ಚೆನ್ನೈ | ಕಲಾಕ್ಷೇತ್ರ ವಿದ್ಯಾರ್ಥಿಗಳ ಪ್ರತಿಭಟನೆ; ಅಧ್ಯಾಪಕನ ವಿರುದ್ಧ ಪ್ರಕರಣ

Date:

  • ಕಲಾಕ್ಷೇತ್ರ ಮಾಜಿ ವಿದ್ಯಾರ್ಥಿನಿಯಿಂದ ದೂರು ದಾಖಲು
  • ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಹರಿಪದ್ಮನ್‌ ವಿರುದ್ಧ ಪ್ರಕರಣ

ಚೆನ್ನೈನ ಕಲಾಕ್ಷೇತ್ರ ಶಿಕ್ಷಣ ಸಂಸ್ಥೆಯ ಬೋಧಕ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ ಆರೋಪಿಸಿ ವಿದ್ಯಾರ್ಥಿಗಳ ಪ್ರತಿಭಟನೆಯ ಒಂದು ದಿನದ ನಂತರ ಪೊಲೀಸರು ಶನಿವಾರ (ಏಪ್ರಿಲ್ 1) ಆರೋಪಿ ಸಹಾಯಕ ಅಧ್ಯಾಪಕರೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಂಸ್ಥೆಯ ಮಾಜಿ ಮಹಿಳಾ ವಿದ್ಯಾರ್ಥಿಯೊಬ್ಬರು ಅಧ್ಯಾಪಕ ಹರಿಪದ್ಮನ್‌ ವಿರುದ್ಧ ದೂರು ನೀಡಿದ್ದಾರೆ. ಇದಕ್ಕೂ ಮುನ್ನ ಸಂಸ್ಥೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಸಂಸ್ಥೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು.

ಹರಿಪದ್ಮನ್‌ ಮತ್ತು ಇತರ ಮೂವರು ಸಿಬ್ಬಂದಿ ಲೈಂಗಿಕ ಕಿರುಕುಳ ಮತ್ತು ಮೌಖಿಕ ನಿಂದನೆ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಅಲ್ಲದೆ, ಸುಮಾರು 90 ವಿದ್ಯಾರ್ಥಿಗಳು ಲೈಂಗಿಕ ದೌರ್ಜನ್ಯದ ಕುರಿತು ಕಲಾಕ್ಷೇತ್ರ ಸಿಬ್ಬಂದಿ ವಿರುದ್ಧ ಶುಕ್ರವಾರ (ಮಾರ್ಚ್‌ 31) ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆಗೆ ದೂರು ನೀಡಿದ್ದರು. ತಪ್ಪಿತಸ್ಥರು ಕಂಡು ಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಭರವಸೆ ನೀಡಿದರು.

“ನಾವು ವರ್ಷಗಳಿಂದ ಕಲಾಕ್ಷೇತ್ರದಲ್ಲಿ ಲೈಂಗಿಕ ದೌರ್ಜನ್ಯ, ಮೌಖಿಕ ನಿಂದನೆ ಮತ್ತು ಚರ್ಮದ ಬಣ್ಣದ ಆಧಾರದ ಮೇಲೆ ತಾರತಮ್ಯ ಅನುಭವಿಸುತ್ತಿದ್ದೇವೆ. ಆದರೆ ಈ ಬಗ್ಗೆ ಆರೋಪ ಮಾಡಿದರೆ ಸಂಸ್ಥೆಯು ಅಸಡ್ಡೆ ಹಾಗೂ ನಿರ್ಲಕ್ಷ್ಯ ಧೋರಣೆ ತಾಳಿದೆ” ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಈ ಬಗ್ಗೆ ನಿರ್ಲಕ್ಷ್ಯ ತಾಳಿರುವ ನಿರ್ದೇಶಕಿ ರೇವತಿ ರಾಮಚಂದ್ರನ್‌ ಅವರನ್ನು ವಜಾಗೊಳಿಸಿ ಆಂತರಿಕ ದೂರು ಸಮಿತಿ ಪುನರ್‌ರಚಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್‌ ರೆಡ್ಡಿ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ಗೆ ಪತ್ರ ಬರೆದಿದ್ದರು.

ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ವಿದ್ಯಾಸಂಸ್ಥೆಯನ್ನು ಮುಚ್ಚಲಾಗಿದೆ. ಪ್ರತಿಭಟನೆಯ ಗಂಟೆಗಳ ನಂತರ ವಿದ್ಯಾರ್ಥಿಗಳಿಗೆ ವಸತಿಗೃಹಗಳನ್ನು (ಹಾಸ್ಟೆಲ್) ತೆರವುಗೊಳಿಸುವಂತೆ ಕಲಾಕ್ಷೇತ್ರ ಸೂಚಿಸಿದೆ.

ಲಲಿತ ಕಲೆಯ ರುಕ್ಮಿಣಿ ದೇವಿ ಕಾಲೇಜು (ಆರ್‌ಡಿಸಿಎಫ್ಎ) ಮಾರ್ಚ್ 30 ಸಂಜೆ 5.15ರಿಂದ ಏಪ್ರಿಲ್ 6ವರೆಗೆ ಸ್ಥಗಿತಗೊಳ್ಳಲಿದೆ ಎಂದು ವಿದ್ಯಾಸಂಸ್ಥೆ ಸುತ್ತೋಲೆ ಹೊರಡಿಸಿದೆ.

ಆರೋಪಿ ಅಧ್ಯಾಪಕನ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ಆಗ್ರಹಿಸಿ ಕಾಲೇಜಿನ ಆವರಣದಲ್ಲಿರುವ ಆಲದ ಮರದ ಕೆಳಗೆ ವಿದ್ಯಾರ್ಥಿಗಳು ಗುರುವಾರ ಬೆಳಿಗ್ಗೆಯಿಂದ ಮೌನ ಪ್ರತಿಭಟನೆ ನಡೆಸಿದರು. ಸಂಜೆಯ ನಂತರ ಕಾಲೇಜಿನಿಂದ ತಿರುವನ್ಮಯೂರ್ ರಸ್ತೆಯವರೆಗೆ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಸುದ್ದಿ ಓದಿದ್ದೀರಾ? ಗೋವಾ | ಡಚ್‌ ಪ್ರಜೆ, ವ್ಯಕ್ತಿಗೆ ಕಿರುಕುಳ, ಹಲ್ಲೆ ; ರೆಸಾರ್ಟ್‌ ಸಿಬ್ಬಂದಿ ಬಂಧನ

ವಿದ್ಯಾರ್ಥಿಗಳು ಕಲಾಕ್ಷೇತ್ರ ಆವರಣದಲ್ಲಿ ಜಮಾಯಿಸಿ ಪೊಲೀಸರ ಸುಪರ್ದಿಯಲ್ಲಿ ಪ್ರತಿಭಟನೆ ನಡೆಸಿದರು. ಅನೇಕ ಪೊಲೀಸ್ ವಾಹನಗಳು ಅಲ್ಲಿದ್ದವು. ಈ ಕುರಿತ ಫೋಟೋಗಳು ಎಲ್ಲೆಡೆ ಹರಿದಾಡಿವೆ. ಪೊಲೀಸರು ವಿದ್ಯಾರ್ಥಿಗಳ ಬೇಡಿಕೆಗಳನ್ನು ಆಲಿಸಲು ಮುಂದಾದರು.

ಗುರುವಾರ ಬೆಳಿಗ್ಗೆಯಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ವಿದ್ಯಾರ್ಥಿಗಳು, ಹರಿ ಪದ್ಮನ್ ಎಂಬ ವ್ಯಕ್ತಿಯನ್ನು ಆರೋಪಿಯನ್ನಾಗಿ ಹೆಸರಿಸಿದರು. ಅಲ್ಲದೆ ವಿದ್ಯಾರ್ಥಿಗಳು ಕಲಾಕ್ಷೇತ್ರ ನಾಲ್ಕು ಸಿಬ್ಬಂದಿಯನ್ನು ಹೆಸರಿಸಿದರು. ಆರೋಪಿ ಕಾಲೇಜು ಸಿಬ್ಬಂದಿ ಹರಿ ಪದ್ಮನ್ ಬೆಳಗಿನ ಪ್ರಾರ್ಥನೆ ವೇಳೆ ಕಾಲೇಜು ಆವರಣಕ್ಕೆ ಆಗಮಿಸಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಿಚಾಂಗ್ ಚಂಡಮಾರುತ | ತಮಿಳುನಾಡಿನಲ್ಲಿ ಹೈ ಅಲರ್ಟ್‌; ಶಾಲಾ-ಕಾಲೇಜು ರಜೆ ಘೋಷಣೆ

ಬಂಗಾಳಕೊಲ್ಲಿಯಲ್ಲಿ ಮಿಚಾಂಗ್ ಚಂಡಮಾರುತ ರೂಪುಗೊಂಡಿದೆ. ಈ ಹಿನ್ನೆಲೆ, ಆಂಧ್ರಪ್ರದೇಶ ಮತ್ತು ತಮಿಳುನಾಡಿನತ್ತ...

ಮಿಚಾಂಗ್ ಚಂಡಮಾರುತಕ್ಕೆ ಆಂಧ್ರ – ತಮಿಳುನಾಡು ತತ್ತರ; 120 ರೈಲುಗಳ ಸಂಚಾರ ರದ್ದು

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುತ ಅಬ್ಬರ ಹೆಚ್ಚಾಗಿದೆ. ದಕ್ಷಿಣ ಆಂಧ್ರ...

ಅಧಿಕೃತ ಚುನಾವಣಾ ಫಲಿತಾಂಶ ಪ್ರಕಟಿಸಿದ ಆಯೋಗ: ಯಾವ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಸ್ಥಾನ?

ಇಂದು ಪ್ರಕಟಗೊಂಡ ಚುನಾವಣಾ ಫಲಿತಾಂಶಗಳ ಬಗ್ಗೆ ಚುನಾವಣಾ ಆಯೋಗ ಎಲ್ಲ ರಾಜ್ಯಗಳ...

ಈ ಫಲಿತಾಂಶ ಲೋಕಸಭೆ ಚುನಾವಣೆಯ ಹ್ಯಾಟ್ರಿಕ್‌ ಗೆಲುವಿನ ಮುನ್ಸೂಚನೆ: ಪ್ರಧಾನಿ ನರೇಂದ್ರ ಮೋದಿ

'ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯ ಹ್ಯಾಟ್ರಿಕ್‌ ಗೆಲುವು 2024ರ...