- ತಿರುಮಣಿಯಲ್ಲಿನ ಸೋಲಾರ್ ಪಾರ್ಕ್ ವೈಮಾನಿಕ ಸಮೀಕ್ಷೆ
- ರೈತರು ಒಪ್ಪಿ ಭೂಮಿ ನೀಡಿದರೆ ಸೋಲಾರ್ ಪಾರ್ಕ್ ವಿಸ್ತರಣೆ
ಪಾವಗಡ ತಿರುಮಣಿಯಲ್ಲಿನ ಸೋಲಾರ್ ಪಾರ್ಕ್ ಅನ್ನು 10 ಸಾವಿರ ಎಕರೆಗೆ ವಿಸ್ತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ಇಂದು ಇಂಧನ ಸಚಿವ ಕೆ ಜೆ ಜಾರ್ಜ್ ಜೊತೆ ಪಾವಗಡ ಸೋಲಾರ್ ಪಾರ್ಕ್ ವೈಮಾನಿಕ ಸಮೀಕ್ಷೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯೋಜನೆಯನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದರು.
ಸೋಲಾರ್ ಪಾರ್ಕ್ಗೆ ಭೂಮಿ ನೀಡಿದ ರೈತರಿಗೆ ಭೂಮಿ ಕೊಟ್ಟಿದ್ದಕ್ಕೆ ಸಮಾಧಾನವಿದೆ. ಅಗ್ರಿಮೆಂಟ್ನಂತೆ ಜಮೀನು ನೀಡಿದ ರೈತರ ಖಾತೆಗೆ ಹಣ ಹೋಗುತ್ತಿದೆ, ಪ್ರತಿ ವರ್ಷ ಅವರಿಗೆ 25 ಸಾವಿರ ಬಾಡಿಗೆ ನೀಡಲಾಗುತ್ತಿದೆ ಎಂದು ಶಿವಕುಮಾರ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ?:ಬಿಜೆಪಿ ಸರ್ಕಾರದ ಅವಧಿಯ ಬಿಟ್ ಕಾಯಿನ್ ಹಗರಣ ಮರುತನಿಖೆ: ಗೃಹ ಸಚಿವ ಪರಮೇಶ್ವರ್
ಸೋಲಾರ್ ಪಾರ್ಕ್ ವಿಸ್ತರಣೆಗೆ ನಾವು ಸಿದ್ದವಿದ್ದೇವೆ. ಹಿಂದಿನ ನಿಯಮದಂತೆ ರೈತರು ಮುಂದೆ ಬಂದರೆ ಯೋಜನೆ ವಿಸ್ತರಿಸುತ್ತೇವೆ ಎಂದ ಶಿವಕುಮಾರ್, ಈ ಹಿಂದೆ ವಿಶ್ವದಲ್ಲೇ ನಂಬರ್ 1 ಆಗಿದ್ದ ರಾಜ್ಯ ಈಗ ರಾಜಸ್ಥಾನದಿಂದ ಪೈಪೋಟಿ ಎದುರಿಸುತ್ತಿದೆ ಎಂದರು.
ಹಾಗೆಯೇ ರಾಜ್ಯದ ಉದ್ದಗಲಕ್ಕೂ ರೈತರ ಪಂಪ್ ಸೆಟ್ಗೆ ಅವರೇ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಕುಸುಮ ಯೋಜನೆ ರೂಪಿಸುತ್ತಿದ್ದೇವೆ. ಈ ಯೋಜನೆ ಸಾಕಾರವಾದರೆ ರೈತರು ಸ್ವಾವಲಂಬಿಗಳಾಗಬಹುದು ಎಂದು ಹೇಳಿದರು.