ಚುನಾವಣೆಗೆ ಜನರ ಬೆಂಬಲ ಬೇಕು, ಹಣವಲ್ಲ; ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಡಿಎಂಕೆ ತಿರುಗೇಟು

Date:

Advertisements

ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ʼಲೋಕಸಭೆ ಎಲೆಕ್ಷನ್‌ಗೆ ಸ್ಪರ್ಧೆ ಮಾಡುವಷ್ಟು ಆರ್ಥಿಕ ಶಕ್ತಿ ಇಲ್ಲʼ ಅನ್ನೋ ಹೇಳಿಕೆಗೆ ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ ತಿರುಗೇಟು ನೀಡಿದ್ದಾರೆ. ‘ಚುನಾವಣೆಗೆ ಜನರ ಬೆಂಬಲ ಬೇಕು. ಹಣವಲ್ಲ’ ಎಂದು ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್‌ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಹೇಳಿಕೆ ನೀಡಿದ ಬಳಿಕ ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ ಪ್ರತಿಕ್ರಿಯೆ ನೀಡಿದ್ದು, “ಚುನಾವಣೆಗೆ ನಿಲ್ಲಲು ಹಣ ಮಾತ್ರ ಅಲ್ಲ. ಜನರ ಬೆಂಬಲವೂ ಬೇಕು. ನಿರ್ಮಲಾ ಸೀತಾರಾಮನ್‌ಗೆ ಜನರ ಬೆಂಬಲ ಇಲ್ಲ. ಹೀಗಾಗಿಯೇ ಸುಖಾಸುಮ್ಮನೆ ಇಲ್ಲಸಲ್ಲದ ಹೇಳಿಕೆ ಕೊಡುತ್ತಿದ್ದಾರೆ. ದೇಶದ ಅರ್ಥ ಸಚಿವೆ ಜನರ ಮನ್ನಣೆ ಗಳಿಸಿಲ್ಲ. ಹಾಗಾಗಿ, ಸಣ್ಣಪುಟ್ಟ ಕಾರಣವೊಡ್ಡಿ ಚುನಾವಣೆಗೆ ಸ್ಪರ್ಧೆ ಮಾಡದೆ ತಾವೊಬ್ಬ ಅಸಮರ್ಥ ನಾಯಕಿ ಎಂಬುದನ್ನು ಪದೇ ಪದೆ ಸಾಬೀತುಪಡಿಸುತ್ತಿದ್ದಾರೆ” ಎಂದು ಟೀಕಿಸಿದರು.

“ನಿರ್ಮಲಾ ಸೀತಾರಾಮನ್‌ ಬಹುಶಃ ಚುನಾವಣೆ ರಾಜಕೀಯದಿಂದ ಹೆದರಿ ಓಡಿಹೋಗ್ತಿದ್ದಾರೆ. ಜನರಿಂದ ಆಯ್ಕೆಯಾದ ಪ್ರತಿನಿಧಿಯೇ ನಿಜವಾದ ಪ್ರತಿನಿಧಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕರು ಎನಿಸಿಕೊಳ್ಳಬೇಕಾದರೆ ಜನರಿಂದ ಆಯ್ಕೆಯಾಗಿ ಅಧಿಕಾರ ನಡೆಸಬೇಕು. ನಿರ್ಮಿಲಾ ಸೀತಾರಾಮನ್ ದೇಶದ ಅರ್ಥ ವ್ಯವಸ್ಥೆಯನ್ನೇ ತನ್ನ ತಪ್ಪು ನಿರ್ಧಾರಗಳಿಂದ ಹಾಳು ಮಾಡಿದ್ದಾರೆ” ಎಂದು ಸರವಣನ್ ಅಣ್ಣಾ ದೊರೈ ವ್ಯಂಗ್ಯವಾಡಿದ್ದಾರೆ.

Advertisements

ಹಣಕಾಸು ಸಚಿವರ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿರುವುದನ್ನು ಅವರು ಗ್ರಹಿಸಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರು ಜನರ ನೀತಿಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಿದ ರೀತಿ ಖಂಡಿತವಾಗಿಯೂ ಅಸಮಾಧಾನವನ್ನು ತಂದುಕೊಟ್ಟಿತು. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವರ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಹುಶಃ ಇದನ್ನು ಗ್ರಹಿಸಿರುವ ಹಣಕಾಸು ಸಚಿವೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ” ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಭಾರಿ ಮೊತ್ತದ ಹಣವನ್ನು ಸುಲಿಗೆ ಮಾಡಿದೆ ಎಂದು ಆರೋಪಿಸಿದ ಅಣ್ಣಾದೊರೈ, “ಚುನಾವಣೆಗೆ ಖರ್ಚು ಮಾಡಲು ಅಭ್ಯರ್ಥಿಯ ಹಣ ಬಳಸಬೇಕಿಲ್ಲ. ಅದು ಪಕ್ಷದ್ದು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ನೀತಿ ಸಂಹಿತೆ ಉಲ್ಲಂಘನೆ | ಮೋದಿ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಹೆದರುತ್ತದೆಯೇ; ಮಾಜಿ ಐಎಎಸ್ ಅಧಿಕಾರಿ ಪ್ರಶ್ನೆ

“ಬಿಜೆಪಿ 8,250 ಕೋಟಿ ರೂ.ಗಳನ್ನು ಸುಲಿಗೆ ಮಾಡಿದೆ. ಬಿಜೆಪಿ ಬ್ಯಾಂಕ್ ಖಾತೆಯಲ್ಲಿ 6,000 ಕೋಟಿ ರೂ. ಇದೆ. ಅಲ್ಲದೆ ನಿರ್ಮಲಾ ಸೀತಾರಾಮನ್ ಸಂಪುಟದಲ್ಲಿ ಉನ್ನತ ಸಚಿವರಾಗಿದ್ದಾರೆ. ಬಿಜೆಪಿ ಏಕೆ ಅವರಿಗೆ ಪ್ರಾಯೋಜಕತ್ವ(ಸ್ಪಾನ್ಸರ್‌) ನೀಡಬಾರದು?” ಎಂದು ಹೇಳಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X