ಗುಜರಾತ್ | ಮುಸ್ಲಿಂ ಆಗಿದ್ದಕ್ಕೆ ಟಾಪರ್‌ ಆಗಿದ್ದರೂ ಬಿಟ್ಟು ಉಳಿದವರಿಗೆ ಬಹುಮಾನ ನೀಡಿದ ಶಾಲೆ!

Date:

  • ಧರ್ಮದ ಆಧಾರದ ಮೇಲೆ ಉದ್ದೇಶಪೂರ್ವಕವಾಗಿ ತಾರತಮ್ಯ : ಪೋಷಕರ ಆರೋಪ
  • ‘ಇದು ಮೋದಿಯ ಭಾರತದ ಸ್ಥಿತಿ’ ಎಂದು ಟ್ವೀಟ್ ಮಾಡಿದ ಲೇಖಕ ಸಲಿಲ್ ತ್ರಿಪಾಠಿ

10ನೇ ತರಗತಿಯಲ್ಲಿ ಶೇ.87 ಅಂಕ ಪಡೆದು ಟಾಪರ್ ಆಗಿದ್ದ ಮುಸ್ಲಿಂ ವಿದ್ಯಾರ್ಥಿನಿಯನ್ನು ಬಿಟ್ಟು, ಉಳಿದವರಿಗೆ ಬಹುಮಾನ ವಿತರಿಸುವ ಮೂಲಕ ಶಾಲೆಯ ಆಡಳಿತ ಮಂಡಳಿ ತಾರತಮ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಆಗಸ್ಟ್‌ 15ರ ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯಂದೇ ಗುಜರಾತಿನ ಮೆಹ್ಸಾನಾ ಜಿಲ್ಲೆಯ ಲುನಾವಾ ಗ್ರಾಮದಲ್ಲಿರುವ ಕೆ ಟಿ ಪಟೇಲ್ ಸ್ಮೃತಿ ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ.

ಈ ಘಟನೆಯನ್ನು ಆ.18ರಂದು ಲೇಖಕ, ಪತ್ರಕರ್ತ ಸಲಿಲ್ ತ್ರಿಪಾಠಿ, ಟ್ವೀಟ್ ಮಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆಗಿದ್ದೇನು?

ಶಾಲೆಯ ವಿದ್ಯಾರ್ಥಿನಿ ಅರ್ನಾಝ್ ಬಾನು, 10ನೇ ತರಗತಿಯಲ್ಲಿ ಶೇ.87 ಅಂಕ ಪಡೆದು ಟಾಪರ್ ಆಗಿದ್ದಳು. ಸ್ವಾತಂತ್ರ್ಯೋತ್ಸವದ ದಿನ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳನ್ನು ಗೌರವಿಸಲು ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.

ಕಾರ್ಯಕ್ರಮಕ್ಕೆ ತೆರಳಿದ್ದ ಅರ್ನಾಝ್ ಬಾನು ಒಬ್ಬಾಕೆಯನ್ನು ಬಿಟ್ಟು ಎಲ್ಲರಿಗೂ ಬಹುಮಾನ ವಿತರಿಸಲಾಗಿತ್ತು. ಬೇಸರಗೊಂಡ ಅರ್ನಾಝ್ ಬಾನು ಕಣ್ಣೀರು ಹಾಕುತ್ತಾ ಮನೆಗೆ ಮರಳಿದ್ದಾರೆ ಎಂದು ವರದಿಯಾಗಿದೆ.

ಪೋಷಕರು ಮಗಳ ಕಣ್ಣೀರಿನ ವಿಚಾರವನ್ನು ಪ್ರಶ್ನಿಸಿದಾಗ, ‘ತನ್ನ ಹೆಸರನ್ನು ವೇದಿಕೆಯಲ್ಲಿ ಕರೆಯಲೇ ಇಲ್ಲ. ನನ್ನನ್ನು ಬಿಟ್ಟು ನನ್ನ ನಂತರದ ಅಂಕ ಗಳಿಸಿದ್ದ ಉಳಿದವರೆಲ್ಲರಿಗೂ ಬಹುಮಾನ ನೀಡಿದ್ದಾರೆ’ ಎಂದು ಹೇಳುವ ಮೂಲಕ ತನಗಾದ ಅನುಭವವನ್ನು ಬಿಚ್ಚಿಟ್ಟಿದ್ದಾಳೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಅರ್ನಾಝ್ ಬಾನು ತಂದೆ ಸನ್ವರ್ ಖಾನ್, ಅವಳು ತನ್ನದಾಗಬೇಕಾದ ಪ್ರಶಸ್ತಿಯನ್ನು ಎರಡನೇ ಸ್ಥಾನವನ್ನು ಪಡೆದ ವಿದ್ಯಾರ್ಥಿಗೆ ನೀಡಲಾಗಿದೆ. ಈ ಬಗ್ಗೆ ಶಾಲೆಯವರಲ್ಲಿ ಪ್ರಶ್ನಿಸಿದಾಗ ಅಸ್ಪಷ್ಟವಾದ ಉತ್ತರ ನೀಡಿದ್ದಾರೆ. ಕೇಳಿದರೆ, ಜನವರಿ 26ರ ಗಣರಾಜ್ಯೋತ್ಸವದಂದು ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ನನ್ನ ಪ್ರಶ್ನೆ ಇರುವುದು, ಉಳಿದವರಿಗೆ ಆ.15 ರಂದು ಅದನ್ನು ನೀಡಿರುವಾಗ ಈಕೆಗೆ ಯಾಕೆ ನೀಡಲಿಲ್ಲ. ನಮ್ಮ ಕುಟುಂಬವು ಯಾವುದೇ ರೀತಿಯ ತಾರತಮ್ಯವನ್ನು ಎದುರಿಸದೆ ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿದೆ. ಆದರೆ ಈಗ ನನ್ನ ಮಗಳನ್ನು ಧರ್ಮದ ಕಾರಣಕ್ಕೆ, ಟಾಪರ್ ಆಗಿದ್ದರೂ ಉದ್ದೇಶಪೂರ್ವಕವಾಗಿ ಪ್ರಶಸ್ತಿಯಿಂದ ಕಡೆಗಣಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕೆಟಿ ಪಟೇಲ್ ಸ್ಮೃತಿ ವಿದ್ಯಾಲಯದ ಪ್ರಾಂಶುಪಾಲ ಬಿಪಿನ್ ಪಟೇಲ್ ‘ವೈಬ್ಸ್ ಆಫ್ ಇಂಡಿಯಾ’ ಎಂಬ ವೆಬ್‌ಸೈಟ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ‘ನಮ್ಮ ಶಾಲೆಯು ಯಾವುದೇ ರೀತಿಯ ತಾರತಮ್ಯದ ನೀತಿಯನ್ನು ಅನುಸರಿಸಿಲ್ಲ. ಗೊತ್ತುಪಡಿಸಿದ ದಿನದಂದು ಅವರು ಗೈರು ಹಾಜರಾಗಿದ್ದರು, ಅರ್ಹ ವಿದ್ಯಾರ್ಥಿನಿಗೆ ತನ್ನ ಬಹುಮಾನವನ್ನು ಜ.26ರ ಗಣರಾಜ್ಯೋತ್ಸವದಂದು ನೀಡಲಾಗುವುದು’ ಎಂದು ಸಮಜಾಯಿಷಿ ನೀಡಿರುವುದರ ಜೊತೆಗೆ ವಿದ್ಯಾರ್ಥಿನಿ ಅರ್ನಾಝ್ ಬಾನು ಅಂದು ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನು ವಿರೋಧಿಸಿರುವ ಆಕೆಯ ತಂದೆ ಸನ್ವರ್ ಖಾನ್, ‘ಪ್ರಾಂಶುಪಾಲರು ತಮ್ಮ ತಪ್ಪಿನ ಸಮರ್ಥನೆಗೆ ಈ ರೀತಿ ಹೇಳಿಕೆ ನೀಡಿರಬಹುದು. ಆ ದಿನ ನನ್ನ ಮಗಳು ಶಾಲೆಗೆ ಹೋಗಿದ್ದಳು. ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬೇಕಾದರೆ ಅಂದಿನ ದೃಶ್ಯಾವಳಿಗಳನ್ನು ಗಮನಿಸಲಿ. ಆಕೆಗೆ ಪ್ರಶಸ್ತಿ ನೀಡದಿರುವುದಕ್ಕೆ ಶಾಲೆಯ ಪ್ರಾಂಶುಪಾಲರು ಕಾರಣ ನೀಡಿಲ್ಲ. ನನ್ನ ಮಗಳಿಗೆ ಬಹುಮಾನ ನೀಡದಿದ್ದರೂ ಪರವಾಗಿರಲಿಲ್ಲ. ಆದರೆ ಸಮಾರಂಭದಲ್ಲಿ ನನ್ನ ಮಗಳ ಹೆಸರನ್ನು ಘೋಷಿಸಿದರೂ ಅವಳು ಹೆಮ್ಮೆಪಡುತ್ತಿದ್ದಳು. ಶಾಲೆಯ ವಿದ್ಯಾರ್ಥಿಗಳ ನಡುವೆ ಆಕೆಗೆ ಈ ರೀತಿ ಆಗಿರುವುದಕ್ಕೆ ಈಗ ತುಂಬಾ ನೊಂದುಕೊಂಡಿದ್ದಾಳೆ’ ಎಂದು ತಿಳಿಸಿದ್ದಾರೆ.

ಶಾಲೆಯ ಶಿಕ್ಷಕ ಅನಿಲ್ ಪಟೇಲ್ ಪ್ರತಿಕ್ರಿಯಿಸಿದ್ದು, ‘ಆ.15ರ ಕಾರ್ಯಕ್ರಮ ನಮ್ಮ ವಿದ್ಯಾರ್ಥಿಗಳ ಸಾಧನೆಗಳನ್ನು ಗುರುತಿಸುವ ಸಣ್ಣ ಕಾರ್ಯಕ್ರಮ. ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿದವರಿಗೆ ಬಹುಮಾನಗಳನ್ನು ಜ. 26ರಂದು ನೀಡಲಾಗುತ್ತದೆ. ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ನಮ್ಮ ಎಲ್ಲ ವಿದ್ಯಾರ್ಥಿಗಳ ಪ್ರಯತ್ನಗಳನ್ನು ಗುರುತಿಸಲು ನಾವು ಬದ್ಧರಾಗಿದ್ದೇವೆ’ ಎಂದು ಸಮಜಾಯಿಷಿ ನೀಡಿದ್ದಾರೆ.

ಲೇಖಕ, ಪತ್ರಕರ್ತ ಸಲಿಲ್ ತ್ರಿಪಾಠಿ, ‘ಇದು ಮೋದಿಯ ಭಾರತದ ಸ್ಥಿತಿ’ ಎಂಬ ಒಕ್ಕಣೆಯೊಂದಿಗೆ ಟ್ವೀಟ್‌ ಮಾಡಿದ ಬಳಿಕ ಘಟನೆ ಸೋಷಿಯಲ್‌ ಮೀಡಿಯಾಗಳಲ್ಲಿ ಈ ಸುದ್ದಿ ಹರಿದಾಡಿದೆ.

ಈ ಘಟನೆಯನ್ನು ಟ್ವಿಟರ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಖಂಡಿಸಿದ್ದು, ‘ಧರ್ಮದ ಕಾರಣಕ್ಕೆ ಪ್ರತಿಭಾವಂತ ವಿದ್ಯಾರ್ಥಿನಿಗೆ ದೇಶದ ಪ್ರಧಾನಿಯ ತವರು ರಾಜ್ಯದಲ್ಲಿ ಈ ರೀತಿ ನಡೆದಿರುವುದು ನಿಜಕ್ಕೂ ದುರದೃಷ್ಟಕರ’ ಎಂದು ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅನಧಿಕೃತ ಕೋಚಿಂಗ್‌ ಕೇಂದ್ರಗಳ ವಿರುದ್ಧ ಕ್ರಮಕ್ಕೆ ದಲಿತ ಸೇನೆ ಆಗ್ರಹ

ಔರಾದ ತಾಲೂಕಿನಾದ್ಯಂತ ನಿಯಮಬಾಹಿರವಾಗಿ ನಡೆಯುತ್ತಿರುವ ಕೋಚಿಂಗ್ ಕೇಂದ್ರಗಳು ಹಾಗೂ ಅನಧಿಕೃತ ವಸತಿ...

ಡಿಸೆಂಬರ್‌ 20, 21, 22 ರಂದು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಡಿಸೆಂಬರ್‌ 20,...

ಬಾಲಸೋರ್‌ ದುರಂತ ಮಾಸುವ ಮುನ್ನವೇ ಮತ್ತೊಂದು ರೈಲು ಅಪಘಾತ | Railway accident | West Bengal

ಒಡಿಶಾದ ಬಾಲಸೋರ್‌ ನಲ್ಲಿ ನಡೆದ ಭೀಕರ ದುರಂತ ಮಾಸುವ ಮುನ್ನವೇ ಮತ್ತೊಂದು...

ಪರ್ಯಾಯ ಮಾಧ್ಯಮಗಳತ್ತ ಜನರ ಚಿತ್ತ

2024ರ ಲೋಕಸಭಾ ಚುನಾವಣೆಯ ವರದಿ ಮತ್ತು ವೀಕ್ಷಣೆಯಲ್ಲಿ ಮುಖ್ಯವಾಹಿನಿ ಮಾಧ್ಯಮಗಳಿಗಿಂತ ಪರ್ಯಾಯ...