ಕಳೆದಬಾರಿ ಸಂಸದರಾಗಿ ಚುನಾಯಿತರಾಗಿದ್ದ ಡಾ. ಉಮೇಶ್ ಜಾಧವ್ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಒಲಿದು ಬಂದಿದೆ.
ಡಾ.ಉಮೇಶ್ ಜಾಧವ್ ಪರಿಚಯ
1991ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಜನರಲ್ ಸರ್ಜರಿಯಲ್ಲಿ ಮಾಸ್ಟರ್ ಆಫ್ ಸರ್ಜರಿ ಪೂರ್ಣಗೊಳಿಸಿದರು. ವೃತ್ತಿಯಲ್ಲಿ ವೈದ್ಯರು ಇವರು ಹುಟ್ಟಿದ್ದು ಕಲಬುರಗಿ ಕ್ಷೇತ್ರದ ಬೇಧಸೂರು ಗ್ರಾಮದ ಗೋಪಾಲದೇವ್ ಜಾಧವ್, ತಾಯಿ ಚಂದ್ರಮ್ಮ. ಸಂಗಾತಿ ಗಾಯತ್ರಿ ಜಾಧವ್. ಸುಪುತ್ರ ಅವಿನಾಶ್ ಜಾಧವ್ ಪ್ರಸ್ತುತ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ.
ಇವರು 23 ಮೇ 2019ರಿಂದ ಕಲಬುರಗಿ ಲೋಕಸಭಾ ಕ್ಷೇತ್ರದಿಂದ 17ನೇ ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದರು. ನಂತರ, ಅವರು ಮಾರ್ಚ್ 4 ರಂದು 2019 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆಯನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಕೆ. ಆರ್.ರಮೇಶ್ ಕುಮಾರ್ ಅಂಗೀಕರಿಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು.
ನಂತರ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಕಲಬುರಗಿ ಲೋಕಸಭೆ ಅಭ್ಯರ್ಥಿಯಾಗಿ ಟಿಕೆಟ್ ಪಡೆದು ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಸ್ಪರ್ಧಿಸಿ 95,452 ಮತಗಳ ಅಂತರದಿಂದ ಗೆಲುವು ಸಾಧಿಸಿ ಸಂಸದರಾಗಿ ಲೋಕಸಭೆಗೆ ಆಯ್ಕೆಯಾದರು.
ಡಾ. ಉಮೇಶ್ ಜಾಧವ್ ಪಡೆದ ಸ್ಥಾನಗಳು
- ಚಿಂಚೋಳಿಯಿಂದ ವಿಧಾನಸಭಾ ಸದಸ್ಯರು : 2013 ರಿಂದ 2018 (4) (5) (6) (7)
- ಸಂಸದೀಯ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. (8)
- ಚಿಂಚೋಳಿ 2018-2 ಏಪ್ರಿಲ್ 2019 ರಿಂದ ವಿಧಾನಸಭೆಯ ಸದಸ್ಯರು (9) (10)
- ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ 17ನೇ ಲೋಕಸಭೆಯ ಸಂಸದ . (11)
ಜಾಧವ್ ಕಳೆದ ಐದು ವರ್ಷಗಳಲ್ಲಿ ಯಾವ ಕೆಲಸಗಳು ಮಾಡಿಲ್ಲ ಎಂದು ಜನರು ಆರೋಪಿಸುತ್ತಿರುವ ಹೊತ್ತಲ್ಲಿ ಜಾಧವ್ ಅವರು, ಸರ್ಕಾರದ ಅವಧಿ ಮುಗಿಯುವ ಅಂತಿಮ ಘಳಿಗೆಯಲ್ಲಿ ಕಲಬುರಗಿ-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು, ಕಲಬುರಗಿ-ಬೆಂಗಳೂರು ಮಧ್ಯೆ ವಾರದ ಎಕ್ಸ್‌ಪ್ರೆಸ್ ರೈಲು, ಕಲಬುರಗಿ, ಗಾಣಗಾಪುರ ರೈಲು ನಿಲ್ದಾಣಗಳ ಅಭಿವೃದ್ಧಿಗಾಗಿ ಸುಮಾರು 63 ಕೋಟಿ ರೂ. ತರಲು ಯತ್ನಿಸಿದ್ದಾರೆ. ಮತ ಪಡೆದುಕೊಳ್ಳಲು ಬಿಜೆಪಿಯ ಕೊನೆಯ ಕ್ಷಣದ ಪ್ರಯತ್ನ ಇದು ಎನ್ನುತ್ತಿದ್ದಾರೆ ಮತದಾರರು.
ಕಲಬುರಗಿ ನಗರದ ಜನತೆಯ ಬೇಡಿಕೆಯಾಗಿದ್ದ ಹಾಗರಗಾ ಕ್ರಾಸ್‌ನಿಂದ ರಾಮಮಂದಿರ ವೃತ್ತದವರೆಗಿನ ಸರ್ವಿಸ್ ರಸ್ತೆಗೆ 57 ಕೋಟಿ ರೂ. ಬಿಡುಗಡೆ ಮಾಡಿ ಕಲಬುರಗಿ ಜನತೆಯ ಮನಸು ಗೆಲುವ ಪ್ರಯತ್ನ ಮಾಡುವುದಷ್ಟೇ ಅಲ್ಲದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಈ ಬಾರಿಯೂ ಉಮೇಶ್ ಜಾಧವ್ ಅವರ ಪರ ಪ್ರಚಾರ ನಡೆಸುವ ಮೂಲಕ ಅಖಾಡಕ್ಕೆ ಇಳಿದಿದ್ದಾರೆ.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.