ಚುನಾವಣೆ 2023 | ಕಾಂಗ್ರೆಸ್‌ನ ಎರಡನೇ ಪಟ್ಟಿ ಸಿದ್ಧ: ವರಿಷ್ಠರ ಅನುಮೋದನೆಗೆ ಸಲ್ಲಿಕೆ

Date:

  • ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯಲ್ಲಿ ಏಪ್ರಿಲ್‌ 4ಕ್ಕೆ ಚರ್ಚೆ
  • ಕೋಲಾರ ಕ್ಷೇತ್ರದಿಂದಲೂ ಸಿದ್ದರಾಮಯ್ಯ ಹೆಸರು ಶಿಫಾರಸು

ಕಾಂಗ್ರೆಸ್‌ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದ್ದು, ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಹೆಸರು ಸೇರಿದಂತೆ ರಾಜ್ಯದ 52 ವಿಧಾನಸಭಾ ಕ್ಷೇತ್ರಗಳಿಗೆ ಏಕ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿ ಪಕ್ಷದ ವರಿಷ್ಠರ ಅನುಮೋದನೆಗಾಗಿ ಕಳುಹಿಸಲಾಗಿದೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯು ರಾಹುಲ್ ಗಾಂಧಿ ಮತ್ತು ಇತರರನ್ನು ಒಳಗೊಂಡಿದೆ. ಕರ್ನಾಟಕ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಅಂತಿಮ ಮಾಡುವ ವಿಚಾರ ಈ ಚುನಾವಣಾ ಸಮಿತಿ ಮುಂದೆ ಏಪ್ರಿಲ್ 4 ರಂದು ಚರ್ಚೆಗೆ ಬರಲಿದೆ.

ಉಳಿದ 48 ಕ್ಷೇತ್ರಗಳಿಗೆ ರಾಜ್ಯ ಸ್ಕ್ರೀನಿಂಗ್ ಸಮಿತಿ ಪ್ರತಿ ಕ್ಷೇತ್ರಕ್ಕೆ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಈ ಕ್ಷೇತ್ರಗಳಲ್ಲಿ ಮೊದಲ ಪ್ರಾಶಸ್ತ್ಯದಂತೆ ಒಬ್ಬ ಅಭ್ಯರ್ಥಿಯನ್ನು ಗುರುತು ಮಾಡಿ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಗೆ ಪಟ್ಟಿ ಸಲ್ಲಿಸುವಂತೆ ಕೇಂದ್ರ ನಾಯಕರು ರಾಜ್ಯ ನಾಯಕರನ್ನು ಕೇಳಿದ್ದಾರೆ.

ಕಾಂಗ್ರೆಸ್ ಈಗಾಗಲೇ 224 ಸ್ಥಾನಗಳ ಪೈಕಿ ಮೊದಲ ಹಂತದಲ್ಲಿ 124 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. 52 ಕ್ಷೇತ್ರಗಳ ಟಿಕೆಟ್‌ಗೆ ಏಪ್ರಿಲ್ 4 ರಂದು ಅನುಮೋದನೆ ಸಿಗಲಿದೆ. ಆದರೆ, ಉಳಿದ 48 ಕ್ಷೇತ್ರಗಳಿಗೆ ಪಕ್ಷದ ಮುಖಂಡರು ಹೆಚ್ಚಿನ ಚರ್ಚೆ ನಡೆಸುವ ಸಾಧ್ಯತೆ ಇದೆ.

2018ರ ವಿಧಾನಸಭಾ ಚುನಾವಣೆಯಲ್ಲಿ 4,000 ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಸೋಲು ಅನುಭವಿಸಿರುವ 9 ಅಭ್ಯರ್ಥಿಗಳಿಗೆ ಮರಳಿ ಟಿಕೇಟ್‌ ನೀಡಲು ಪಕ್ಷವು ನಿರ್ಧರಿಸಿದೆ.

ವರುಣಾ ಕ್ಷೇತ್ರಕ್ಕೆ ಈಗಾಗಲೇ ಸಿದ್ದರಾಮಯ್ಯ ಹೆಸರನ್ನು ಪಕ್ಷವು ಘೋಷಿಸಿದೆ. ಈ ಪಟ್ಟಿಯಲ್ಲಿ ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.

ಹರಿಹರ ಕ್ಷೇತ್ರದ ಹಾಲಿ ಶಾಸಕ ಹರಿಹರ ರಾಮಪ್ಪ ಅವರಿಗೆ ಮರಳಿ ಟಿಕೇಟ್‌ ನೀಡಲು ಮತ್ತು ಹಾಲಿ ಶಾಸಕ ವೆಂಕಟರಮಣಪ್ಪ ಅವರ ಪುತ್ರ ಎಚ್‌ ವಿ ವೆಂಕಟೇಶ್ ಅವರನ್ನು ಪಾವಗಡ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.

ಈ ಸುದ್ದಿ ಓದಿದ್ದೀರಾ? ಇಂದು, ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ

ಒಂದು ಹೆಸರಿರುವ ಅಭ್ಯರ್ಥಿಗಳು:

ಬದಾಮಿ: ಭೀಮಸೇನ ಚಿಮ್ಮನಕಟ್ಟಿ

ಸಿಂದಗಿ: ಅಶೋಕ್ ಮನಗೂಳಿ

ಗುರುಮಿಠ್ಕಲ್: ಬಾಬುರಾವ್ ಚಿಂಚನಸೂರ್

ಕಲಬುರಗಿ ದಕ್ಷಿಣ: ಅಲ್ಲಮಪ್ರಭು ಪಾಟೀಲ್

ಬಸವಕಲ್ಯಾಣ: ವಿಜಯ ಸಿಂಗ್

ರಾಯಚೂರು: ಎನ್ ಎಸ್  ಬೋಸರಾಜ್

ನಿಪ್ಪಾಣಿ: ಕಾಕಾ ಸಾಹೇಬ್ ಪಾಟೀಲ್

ಗೋಕಾಕ್: ಅಶೋಕ್ ಪೂಜಾರಿ

ಕಿತ್ತೂರು: ಡಿ ಬಿ ಇಮಾನ್ದಾರ್

ಮುಧೋಳ್: ಆರ್ ಬಿ ತಿಮ್ಮಾಪುರ

ತೇರದಾಳ: ಉಮಾಶ್ರೀ

ಬೀಳಗಿ: ಜಗದೀಶ್ ಪಾಟೀಲ್

ಹರಿಹರ: ರಾಮಪ್ಪ

ತೀರ್ಥಹಳ್ಳಿ: ಕಿಮ್ಮನೆ ರತ್ನಾಕರ್

ಮೂಡಿಗೆರೆ: ನಯನಾ ಮೋಟಮ್ಮ

ಚಿಕ್ಕಮಗಳೂರು: ಎಚ್ ಡಿ ತಮ್ಮಯ್ಯ

ಕಡೂರು: ವೈ ಎಸ್ ವಿ ದತ್ತ

ಕೋಲಾರ: ಸಿದ್ದರಾಮಯ್ಯ

ಗುಬ್ಬಿ: ಶ್ರೀನಿವಾಸ್

ಚಿಕ್ಕಬಳ್ಳಾಪುರ: ಕೊತ್ತೂರು ಮಂಜುನಾಥ್

ಯಲಹಂಕ: ಕೇಶವ್ ರಾಜಣ್ಣ

ಪುಲಕೇಶಿ ನಗರ: ಅಖಂಡ ಶ್ರೀನಿವಾಸಮೂರ್ತಿ

ಶ್ರವಣಬೆಳಗೊಳ: ಗೋಪಾಲಸ್ವಾಮಿ

ಅರಸೀಕೆರೆ: ಕೆ ಎಂ ಶಿವಲಿಂಗೇಗೌಡ

ಪುತ್ತೂರು: ಶಕುಂತಲಾ ಶೆಟ್ಟಿ

ಮಂಗಳೂರು: ಜೆ ಆರ್ ಲೋಬೋ

ಯಲ್ಲಾಪುರ: ಬಿ ಎಸ್ ಪಾಟೀಲ್

ಮಾನ್ವಿ: ಹಂಪಯ್ಯ ನಾಯಕ್

ಸಿಂಧನೂರು: ಹಂಪನಗೌಡ ಬಾದರ್ಲಿ

ಗಂಗಾವತಿ: ಇಕ್ಬಾಲ್ ಅನ್ಸಾರಿ

ಕಲಘಟಗಿ: ಸಂತೋಷ ಲಾಡ್

ಹು-ಧಾ ಪಶ್ಚಿಮ: ಮೋಹನ್ ಲಿಂಬಿಕಾಯಿ

ಮಂಗಳೂರು ದಕ್ಷಿಣ: ಲೋಬೋ

ಶಿರಸಿ: ಭೀಮಣ್ಣ ನಾಯ್ಕ್

ಮೊಳಕಾಲ್ಮೂರು: ಎನ್ ವೈ ಗೋಪಾಲಕೃಷ್ಣ

ಸಿವಿ ರಾಮನ್ ನಗರ: ಸಂಪತ್ ರಾಜ್

ಪದ್ಮನಾಭ ನಗರ: ಪಿಜಿಆರ್ ಸಿಂದ್ಯಾ

ಬೊಮ್ಮನಹಳ್ಳಿ: ಉಮಾಪತಿಗೌಡ

ಮೇಲುಕೋಟೆ: ದರ್ಶನ್  ಪುಟ್ಟಣ್ಣಯ್ಯ (ಬೆಂಬಲ)

ಮದ್ದೂರು: ಉದಯ್ ಗೌಡ

ಎರಡು ಹೆಸರಿರುವ ಅಭ್ಯರ್ಥಿಗಳ ಪಟ್ಟಿ:

ದಾಸರಹಳ್ಳಿ: ಕೃಷ್ಣಮೂರ್ತಿ / ಧನಂಜಯ ಗೌಡ

ಚಿಕ್ಕಪೇಟೆ: ಆರ್ ವಿ ದೇವರಾಜ್ / ಗಂಗಾಂಭಿಕಾ

ಬೆಂಗಳೂರು ದಕ್ಷಿಣ: ಸುಷ್ಮಾರಾಜಗೋಪಾಲ್ ರೆಡ್ಡಿ / ಆರ್ ಕೆ ರಮೇಶ್

ಮಂಡ್ಯ: ಡಾ. ಕೃಷ್ಣ / ರಾಧಾಕೃಷ್ಣ

ಕೆ ಆರ್ ಪೇಟೆ: ವಿಜಯ್ ರಾಮೇಗೌಡ, ದೇವರಾಜ್

ಹಾಸನ: ಬಿ ಪಿ ಮಂಜೇಗೌಡ / ಸ್ವರೂಪ್ / ಬನವಾಸೆ ರಂಗಸ್ವಾಮಿ

ಬೇಲೂರು: ಗಂಡಸಿ ಶಿವರಾಮ್ / ರಾಜಶೇಖರ

ಅರಕಲಗೂಡು: ಶ್ರೀಧರ್ ಗೌಡ / ಕೃಷ್ಣೇಗೌಡ

ಮಂಗಳೂರು ಉತ್ತರ: ಮೊಯ್ದಿನ್ ಬಾವಾ / ಇನಾಯತ್ ಅಲಿ

ಮಡಿಕೇರಿ: ಜೀವಿಜಯ / ಚಂದ್ರಮೌಳಿ / ಮಂಥನ್ ಗೌಡ

ಚಾಮುಂಡೇಶ್ವರಿ: ಮರಿಗೌಡ / ಮಾವಿನಹಳ್ಳಿ‌ ಸಿದ್ದೇಗೌಡ

ನಾಗಠಾಣ: ಕಾಂತಾ ನಾಯಕ್ / ರಾಜು ಅಲ್ಗುರಾ

ಅಫಜಲಪುರ: ಅರುಣ್ ಕುಮಾರ್ / ಜೆಎಂ ಕೂರಬು

ಯಾದಗಿರಿ: ಚನ್ನಾರೆಡ್ಡಿ / ಸತೀಶ್ / ಅನುರಾಧ ಮಾಲಕರೆಡ್ಡಿ

ಔರಾದ್: ಭೀಮರಾವ್ ಸಿಂಧೆ/ ಬಿ ಗೋಪಾಲಕೃಷ್ಣ

ದೇವದುರ್ಗ: ಬಿ ವಿ ನಾಯಕ್ / ರಾಜಶೇಖರ ನಾಯಕ್

ಲಿಂಗಸುಗೂರು: ಡಿ ಎಸ್ ಹುಲಗೇರಿ / ರುದ್ರಪ್ಪ

ಬಳ್ಳಾರಿ ನಗರ: ನಾರಾ ಭರತ್ ರೆಡ್ಡಿ / ದಿವಾಕರ್ ಬಾಬು

ಚಿತ್ರದುರ್ಗ: ವೀರೇಂದ್ರ / ರಘು ಆಚಾರ್

ಹೊಳಲ್ಕೆರೆ: ಎಚ್ ಆಂಜನೇಯ / ಸವಿತಾ ರಘು

ಜಗಳೂರು: ರಾಜೇಶ್ / ದೇವೆಂದ್ರಪ್ಪ

ಚನ್ನಗಿರಿ: ವಡ್ನಾಳ್ ರಾಜಣ್ಣ / ಮಗ ಅಶೋಕ್

ಹೊನ್ನಾಳಿ: ಶಾಂತನಗೌಡ / ಎಚ್ ಬಿ ಮಂಜಪ್ಪ

ಶಿವಮೊಗ್ಗ ಗ್ರಾಮೀಣ: ಪಲ್ಲವಿ / ನಾರಾಯಣಸ್ವಾಮಿ

ಶಿವಮೊಗ್ಗ: ಸುಂದರೇಶ್ / ಯೋಗೇಶ್

ಶಿಕಾರಿಪುರ: ಗೋಣಿ ಮಹಂತೇಶ್ / ಕೌಲಿ ಗಂಗಾಧರಪ್ಪ

ಉಡುಪಿ: ಕೃಷ್ಣಮೂರ್ತಿ ಆಚಾರ್ / ದಿನೇಶ್ ಹೆಗಡೆ

ತರೀಕೆರೆ: ಗೋಪಿಕೃಷ್ಣ / ಶ್ರೀನಿವಾಸ್

ತುಮಕೂರು: ರಫೀಕ್ ಅಹ್ಮದ್, ಅತೀಕ್ ಅಹ್ಮದ್

ಕೆ ಆರ್ ಪುರಂ: ಡಿಕೆ ಮೋಹನ್ ಬಾಬು / ಉದಯಕುಮಾರ್

ಶಿಡ್ಲಘಟ: ಗೋವಿಂದೇಗೌಡ / ರಾಜೀವ್ ಗೌಡ

ಮುಳಬಾಗಿಲು: ಜಿ ಮಂಜುನಾಥ್ / ಮದ್ದೂರಪ್ಪ

ನರಗುಂದ: ಬಿ ಆರ್ ಯಾವಗಲ್ / ಸಂಗಮೇಶ್

ಶಿರಹಟ್ಟಿ: ರಾಮಕೃಷ್ಣ ದೊಡ್ಡಮನಿ / ಸುಜಾತ ದೊಡ್ಡಮನಿ

ನವಲಗುಂದ: ಕೋನರೆಡ್ಡಿ / ವಿನೋದ್ ಅಸೂಟಿ

ಕುಂದಗೋಳ: ಕುಸುಮಾ ಶಿವಳ್ಳಿ / ಷಣ್ಮುಖ ಶಿವಳ್ಳಿ

ಧಾರವಾಡ: ವಿನಯ್ ಕುಲಕರ್ಣಿ / ಶಿವಲೀಲಾ ಕುಲಕರ್ಣಿ

ಹು-ಧಾ ಸೆಂಟ್ರಲ್: ರಜತ್ / ಯುಸೂಫ್ / ಅನೀಲ್ ಪಾಟೀಲ್

ಕುಮಟ: ಶಾರದ ಶೆಟ್ಟಿ / ಯಶೋಧ ನಾಯ್ಕ್

ಶಿಗ್ಗಾಂವಿ: ವಿನಯ್ ಕುಲಕರ್ಣಿ / ಸೋಮಣ್ಣ ಬೇವಿನಮರದ್

ಶಿರಗುಪ್ಪ: ಬಿ ಎಂ ನಾಗರಾಜ್ / ಮುರುಳಿಕೃಷ್ಣ

ಕೂಡ್ಲಿಗಿ: ನಾಗರಾಜ್ / ಡಾ. ಶ್ರೀನಿವಾಸ್

ಅಥಣಿ: ಗಜಾನನ ಮಂಗಸೂಳಿ/ ಶ್ರೀಕಾಂತ ಪೂಜಾರಿ

ಅರಭಾವಿ: ಅರವಿಂದ ದಳವಾಯಿ/ ರಮೇಶ್

ಬೆಳಗಾವಿ ಉತ್ತರ: ಫಿರೋಜ್ ಸೇಠ್/ ಆಶಿಫ್ ಸೇಠ್

ರಾಯಭಾಗ: ಪ್ರದೀಪ್ ಕುಮಾರ್/ ಮಹಾವೀರ್ ಮೊಹಿತಿ

ಸವದತ್ತಿ ಯಲ್ಲಮ್ಮ: ಉದಯ್ ಕುಮಾರ್/ ವಿಶ್ವಾಸ  ವೈದ್ಯ

ಬಾಗಲಕೋಟೆ: ಎಚ್ ವೈ ಮೇಟಿ/ ಮೇಟಿ ಮಗಳು ಬಾಯಕ್ಕ, ದೇವರಾಜ ಪಾಟೀಲ್

ದೇವರಹಿಪ್ಪರಗಿ: ಎಸ್ ಆರ್ ಪಾಟೀಲ್/ ಬಾಬುಗೌಡ ಪಾಟೀಲ್/ ಶರಣಪ್ಪ ಸುಣಗಾರ

ವಿಜಯಪುರ ಸಿಟಿ: ಮುಖ್ಬಲ್ ಭಗವಾನ್/ ಅಬ್ದುಲ್ ಹಮ್ಮೀದ್ ಮುಶ್ರಫ್

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೂರು ವರ್ಷಗಳ ನಂತರ ಮೆಹಬೂಬಾ ಮುಫ್ತಿಗೆ ಪಾಸ್‌ಪೋರ್ಟ್‌ ನೀಡಿಕೆ

ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದ ಮೆಹಬೂಬಾ ಮುಫ್ತಿ ಜಮ್ಮು- ಕಾಶ್ಮೀರ ಹೈಕೋರ್ಟ್‌ನಲ್ಲಿ ಮೆಹಬೂಬಾ...

ರೈತರಿಂದ ಖರೀದಿಸುವ ಹಾಲಿನ ನಿಗದಿ ದರ ಕಡಿತ ಮಾಡಬೇಡಿ; ಸಿಎಂ ಸೂಚನೆ

ಬಮೂಲ್ ದರ ಕಡಿತ ಮಾಡಿದೆ ಎಂಬ ವರದಿ ಹಿನ್ನೆಲೆ ಸಿಎಂ ಸೂಚನೆ ಹಾಲು...

ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಆಶ್ರಯ ಪಡೆದಿರುವ 1500 ಪ್ರಯಾಣಿಕರಿಗೆ ಅಗತ್ಯ ನೆರವು

1500 ಕಾರ್ಮಿಕರಿಗೆ ಬಿಬಿಎಂಪಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ನೆರವು ಕಾರ್ಮಿಕರ ನೆರವಿಗೆ...

ಒಡಿಶಾ ರೈಲು ದುರಂತ | ರೈಲು ಹಳಿ ಜೋಡಣೆ ಕಾರ್ಯಕ್ಕೆ ವೇಗ, ಸಾವಿರಾರು ಕಾರ್ಮಿಕರು ಭಾಗಿ

ಒಡಿಶಾ ರೈಲು ದುರಂತ ಅವಘಡದಲ್ಲಿ 288 ಮಂದಿ ಸಾವು ದುರಂತದ ತನಿಖೆ ನ್ಯಾಯಾಂಗದ...