- ದಾಖಲೆ ನೋಡಿದ ಮೇಲೆ ಆ ಸಚಿವರನ್ನು ಸಂಪುಟದಿಂದ ವಜಾ ಮಾಡುತ್ತೀರಾ?
- ‘ಕಾಂಗ್ರೆಸ್ ಯೋಗ್ಯತೆಗೆ ಎರಡು ವರ್ಷ ಬಿಜೆಪಿ ವಿರುದ್ಧ ಒಂದೇ ಒಂದು ದಾಖಲೆ ನೀಡಲಿಲ್ಲ’
ಅಧಿಕಾರಕ್ಕೆ ಬಂದ ಒಂದೂವರೆ ತಿಂಗಳು ಆಗಿಲ್ಲ. ಆಗಲೇ ಕಾಂಗ್ರೆಸ್‌ನವರು ಹಗಲು ದರೋಡೆಗೆ ಇಳಿದಿದ್ದಾರೆ. ವರ್ಗಾವಣೆ ದಂಧೆಗೆ ಎಷ್ಟು ಹಣ ನಿಗದಿ ಮಾಡಿದ್ದೀರೆಂದು ಗೊತ್ತಿದೆ. ಟೈಮ್ ಬಂದಾಗ ಎಲ್ಲ ದಾಖಲೆ ಕೊಡುವೆ. ಸದನದಲ್ಲೇ ದಾಖಲೆ ನೀಡುವೆ, ನಾನು ನೀಡುವ ದಾಖಲೆ ನೋಡಿ ಆ ಸಚಿವರನ್ನು ಸಂಪುಟದಿಂದ ವಜಾ ಮಾಡುತ್ತೀರಾ? ಎಂದು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಕಮಿಷನ್ ಆರೋಪ ಕುರಿತು ದಾಖಲೆ ಕೊಟ್ಟು ಆರೋಪ ಮಾಡಲಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದ ಹೇಳಿಕೆಗೆ ಕುಮಾರಸ್ವಾಮಿ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.
“ಬಿಜೆಪಿ ಸರ್ಕಾರದ ವಿರುದ್ಧ ಎರಡು ವರ್ಷ ಭ್ರಷ್ಟಾಚಾರ ಬಗ್ಗೆ ಆರೋಪ ಮಾಡಿ, ಪ್ರತಿದಿನ ತನಿಖೆ ತನಿಖೆ ಎಂದು ಗುಮ್ಮ ತೋರಿಸುತ್ತಿದ್ದರು. ಅವರ ಯೋಗ್ಯತೆಗೆ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಯಾವುದೇ ಒಂದೇ ಒಂದು ದಾಖಲೆ ನೀಡಿರಲಿಲ್ಲ” ಎಂದು ಕಿಡಿಕಾರಿದರು.
ಕೆಲವು ಸಚಿವರು ದಾಖಲೆ ಕೊಡಲಿ ಎಂದು ಕೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ದಾಖಲೆ ಕೊಡುತ್ತೇನೆ ತನಿಖೆ ಮಾಡೋ ಧಮ್ ನಿಮಗೆ ಇದೆಯಾ? ನನ್ನ ಕಾಲದಲ್ಲಿ ನಡೆದ ವರ್ಗಾವಣೆ ಬಗ್ಗೆಯೂ ತನಿಖೆ ಮಾಡಲಿ” ಎಂದು ಆಗ್ರಹಿಸಿದರು.
“ಕೆಲವರು ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಆದರೆ ಈಗಾಗಲೇ ಡಿಕೆ ಶಿವಕುಮಾರ್ ಸಿಎಂ ಕುರ್ಚಿಗೆ ಟವೆಲ್ ಹಾಕಿದ್ದಾರೆ. ನೋಡೋಣ ಎಷ್ಟು ದಿನ ಇರುತ್ತೆ ಈ ಸರ್ಕಾರ” ಎಂದರು.
ನಿನ್ನ ಮುಖ ಸ್ವಲ್ಪ ನೋಡಿಕೋ… ನೀನು ರಾತ್ರಿ ದರೋಡೆಗಾರ. ನೀನು ಮೊದಲ ಬಾರಿ ಮುಖ್ಯಮಂತ್ರಿ ಹೇಗೆ ಆದೆ ನಿನಗೆ ನೆನಪು ಇದೆಯಾ. ಇನ್ನೊಬ್ಬರ ಕಟ್ಟು ಕೊಯುವ ವ್ಯಕ್ತಿ. ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ ಜೊತೆ ಮೈತ್ರಿ ಟಿಕೆಟ್. ವಿಧಾನಸಭೆ ಚುನಾವಣೆ ಯಲ್ಲೇ ನಿನ್ನ ಯೋಗ್ಯತೆ ಇಡೀ ದೇಶಕ್ಕೆ ಗೊತ್ತಾಗಿದೆ. ಹೋಗಿ ಕುಳಿತುಕೊ ಮತ್ತೆ Singapore… 🤔🤔