ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ | ಜನರನ್ನು ಬಿಜೆಪಿ `ಏಪ್ರಿಲ್‌ ಫೂಲ್‌’ ಮಾಡಲು ಹೊರಟಿದೆ : ಜೆಡಿಎಸ್‌

Date:

Advertisements
  • ಬೆಲೆ ಇಳಿಕೆ ಚುನಾವಣಾ ಗಿಮಿಕ್ ಎಂದ ಜೆಡಿಎಸ್‌
  • ಮಾರ್ಚ್‌ ತಿಂಗಳಲ್ಲಿ ಸಿಲಿಂಡರ್ ಬೆಲೆ ₹350ಕ್ಕೆ ಏರಿಕೆ

2024ರ ಆರ್ಥಿಕ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್‌, “ಬಿಜೆಪಿಯು ಏಪ್ರಿಲ್‌ 1ರಂದು ₹92 ಇಳಿಕೆ ಮಾಡಿ ‘ಫೂಲ್’ ಮಾಡಲು ಹೊರಟಿದೆ” ಎಂದು ಟೀಕಿಸಿದೆ.

ವಾಣಿಜ್ಯ ಸಿಲಿಂಡರ್ ಬೆಲೆ 91.50 ರೂಪಾಯಿ ಇಳಿಕೆಯಾಗಿದೆ. ಇಂದಿನಿಂದಲೇ ಹೊಸ ದರಗಳನ್ನು ಜಾರಿಗೆ ತರಲಾಗಿದೆ. ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 350 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಈಗ 91.50 ರೂಪಾಯಿ ಇಳಿಕೆಯಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್‌, “ಕಳೆದ ತಿಂಗಳು ಸಿಲಿಂಡರ್‌ಗೆ ₹350 ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ, ಏಪ್ರಿಲ್‌ 1ರಂದು ₹92 ಇಳಿಕೆ ಮಾಡಿ ‘ಫೂಲ್’ ಮಾಡಲು ಹೊರಟಿದೆ” ಎಂದು ವ್ಯಂಗ್ಯವಾಡಿದೆ.

“ಚುನಾವಣೆವರೆಗೂ ಪ್ರಜೆಗಳನ್ನು ಎಷ್ಟು ಬೇಕೋ ಅಷ್ಟು ಲೂಟಿ ಮಾಡಿ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಣ್ಣೊರೆಸುವ ನಾಟಕವನ್ನು ರಾಜ್ಯ ಬಿಜೆಪಿ ಈ ಹಿಂದಿನಿಂದಲೂ ಮಾಡುತ್ತಾ ಬಂದಿದೆ” ಎಂದು ಕಿಡಿಕಾರಿದೆ.

ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಕುರಿತು ಹರಿಹಾಯ್ದ ಜೆಡಿಎಸ್‌, “ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಿಲಿಂಡರ್ ಬೆಲೆ ದುಪ್ಪಟ್ಟಾಯಿತು. ದೇಶದ ಸಾಮಾನ್ಯ ಜನರಿಗೆ ನೀಡಲಾಗಿದ್ದ ಸಬ್ಸಿಡಿಯನ್ನು ನೀಡುತ್ತಿಲ್ಲ” ಎಂದು ಟ್ವೀಟ್ ಮಾಡಿದೆ.

“ಆದರೆ, ಬಿಜೆಪಿಯ 25 ಸಂಸದರು ಈ ಯಾವ ವಿಚಾರಕ್ಕೂ ಧ್ವನಿ ಎತ್ತುತ್ತಿಲ್ಲ. ಬಸವರಾಜ ಬೊಮ್ಮಾಯಿ ಅವರಂತೂ 40% ರಾಜ್ಯದಿಂದ ಎತ್ತುವಳಿ ಮಾಡಿ ದೆಹಲಿಗೆ ಕಳುಹಿಸುವಲ್ಲಿ ಬ್ಯುಸಿ ಆಗಿದ್ದಾರೆ” ಎಂದು ಕುಟುಕಿದೆ.

ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಕಾಂಗ್ರೆಸ್‌ನ ಎರಡನೇ ಪಟ್ಟಿ ಸಿದ್ಧ: ವರಿಷ್ಠರ ಅನುಮೋದನೆಗೆ ಸಲ್ಲಿಕೆ

“ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಇಳಿಕೆಯಾಗುತ್ತಿದ್ದರೂ ಅದರ ಲಾಭವನ್ನು ಜನರಿಗೆ ವರ್ಗಾಯಿಸುವ ಯಾವ ಪ್ರಯತ್ನವನ್ನೂ ಕೇಂದ್ರ ಸರ್ಕಾರ ಕೈಗೊಂಡಿಲ್ಲ” ಎಂದು ಜೆಡಿಎಸ್‌ ಹೇಳಿದೆ.

“ಕೊರೊನಾ ಸಮಯದಲ್ಲಿ ಜನರು ಸಂಕಟದಲ್ಲಿದ್ದಾಗಲೂ ಬೆಲೆ ಏರಿಕೆ ಮಾಡಿ ಪ್ರಧಾನಿ ಮೋದಿ ದುಷ್ಟತನ ಮೆರೆದಿದ್ದರು. ಜನದ್ರೋಹಿ ಸರ್ಕಾರ ಮಾತ್ರ ಹೀಗೆ ಮಾಡಲು ಸಾಧ್ಯ” ಎಂದು ಜೆಡಿಎಸ್‌ ತರಾಟೆಗೆ ತೆಗೆದುಕೊಂಡಿದೆ.

“ಚುನಾವಣೆವರೆಗೆ ಬೆಲೆ ಏರಿಸಿ, ಚುನಾವಣೆ ವೇಳೆಗೆ ಬೆಲೆ ಇಳಿಕೆ ಮಾಡುವ ಬಿಜೆಪಿ, ಫಲಿತಾಂಶ ಬಂದ ಮರುದಿನ ಮತ್ತೆ ಬೆಲೆ ಏರಿಕೆ ಮಾಡಿದ್ದು ನಮ್ಮ ಕಣ್ಣ ಮುಂದಿದೆ” ಎಂದು ಹೇಳಿದೆ.

“ಇದು ಕೇಂದ್ರ ಸರ್ಕಾರದ ಅಹಂಕಾರದ ಪರಮಾವಧಿ. ಆದರೆ ಈ ಬಾರಿ ನಿಮ್ಮ ಕೊಬ್ಬು ರಾಜ್ಯ ಚುನಾವಣೆಯಲ್ಲಿ ಇಳಿಸಿ, ಮುಂದಿನ ಲೋಕಸಭಾ ಚುನಾವಣೆಗೆ ಇಲ್ಲಿಂದಲೆ ಸಂದೇಶ ನೀಡಲಿದ್ದೇವೆ” ಎಂದು ಟ್ವೀಟ್ ಮಾಡಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೈರಪ್ಪ ಮತ್ತು ಕುತರ್ಕದ ಉರುಳು

ಅಂತಃಕರಣವೇ ಇಲ್ಲದಾತ ಅದು ಹೇಗೆ ಬರಹಗಾರನಾಗಲು ಸಾಧ್ಯ? ತನ್ನ ಸಹಜೀವಿಗಳ ಬಗ್ಗೆ...

ಕೇರಳ ವಿಧಾನಸಭೆಯಲ್ಲಿ SIR ವಿರುದ್ಧ ಸರ್ವಾನುಮತದಿಂದ ನಿರ್ಣಯ ಅಂಗೀಕಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(SIR) ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯವು...

ದಾವಣಗೆರೆ | ಒಳಮೀಸಲಾತಿ ಆದೇಶ ಕಾನೂನಾಗಲು ಸುಗ್ರೀವಾಜ್ಞೆ ಜಾರಿಗೊಳಿಸಿ: ಮಾಜಿ ಸಚಿವ ಆಂಜನೇಯ

"ಒಳಮೀಸಲಾತಿ ಆದೇಶವು ಕೇವಲ ಸರ್ಕಾರಿ ಆದೇಶವಾಗಿದ್ದು, ಅದು ಕಾನೂನಿನ ಚೌಕಟ್ಟಿಗೆ ಬರಲು...

ನೈಜ ದೇಶಭಕ್ತರು ಪಾಕ್ ವಿರುದ್ಧದ ಪಂದ್ಯ ನೋಡಿಲ್ಲ: ಬಿಜೆಪಿ, ಟೀಮ್ ಇಂಡಿಯಾವನ್ನು ಟೀಕಿಸಿದ ಸಂಜಯ್ ರಾವತ್

ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ ಆಡಿದ ವಿಚಾರದಲ್ಲಿ...

Download Eedina App Android / iOS

X