ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಒಂಭತ್ತು ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಡುಗೆ ಅನಿಲದ ಬೆಲೆ ಇಳಿಕೆ ಮಾಡಿ, ದೇಶದ ಜನತೆಯನ್ನು ಯಾಮಾರಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, “ದೇಶದ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಅಗತ್ಯವೇನಿತ್ತು? ಇಷ್ಟು ವರ್ಷ ಇಲ್ಲದ ಕಾಳಜಿ, ಈಗ ಒಮ್ಮಿಂದೊಮ್ಮೆಲೆ ಬಂದು ಬಿಟ್ಟಿದೆಯೇ? ₹1,000 ಏರಿಕೆ ಮಾಡಿ, ₹200 ಇಳಿಸಿದ್ದಾರೆ. ಇದು ಚುನಾವಣೆ ಗಿಮಿಕ್. ಅಷ್ಟೊಂದು ಕಾಳಜಿ ಇದ್ದಿದ್ದರೆ ₹600-₹800 ರಷ್ಟು ಇಳಿಕೆ ಮಾಡಬೇಕಿತ್ತು” ಎಂದು ಹೇಳಿದ್ದಾರೆ.
“ಅಡುಗೆ ಅನಿಲದ ಬೆಲೆ ಇಳಿಕೆ ಹಾಗೂ ಕೆಲವು ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆಯ ವಾತಾವರಣ ಗಮನಿಸಿದರೆ ಡಿಸೆಂಬರ್ ತಿಂಗಳಲ್ಲಿಯೇ ಲೋಕಸಭಾ ಚುನಾವಣೆ ನಡೆಯಬಹುದು. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಉಚಿತ ಯೋಜನೆ ಕೊಡಬೇಡಿ ಅನ್ನುತ್ತಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಉಚಿತ ಯೋಜನೆ ಘೋಷಣೆ ಮಾಡುತ್ತದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತಷ್ಟು ಉಚಿತ ಯೋಜನೆ ಘೋಷಿಸಿದರೂ ಅಚ್ಚರಿಯಿಲ್ಲ. ಹೇಳುವುದು ಒಂದು, ಮಾಡುವುದು ಮತ್ತೊಂದು” ಎಂದು ಕಿಡಿಕಾರಿದ್ದಾರೆ.
“‘ಲೀಡರ್ ಲೆಸ್’ ಬಿಜೆಪಿಯ ಅನೇಕ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ಸದ್ಯ ಅಲ್ಲಿ ಸ್ಮಶಾನ ಮೌನ ಆವರಿಸಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಲೋಕಸಭಾ ಸುನಾವಣೆಯಲ್ಲಿ ಧಾರವಾಡ ಕ್ಷೇತ್ರ ಸೇರಿ ಕನಿಷ್ಠ 15 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ” ಎಂದು ಹೇಳಿದ್ದಾರೆ.
ಶೆಟ್ಟರ್ ಸಾಹೇಬ್ರೆ ನಿಮ್ಮ aukat yenada ಅದನ್ನ ಮಾತಾಡಿ ಬೇರೆಯವರ ಮೇಲೆ ಏನ್ ಗುಬೇ ಕುದುಸ್ತ್ರ niu uddaragri modalu Anil ಕಡಿಮೆ ಆದ್ರೆ ಹೆಮ್ಮೆ ಪಡಿ ಆದ್ರೆ ಅದನ್ನೇ ಅಸ್ತ್ರ ಮಾಡ್ಕೊಂಡು ದೇಶದ ಜನರನ್ನ ಮೂರ್ಖರನ್ನಾಗಿಸಿ ಮಾಡೋ ಕೆಲಸ ಮದುಕ್ hogbyadi ಶೆಟ್ಟರ್,