ಹಮಾಸ್ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷವು 12ನೇ ದಿನಕ್ಕೆ ತಲುಪಿರುವ ಮಧ್ಯೆಯೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಇಸ್ರೇಲ್ ರಾಜಧಾನಿ ಟೆಲ್ ಅವೀವ್ ತಲುಪಿದ್ದಾರೆ.
ವಿಮಾನ ನಿಲ್ದಾಣ ತಲುಪಿದ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾಗಿ ಅಪ್ಪಿಕೊಂಡಿದ್ದಾರೆ.
ಆ ಬಳಿಕ ಬೈಡನ್ ಟೆಲ್ ಅವೀವ್‌ನಲ್ಲಿ ಇಸ್ರೇಲ್ ಪ್ರಧಾನಿಯೊಂದಿಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಗಾಝಾದ ಆಸ್ಪತ್ರೆ ಮೇಲೆ ನಡೆದಿರುವ ದಾಳಿಯನ್ನು ಇಸ್ರೇಲ್ ನಡೆಸಿಲ್ಲ ಎನ್ನುವ ಮೂಲಕ ಇಸ್ರೇಲ್ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದ್ದಾರೆ.
#WATCH | Israel | In Tel Aviv, US President Joe Biden says, “…I was deeply sad by the explosion at the hospital in Gaza yesterday. Based on what I have seen, it appears as though it was done by the other team, not you. But there are a lot of people out there, not sure…”… pic.twitter.com/ixrqpC5cm3
— ANI (@ANI) October 18, 2023
‘ಗಾಝಾದ ಆಸ್ಪತ್ರೆಯ ಮೇಲೆ ನಡೆದಿರುವ ದಾಳಿಯಿಂದ ತುಂಬಾ ದುಃಖಿತನಾಗಿದ್ದೇನೆ. ನಾನು ನೋಡಿದ್ದನ್ನು ಆಧರಿಸಿ ಹೇಳುವುದಾದರೆ ಇಸ್ರೇಲ್ ಆಸ್ಪತ್ರೆಯ ಮೇಲೆ ಬಾಂಬ್ ಹಾಕಿಲ್ಲ. ಅದನ್ನು ಮಾಡಿದ್ದು ಬೇರೆಯವರ ತಂಡ’ ಎನ್ನುವ ಮೂಲಕ ಇಸ್ರೇಲ್‌ಗೆ ಕ್ಲೀನ್‌ಚಿಟ್ ನೀಡಿದ್ದಾರೆ.
ಈ ಮೂಲಕ ಆಸ್ಪತ್ರೆ ಮೇಲಿನ ದಾಳಿಯ ಘಟನೆಗೆ ಹಮಾಸ್ ಅನ್ನು ನೇರವಾಗಿ ಉಲ್ಲೇಖಿಸದೆ ‘ಬೇರೆಯವರ ತಂಡ’ ಎಂದು ಹೇಳಿ, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದು, ಈಗ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
🇵🇸🇮🇱 Damage caused by a Hamas rocket compared to damage caused by an Israeli airstrike.
Now which one do you think hit the hospital? pic.twitter.com/mZ9LvtBr98
— Censored Men (@CensoredMen) October 18, 2023
‘ತನ್ನನ್ನು ರಕ್ಷಿಸಿಕೊಳ್ಳಲು ಇಸ್ರೇಲ್‌ಗೆ ಬೇಕಾದ ಎಲ್ಲವನ್ನೂ ವಾಷಿಂಗ್ಟನ್ ನೀಡುತ್ತದೆ. ಅಕ್ಟೋಬರ್ 7ರಂದು ನಡೆದ ಹಠಾತ್ ದಾಳಿಯಲ್ಲಿ ಇಸ್ರೇಲಿ ನಾಗರಿಕರ ಹತ್ಯೆಯು ಹಮಾಸ್, ಐಸಿಸ್‌ಗಿಂತಲೂ ಕೆಟ್ಟದಾಗಿದೆ. ಹಮಾಸ್ ಪ್ಯಾಲೆಸ್ತೀನ್ ಜನರ ಶತ್ರುಗಳು. ಹಮಾಸ್ ವಿರುದ್ಧ ಅಮೆರಿಕ ಇಸ್ರೇಲ್ ಜತೆ ನಿಂತಿದೆ ಎಂದು ಇಲ್ಲಿ ಹೇಳಬಯಸುತ್ತೇನೆ’ ಎಂದು ಬೈಡನ್ ಹೇಳಿದರು.
🇮🇱🇵🇸 MSNBC reporter challenges Israeli claims that Hamas bombed the Gaza hospital, saying:
❌ We have not seen any evidence for Israel’s claims
❌ Palestinian rockets are not large enough to do this much damageI’m guessing he will now lose his job pic.twitter.com/TjP3QPjUKb
— Jackson Hinkle 🇺🇸 (@jacksonhinklle) October 18, 2023
ಈ ವೇಳೆ ಬೈಡನ್ ಬಲಬದಿಯಲ್ಲಿ ಕುಳಿತಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಲೆಯಲ್ಲಾಡಿಸುತ್ತಿದ್ದ ದೃಶ್ಯ ಕಂಡು ಬಂತು. ಅಮೆರಿಕ ಅಧ್ಯಕ್ಷರ ಹೇಳಿಕೆಯು, ಸ್ವಂತದ್ದಲ್ಲ. ಇಸ್ರೇಲ್ ಹೇಳಿದ್ದನ್ನಷ್ಟೇ ಹೇಳಿದ್ದಾರೆ. ಇಸ್ರೇಲ್ ನಡೆಸಿರುವ ಯುದ್ಧಾಪರಾಧವನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಅಮೆರಿಕ ತಯಾರಿಲ್ಲ ಎಂದು ನೆಟ್ಟಿಗರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಬೈಡನ್ ವಿರುದ್ಧ ಕಿಡಿಕಾರಿದ್ದಾರೆ.