ಇಂದು ಬಿಲ್ಕಿಸ್ ಬಾನೊ, ನಾಳೆ ಇನ್ಯಾರೋ, ಕಾರಣಕೊಡಿ: ಗುಜರಾತ್ ಸರ್ಕಾರಕ್ಕೆ ಸುಪ್ರೀಂ ‍ಛಾಟಿ

Date:

Advertisements
ಅತ್ಯುನ್ನತ ಮಾನದಂಡ, ಅಧಿಕಾರವಿದ್ದರೂ, ನ್ಯಾಯಾಂಗದಿಂದ ಶಿಕ್ಷೆಗೊಳಗಾದ ಅಪರಾಧಿಗಳನ್ನು ಕಾರ್ಯಾಂಗ ಬಿಡುಗಡೆ ಮಾಡಬೇಕಾದರೆ ಸೂಕ್ತ ಕಾರಣಗಳನ್ನು ಕೊಡಲೇಬೇಕು ಎಂದು ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಕೇಂದ್ರ ಮತ್ತು ಗುಜರಾತ್ ಸರ್ಕಾರಕ್ಕೆ ತಾಕೀತು ಮಾಡಿದ ಸುಪ್ರೀಂ ಕೋರ್ಟ್

ಬಿಲ್ಕಿಸ್ ಬಾನೊ ಪ್ರಕರಣದ 11 ಅಪರಾಧಿಗಳನ್ನು ಶಿಕ್ಷೆಯ ಅವಧಿ ಪೂರ್ಣಗೊಳಿಸುವ ಮೊದಲೇ ಬಿಡುಗಡೆ ಮಾಡಲು ಸೂಕ್ತ ಕಾರಣಗಳನ್ನು ಕೊಡಿ ಎಂದು ಸುಪ್ರೀಂಕೋರ್ಟ್ ಗುಜರಾತ್ ಸರ್ಕಾರಕ್ಕೆ ಆದೇಶಿಸಿದೆ.

ಬಿಲ್ಕಿಸ್ ಬಾನೊ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರ ನ್ಯಾಯಪೀಠವು, “ಸಮಾಜದ ಮೇಲೆ ತೀವ್ರ ಪರಿಣಾಮ ಬೀರುವಂತಹ ಇಂತಹ ಕ್ರೂರ ಅಪರಾಧಗಳಿಗೆ ಬಿಡುಗಡೆ ಭಾಗ್ಯ ಕೊಟ್ಟಿದ್ದೀರಿ. ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟು ಅಧಿಕಾರ ಚಲಾಯಿಸಬೇಕು” ಎಂದು ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ರಾಜ್ಯ ಸರ್ಕಾರದ ನಿರ್ಧಾರವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದ ಮಾತ್ರಕ್ಕೆ ಆಲೋಚನೆ ಮಾಡದೇ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬಾರದು ಎಂದು ನ್ಯಾಯಪೀಠ ಹೇಳಿದೆ.

Advertisements

“ರಾಜ್ಯ ಸರ್ಕಾರ ಆಲೋಚಿಸಿ ನಿರ್ಧಾರ ಕೈಗೊಂಡಿದೆಯೇ ಎನ್ನುವುದು ಮುಖ್ಯ ಪ್ರಶ್ನೆ. ಈ ನಿರ್ಧಾರ ಕೈಗೊಳ್ಳಲು ಆಧಾರವಾಗಿರುವ ಅಂಶಗಳು ಯಾವುವು ಇತ್ಯಾದಿ ಮುಖ್ಯವಾಗುತ್ತದೆ. ನ್ಯಾಯಾಂಗದ ಆದೇಶದಲ್ಲಿ ಅಪರಾಧಿಗಳು ತಮ್ಮ ಮುಂದಿನ ಸಹಜ ಆಯಸ್ಸನ್ನು ಜೈಲಿನಲ್ಲಿ ಕಳೆಯಬೇಕು ಎಂದು ಹೇಳಲಾಗಿದೆ. ಆದರೆ ಕಾರ್ಯಾಂಗದ ಆದೇಶದಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ. ಇಂದು ಈ ಮಹಿಳೆ (ಬಿಲ್ಕಿಸ್). ನಾಳೆ ನೀವೂ ಇರಬಹುದು ಅಥವಾ ನಾನೂ ಇರಬಹುದು. ವಸ್ತುನಿಷ್ಠವಾದ ಮಾನದಂಡಗಳು ಇರಬೇಕು. ನೀವು ಕಾರಣಗಳನ್ನು ಕೊಡದೆ ಇದ್ದಲ್ಲಿ, ನಾವೇ ತೀರ್ಮಾನಕ್ಕೆ ಬರಬೇಕಾಗುತ್ತದೆ” ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದ್ದಾರೆ.

ಸಂತ್ರಸ್ತೆ ಬಿಲ್ಕಿಸ್ ಬಾನು ಸ್ವತಃ ಸಲ್ಲಿಸಿದ ಅರ್ಜಿಯೂ ಸೇರಿದಂತೆ, ಅತ್ಯಾಚಾರಿ ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಿರುವ ಕುರಿತ ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠ ಏಪ್ರಿಲ್ 18ರಂದು (ಮಂಗಳವಾರ) ನಡೆಸಿದೆ. ಈ ಪ್ರಕರಣದಲ್ಲಿ ಮಾರ್ಚ್ 27ರಂದು ಸಂಬಂಧಿಸಿದವರಿಗೆ ನ್ಯಾಯ ಪೀಠ ನೋಟಿಸ್ ಕಳುಹಿಸಿದೆ.

“ಕಾಂಗ್ರೆಸಿಗ ವೆಂಕಟ ರೆಡ್ಡಿ ಅವರಿಗೆ ವಿನಾಯಿತಿ ನೀಡಿ ಬಿಡುಗಡೆ ಮಾಡಿದಾಗಲೇ ನ್ಯಾಯಾಂಗ ಕಾನೂನನ್ನು ಸ್ಪಷ್ಟಪಡಿಸಿತ್ತು. ‘ಉತ್ತಮ ಕಾಂಗ್ರೆಸಿಗ’ ಎನ್ನುವ ಮಾನದಂಡವನ್ನು ನ್ಯಾಯಾಂಗ ತಿರಸ್ಕರಿಸಿ ಬಿಡುಗಡೆಯನ್ನು ರದ್ದುಗೊಳಿಸಿತ್ತು. ಅತ್ಯುನ್ನತ ಮಾನದಂಡ, ಅಧಿಕಾರವಿದ್ದರೂ, ಕಾರಣಗಳನ್ನು ಕೊಡಲೇಬೇಕು” ಎಂದು ನ್ಯಾಯಮೂರ್ತಿ ಜೋಸೆಫ್ ಪ್ರತಿವಾದಿಗಳಿಗೆ ತಾಕೀತು ಮಾಡಿದ್ದಾರೆ. 

ಅಲ್ಲದೆ, ಬಿಡುಗಡೆ ಮಾಡಿರುವ ವಿವರಗಳಿರುವ ಕಡತಗಳನ್ನು ಮುಂದಿಡುವಂತೆ ಕೇಳಿದ್ದಾರೆ. ಗುಜರಾತ್ ಸರ್ಕಾರಕ್ಕೆ ಮೇ 1ರೊಳಗೆ ಅಫಿದಾವತ್ ಸಲ್ಲಿಸಲು ಸುಪ್ರೀಂಕೋರ್ಟ್ ಸೂಚಿಸಿದೆ.

ಈ ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ಮೇ 2ಕ್ಕೆ ಮುಂದೂಡಿದೆ. 

ಕೇಂದ್ರ ಮತ್ತು ಗುಜರಾತ್ ಸರ್ಕಾರದ ಪರ ವಾದಿಸಿದ ಎಎಸ್‌ಜಿ ಎಸ್‌ವಿ ರಾಜು ಅವರು ಮಾಧ್ಯಮಗಳಿಗೆ ಉತ್ತರಿಸಿ, “ಸೋಮವಾರದೊಳಗೆ ಅಫಿದಾವತ್ ಸಲ್ಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ” ಎಂದು ಹೇಳಿದ್ದಾರೆ.

ಆರಂಭದಲ್ಲಿ ಅಪರಾಧಿಗಳ ಪರ ವಕೀಲರು ಪ್ರತಿಕ್ರಿಯೆ ನೀಡಲು ಇನ್ನಷ್ಟು ಸಮಯ ಯಾಚಿಸಿದ್ದರು. ಆದರೆ ಅರ್ಜಿದಾರರ ಪರ ವಕೀಲರು ಇದಕ್ಕೆ ಬಲವಾಗಿ ವಿರೋಧಿಸಿದರು. “ಪ್ರತೀ ಬಾರಿ ಒಬ್ಬರಲ್ಲದಿದ್ದರೆ ಮತ್ತೊಬ್ಬರು ವಿಚಾರಣೆ ಮುಂದೂಡಲು ಹೇಳುತ್ತಿದ್ದಾರೆ” ಎಂದು ಅರ್ಜಿದಾರರ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದರು.

ಈ ಸುದ್ದಿ ಓದಿದ್ದೀರಾ?: ಸುದ್ದಿ ನೋಟ | ಸುಪ್ರೀಂ ಕೋರ್ಟ್‌ನಲ್ಲಿ ಸಲಿಂಗ ವಿವಾಹ ಮಾನ್ಯತೆಗೆ ಸಲ್ಲಿಸಿದ ಅರ್ಜಿಗಳ ವಿಚಾರಣೆ

ಅಪರಾಧಿಗಳು ಪ್ರಕರಣದ ವಿಚಾರಣೆಯನ್ನು ತಡ ಮಾಡಲು ಸಮಯ ಕೇಳುತ್ತಿದ್ದಾರೆ ಎನ್ನುವ ವಾದವನ್ನು ನ್ಯಾಯಪೀಠ ಪುರಸ್ಕರಿಸಿತು. ಈಗಾಗಲೇ ಪ್ರತಿಕ್ರಿಯೆಗೆ ಸಾಕಷ್ಟು ಸಮಯ ಕೊಡಲಾಗಿದೆ ಎಂದು ನ್ಯಾಯಪೀಠ ಹೇಳಿದೆ. “ಪ್ರತೀಬಾರಿ ವಿಚಾರಣೆ ಸಂದರ್ಭ ಒಬ್ಬ ಆರೋಪಿ ವಿಚಾರಣೆ ಮುಂದೂಡಲು ಕೋರುತ್ತಾರೆ. ನಾಲ್ಕು ವಾರಗಳ ನಂತರ ಮತ್ತೊಬ್ಬ ಆರೋಪಿ ಪ್ರತಿಕ್ರಿಯೆ ಸಲ್ಲಿಸಲು ಸಮಯ ಕೇಳಬಹುದು. ಹೀಗಾದರೆ ಡಿಸೆಂಬರ್‌ವರೆಗೆ ಈ ಪ್ರಕರಣ ಮುಂದೂಡಬೇಕಾಗುತ್ತದೆ. ಇಂತಹ ತಡ ಮಾಡುವ ಕಾರ್ಯಯೋಜನೆ ಬಗ್ಗೆ ನಮಗೆ ಅರಿವಿದೆ” ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.

ನಂತರ ಎಎಸ್‌ಜಿ ಎಸ್‌ವಿ ರಾಜು ಅವರು ವಿಚಾರಣೆಗೆ ಇನ್ನೊಂದು ಸ್ಥಿರ ದಿನಾಂಕವನ್ನು ನಿರ್ಧರಿಸುವಂತೆ ಸಲಹೆ ನೀಡಿದರು.

ವಿಚಾರಣೆ ಸಂದರ್ಭದಲ್ಲಿ ಅಪರಾಧಿಗಳಿಗೆ ಶಿಕ್ಷೆ ಅನುಭವಿಸುತ್ತಿದ್ದ ಅವಧಿಯಲ್ಲೂ ಅಕ್ಷರಶಃ ಮೂರು ವರ್ಷಗಳ ಪೆರೋಲ್ ನೀಡಿರುವುದನ್ನೂ ಸುಪ್ರೀಂ ಕೋರ್ಟ್ ಗಮನಿಸಿದೆ. “ಪ್ರತಿಯೊಬ್ಬ ಅಪರಾಧಿಗೂ 1000ಕ್ಕೂ ಹೆಚ್ಚು ದಿನಗಳ ಪೆರೋಲ್ ನೀಡಲಾಗಿದೆ. ಒಬ್ಬ ಅಪರಾಧಿಯಂತೂ 1500 ದಿನಗಳ ಪೆರೋಲ್ ಪಡೆದಿದ್ದರು. ನೀವು ಎಂಥಾ ನೀತಿ ಅನುಸರಿಸುತ್ತಿದ್ದೀರಿ” ಎಂದು ನ್ಯಾಯಪೀಠ ಗುಜರಾತ್ ಸರ್ಕಾರವನ್ನು ಪ್ರಶ್ನಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X