ನಾವು ಘರ್ ವಾಪ್ಸಿ ಹೆಸರಿನಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡುವ ಕಾರ್ಯಕ್ಕೆ ಕೈಹಾಕಿದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷವೂ ಅರ್ಧದಷ್ಟು ಖಾಲಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಸೇರ್ಪಡೆ ಕುರಿತು ಯಾರಿಗೂ ಷರತ್ತು ಹಾಕಿಲ್ಲ. ಪಕ್ಷದ ತತ್ವ-ಸಿದ್ಧಾಂತ ಒಪ್ಪಿದರೆ ಯಾರಿಗಾದರೂ ಸ್ವಾಗತ ಮಾಡುತ್ತೇವೆ” ಎಂದರು.
“ಸದ್ಯ ಬಿಜೆಪಿ, ಜೆಡಿಎಸ್ ಅವರ ಅಸ್ತಿತ್ವ ಕಾಪಾಡಿಕೊಳ್ಳಲಿ. ಸಚಿವ ಚೆಲುವರಾಯಸ್ವಾಮಿಗೆ ಕೆಲವರು ಸಂಪರ್ಕದಲ್ಲಿ ಇರಬಹುದು. ಕೆಲವರು ನನ್ನ ಜೊತೆಗೂ ಸಂಪರ್ಕದಲ್ಲಿದ್ದಾರೆ” ಎಂದು ತಿಳಿಸಿದರು.
ವಿಧಾನಪರಿಷತ್‌ಗೆ ಸುಧಾಮ್ ದಾಸ್ ಅವರ ನಾಮನಿರ್ದೇಶನಕ್ಕೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ‘ಸುಧಾಮ್ ದಾಸ್ ಅವರಿಗೆ ಕೊಡಲೇಬಾರದೆಂದು ಯಾರು ಹೇಳಿಲ್ಲ. ಬದಲಾಗಿ, ಪರಿಶೀಲಿಸಿ ಎಂದು ಪತ್ರ ಬರೆದಿದ್ದಾರೆ. ಈ ಕುರಿತು ಅಂತಿಮ ತೀರ್ಮಾನ ಹೈಕಮಾಂಡ್‌ನದ್ದು” ಎಂದು ಹೇಳಿದರು.