“ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರೇ ಚುನಾವಣೆಯಲ್ಲಿ ಸೋತಿದ್ದರು. ಇನ್ನು ನಿತಿನ್ ಗಡ್ಕರಿ ಯಾವ ಲೆಕ್ಕ” ಎಂದು ನಾಗ್ಪುರದಲ್ಲಿ ಗಡ್ಕರಿ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ವಿಕಾಸ್ ಠಾಕ್ರೆ ಹೇಳಿದರು.
ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ವಿಕಾಸ್ ಠಾಕ್ರೆ , “ನಿತಿನ್ ಗಡ್ಕರಿ ಬರೀ ಕೆಲವೇ ಜನರಿಗೆ ಸಹಾಯವಾಗುವ ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತಾರೆ ಎಂದು ದೂರಿದರು. “ನಾನು ಸಿಂಹದ ಗುಹೆಯಲ್ಲಿ ಕೈ ಹಾಕಿದ್ದೇನೆಯೇ ಅಥವಾ ಸಿಂಹವು ಗುಡುಗುತ್ತದೆ ಎಂದು ಸಮಯ ಮಾತ್ರ ಹೇಳುತ್ತದೆ” ಎಂದು ತಿರುಗೇಟು ನೀಡಿದರು.
ಇದನ್ನು ಓದಿದ್ದೀರಾ? ಅಘೋಷಿತ ತುರ್ತು ಪರಿಸ್ಥಿತಿ: ಪ್ರಧಾನಿ ಮೋದಿಗೆ ಸೋಲು ಕಟ್ಟಿಟ್ಟ ಬುತ್ತಿ?
“ಪ್ರಜಾಪ್ರಭುತ್ವದಲ್ಲಿ ಮತದಾರರು ಪ್ರಬಲರೇ ಹೊರತು ಅಭ್ಯರ್ಥಿಯಲ್ಲ. ಯಾರು ಯಶಸ್ವಿಯಾಗುತ್ತಾರೆ, ಯಾರು ಮಣ್ಣು ಮುಕ್ಕುತ್ತಾರೆ ಎಂದು ಮತದಾರರೇ ನಿರ್ಧಾರ ಮಾಡುತ್ತಾರೆ. ಪ್ರಬಲ ವ್ಯಕ್ತಿಗಳಾದ ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಅವರೇ ಚುನಾವಣೆಯಲ್ಲಿ ಸೋತಿದ್ದಾರೆ” ಎಂದರು.
ಇನ್ನು ನಿತಿನ್ ಗಡ್ಕರಿ ಮೆಟ್ರೋ ರೈಲು, ಮೇಲ್ಸೇತುವೆ, ಇತರೆ ಅಭಿವೃದ್ಧಿ ಮಾಡಿದರಲ್ಲವೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಕಾಸ್ ಠಾಕ್ರೆ, “ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಇರುವಾಗ ನೀವು ಮನೆಯಲ್ಲಿ ಕುಳಿತು ಹೊಳೆಯುವ ಮೆಟ್ರೋ ರೈಲನ್ನು ನೋಡಲು ಸಾಧ್ಯವೇ?” ಎಂದು ಟಾಂಗ್ ನೀಡಿದರು.
ಇದನ್ನು ಓದಿದ್ದೀರಾ? ಕೇಂದ್ರ ಸಚಿವ ನಿತಿನ್ ಗಡ್ಕರಿ ‘ಬಾವಿಗೆ ಹಾರುವುದೇ ಲೇಸು’ ಎಂದಿದ್ದೇಕೆ?
“ಕಾಂಗ್ರೆಸ್ ಹೇಗೆ ಚುನಾವಣೆಯನ್ನು ಗೆದ್ದಿದೆ? ನಮ್ಮ ಕೆಲಸವನ್ನು ಜನರು ಮೆಚ್ಚಿಲ್ಲ ಎಂದಾದರೆ ನಮಗೆ ಠೇವಣಿ ಮಾಡಿದ ಚುನಾವಣಾ ಭದ್ರತಾ ಹಣ ಕೂಡಾ ವಾಪಾಸ್ ಸಿಗುತ್ತಿರಲಿಲ್ಲ” ಎಂದ ಠಾಕ್ರೆ, “ನಾವು ಅತೀ ಹೆಚ್ಚು ಮತ ಗಳಿಸಿ ಗೆಲುವು ಸಾಧಿಸುತ್ತೇವೆ ಎಂದು ಎಲ್ಲರೂ ಹೇಳಬಹುದು. ಐದು ಲಕ್ಷವೇಕೆ, 25 ಲಕ್ಷ ಮಾರ್ಜಿನ್‌ನಲ್ಲಿ ಗೆಲ್ಲುವುದಾಗಿ ಅವರು ಹೇಳಲಿ. ಆದರೆ ಚುನಾವಣೆ ಬಳಿಕವೇ ಉತ್ತರ ಸಿಗಲಿದೆ” ಎಂದರು.
“ಮತ ವಿಭಜನೆಯಾದಾಗ ಕಾಂಗ್ರೆಸ್ ಸೋತಿರುವುದನ್ನು ನೀವು ಲೋಕಸಭೆ ಚುನಾವಣೆಯ ಇತಿಹಾಸ ನೋಡಿದರೆ ತಿಳಿಯಬಹುದು. ಆದರೆ ಈಗ ಯಾವ ವಿಭಜನೆಯೂ ಇಲ್ಲ. ಪ್ರಜಾಪ್ರಭುತ್ವವನ್ನು ಉಳಿಸಲು ಎಲ್ಲ ವಿಪಕ್ಷಗಳು ಒಂದಾಗಿದೆ” ಎಂದು ವಿಕಾಸ್ ಠಾಕ್ರೆ ಹೇಳಿದರು.
2019ರ ಲೋಕಸಭೆ ಚುನಾವಣೆಯಲ್ಲಿ ನಿತಿನ್ ಗಡ್ಕರಿ ಶೇಕಡ 56ರಷ್ಟು ಮತವನ್ನು ಗಳಿಸಿ ಜಯ ಕಂಡರೆ ಶೇಕಡ 37ರಷ್ಟು ಮತ ಗಳಿಸಿದ ಕಾಂಗ್ರೆಸ್ ಪರಾಭವಗೊಂಡಿದೆ. ಇನ್ನು ಬಿಎಸ್‌ಪಿ 31,725 ಮತಗಳನ್ನು, ವಿಬಿಎ 26,128 ಮತಗಳನ್ನು ಗಳಿಸಿತ್ತು.