಿಜೆಪಿಯೇತರ ಪಕ್ಷ ಅಧಿಕಾರ ಹಿಡಿದ ನಂತರವೂ ಮುಂದುವರೆಯಲಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ರಾಜ್ಯದ ಎಲ್ಲ ಜನಪರ ಶಕ್ತಿಗಳ ಸವ೯ಶಕ್ತಿಯನ್ನು ಧಾರೆ ಎರೆದು ಮನುವಾದಿಗಳಿಗೆ ಮಣ್ಣುಮುಕ್ಕಿಸಲು ಸಿಪಿಐ(ಎಂಎಲ್) ಪಕ್ಷವು ಕನಾ೯ಟಕದ ಎಲ್ಲ ನಾನ್ ಫ್ಯಾಸಿಸ್ಟ್ ಪಕ್ಷಗಳಿಗೆ ಹಾಗೂ ಮತದಾರರಿಗೆ” ಮನವಿ ಮಾಡಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಸ್ಲಿಂ ಮೀಸಲಾತಿ | ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ರವಿವರ್ಮ ಕುಮಾರ್

ಮುಸ್ಲಿಂರನ್ನು ಹಿಂದುಳಿದ ಪಟ್ಟಿಗೆ ಸೇರಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಹಿಂದುಳಿದ ಮೀಸಲಾತಿ ಮುಸ್ಲಿಂರಿಗೆ...

ಪೆನ್‌ಡ್ರೈವ್ ಆತಂಕ ಕೊನೆಗೊಳಿಸಿ – ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿ; ಸಿಪಿಐಎಂ ಆಗ್ರಹ

"ಕಳೆದ ಎರಡು ಮೂರು ದಿನಗಳಿಂದ ಹಾಸನದಲ್ಲಿ ಪೆನ್‌ಡ್ರೈವ್ ವಿಚಾರ ಭಾರೀ ಚರ್ಚೆಯಾಗುತ್ತಿದೆ....

ತೀರ್ಥಯಾತ್ರೆ ನೆಪದಲ್ಲಿ ಮಹಿಳೆಯರು ಎಲ್ಲೆಲ್ಲೋ ಹೋಗ್ತಿದ್ದಾರೆ ಎಂದ ನಟಿ ಶೃತಿ: ಮಹಿಳಾ ಆಯೋಗದಿಂದ ನೋಟಿಸ್

“ಪ್ರೀ ಬಸ್ ಬಿಟ್ಟ ತಕ್ಷಣ ಹೆಣ್ಣುಮಕ್ಕಳು ತೀರ್ಥಯಾತ್ರೆ ಹೋಗ್ತೇವೆಂದು ಹೇಳಿ, ಎಲ್ಲಿಗೆ...

ಮಸ್ಲಿಮರನ್ನು ಒಬಿಸಿಗೆ ಸೇರಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್‌: ಮೋದಿಗೆ ದ್ವಾರಕಾನಾಥ್ ಇತಿಹಾಸ ಪಾಠ

"ಒಬಿಸಿಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಸಂಚನ್ನು ಮೋದಿ ರೂಪಿಸಿದ್ದಾರೆ, ಮಂಡಲ್‌ ಆಯೋಗ...