ಇಂದಿರಾ ಗಾಂಧಿ, ವಾಜಪೇಯಿಯೇ ಸೋತಿದ್ರು, ಗಡ್ಕರಿ ಯಾವ ಲೆಕ್ಕ: ಕಾಂಗ್ರೆಸ್‌ ಅಭ್ಯರ್ಥಿ ವಿಕಾಸ್ ಠಾಕ್ರೆ

Date:

“ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರೇ ಚುನಾವಣೆಯಲ್ಲಿ ಸೋತಿದ್ದರು. ಇನ್ನು ನಿತಿನ್ ಗಡ್ಕರಿ ಯಾವ ಲೆಕ್ಕ” ಎಂದು ನಾಗ್ಪುರದಲ್ಲಿ ಗಡ್ಕರಿ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ವಿಕಾಸ್ ಠಾಕ್ರೆ ಹೇಳಿದರು.

ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ವಿಕಾಸ್ ಠಾಕ್ರೆ , “ನಿತಿನ್ ಗಡ್ಕರಿ ಬರೀ ಕೆಲವೇ ಜನರಿಗೆ ಸಹಾಯವಾಗುವ ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತಾರೆ ಎಂದು ದೂರಿದರು. “ನಾನು ಸಿಂಹದ ಗುಹೆಯಲ್ಲಿ ಕೈ ಹಾಕಿದ್ದೇನೆಯೇ ಅಥವಾ ಸಿಂಹವು ಗುಡುಗುತ್ತದೆ ಎಂದು ಸಮಯ ಮಾತ್ರ ಹೇಳುತ್ತದೆ” ಎಂದು ತಿರುಗೇಟು ನೀಡಿದರು.

ಇದನ್ನು ಓದಿದ್ದೀರಾ?  ಅಘೋಷಿತ ತುರ್ತು ಪರಿಸ್ಥಿತಿ: ಪ್ರಧಾನಿ ಮೋದಿಗೆ ಸೋಲು ಕಟ್ಟಿಟ್ಟ ಬುತ್ತಿ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಪ್ರಜಾಪ್ರಭುತ್ವದಲ್ಲಿ ಮತದಾರರು ಪ್ರಬಲರೇ ಹೊರತು ಅಭ್ಯರ್ಥಿಯಲ್ಲ. ಯಾರು ಯಶಸ್ವಿಯಾಗುತ್ತಾರೆ, ಯಾರು ಮಣ್ಣು ಮುಕ್ಕುತ್ತಾರೆ ಎಂದು ಮತದಾರರೇ ನಿರ್ಧಾರ ಮಾಡುತ್ತಾರೆ. ಪ್ರಬಲ ವ್ಯಕ್ತಿಗಳಾದ ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಅವರೇ ಚುನಾವಣೆಯಲ್ಲಿ ಸೋತಿದ್ದಾರೆ” ಎಂದರು.

ಇನ್ನು ನಿತಿನ್ ಗಡ್ಕರಿ ಮೆಟ್ರೋ ರೈಲು, ಮೇಲ್ಸೇತುವೆ, ಇತರೆ ಅಭಿವೃದ್ಧಿ ಮಾಡಿದರಲ್ಲವೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಕಾಸ್ ಠಾಕ್ರೆ, “ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಇರುವಾಗ ನೀವು ಮನೆಯಲ್ಲಿ ಕುಳಿತು ಹೊಳೆಯುವ ಮೆಟ್ರೋ ರೈಲನ್ನು ನೋಡಲು ಸಾಧ್ಯವೇ?” ಎಂದು ಟಾಂಗ್ ನೀಡಿದರು.

ಇದನ್ನು ಓದಿದ್ದೀರಾ?  ಕೇಂದ್ರ ಸಚಿವ ನಿತಿನ್ ಗಡ್ಕರಿ ‘ಬಾವಿಗೆ ಹಾರುವುದೇ ಲೇಸು’ ಎಂದಿದ್ದೇಕೆ?

“ಕಾಂಗ್ರೆಸ್‌ ಹೇಗೆ ಚುನಾವಣೆಯನ್ನು ಗೆದ್ದಿದೆ? ನಮ್ಮ ಕೆಲಸವನ್ನು ಜನರು ಮೆಚ್ಚಿಲ್ಲ ಎಂದಾದರೆ ನಮಗೆ ಠೇವಣಿ ಮಾಡಿದ ಚುನಾವಣಾ ಭದ್ರತಾ ಹಣ ಕೂಡಾ ವಾಪಾಸ್ ಸಿಗುತ್ತಿರಲಿಲ್ಲ” ಎಂದ ಠಾಕ್ರೆ, “ನಾವು ಅತೀ ಹೆಚ್ಚು ಮತ ಗಳಿಸಿ ಗೆಲುವು ಸಾಧಿಸುತ್ತೇವೆ ಎಂದು ಎಲ್ಲರೂ ಹೇಳಬಹುದು. ಐದು ಲಕ್ಷವೇಕೆ, 25 ಲಕ್ಷ ಮಾರ್ಜಿನ್‌ನಲ್ಲಿ ಗೆಲ್ಲುವುದಾಗಿ ಅವರು ಹೇಳಲಿ. ಆದರೆ ಚುನಾವಣೆ ಬಳಿಕವೇ ಉತ್ತರ ಸಿಗಲಿದೆ” ಎಂದರು.

“ಮತ ವಿಭಜನೆಯಾದಾಗ ಕಾಂಗ್ರೆಸ್ ಸೋತಿರುವುದನ್ನು ನೀವು ಲೋಕಸಭೆ ಚುನಾವಣೆಯ ಇತಿಹಾಸ ನೋಡಿದರೆ ತಿಳಿಯಬಹುದು. ಆದರೆ ಈಗ ಯಾವ ವಿಭಜನೆಯೂ ಇಲ್ಲ. ಪ್ರಜಾಪ್ರಭುತ್ವವನ್ನು ಉಳಿಸಲು ಎಲ್ಲ ವಿಪಕ್ಷಗಳು ಒಂದಾಗಿದೆ” ಎಂದು ವಿಕಾಸ್ ಠಾಕ್ರೆ ಹೇಳಿದರು.

2019ರ ಲೋಕಸಭೆ ಚುನಾವಣೆಯಲ್ಲಿ ನಿತಿನ್ ಗಡ್ಕರಿ ಶೇಕಡ 56ರಷ್ಟು ಮತವನ್ನು ಗಳಿಸಿ ಜಯ ಕಂಡರೆ ಶೇಕಡ 37ರಷ್ಟು ಮತ ಗಳಿಸಿದ ಕಾಂಗ್ರೆಸ್ ಪರಾಭವಗೊಂಡಿದೆ. ಇನ್ನು ಬಿಎಸ್‌ಪಿ 31,725 ಮತಗಳನ್ನು, ವಿಬಿಎ 26,128 ಮತಗಳನ್ನು ಗಳಿಸಿತ್ತು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದಲ್ಲಿ 20 ಕ್ಷೇತ್ರ ಗೆಲ್ಲುತ್ತೇವೆ; ಯಾವ ಅನುಮಾನವೂ ಇಲ್ಲ: ಡಿ ಕೆ ಶಿವಕುಮಾರ್‌ ವಿಶ್ವಾಸ

ಹಾಸನ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರ ಈ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್...

ಪ್ರಧಾನಿ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಅವರ ರಾಜ್ಯ ಪ್ರವಾಸ ನಿಗದಿ

ಪ್ರಧಾನಿ ಮೋದಿಯವರ ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರ...

ಯುಪಿಎ ಅವಧಿಗಿಂತ ಬಿಜೆಪಿ ಅವಧಿಯಲ್ಲಿ 86 ಪಟ್ಟು ಹೆಚ್ಚು ಇ.ಡಿ ದಾಳಿ

ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಯುಪಿಎ...

‘ಮೋದಿ, ಯೋಗಿಗಿಂತ ದೊಡ್ಡವರಿದ್ದಾರೆ ಎನ್ನುವವರು ದೇಶದ್ರೋಹಿ; ಬಿಜೆಪಿ ಅಭ್ಯರ್ಥಿ ಮಹೇಶ್‌ ಶರ್ಮಾ ವಿವಾದಾತ್ಮಕ ಹೇಳಿಕೆ

"ಪ್ರಧಾನಿ ಮೋದಿ-ಸಿಎಂ ಯೋಗಿಯನ್ನು ತಮ್ಮವರು ಎಂದು ಯಾರು ಪರಿಗಣಿಸುವುದಿಲ್ಲವೋ ಅವರು ತಮ್ಮ...