2019ರ ಲೋಕಸಭಾ ಚುನಾವಣೆಯಲ್ಲಿ ಕೈಗೊಂಡಿದ್ದ ಸೂತ್ರವನ್ನೇ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಯು 2024ರ ಚುನಾವಣೆಯಲ್ಲೂ ಅಳವಡಿಸಿಕೊಂಡಿದ್ದು, ಇಂದು ಅಧಿಕೃತವಾಗಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿಕೊಂಡಿದೆ.
2019ರಂತೆಯೇ ಪುದುಚೇರಿ ಹಾಗೂ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ 10 ಕ್ಷೇತ್ರಗಳನ್ನು ಬಿಟ್ಟು ಕೊಡಲು ಡಿಎಂಕೆ ತೀರ್ಮಾನಿಸಿದೆ.
#WATCH | Tamil Nadu | Congress will contest elections on 9 seats in Tamil Nadu and one seat in Puducherry. On the remaining seats, we will support the candidates of DMK and alliance parties. We will win all 40 seats of Tamil Nadu, says Congress MP KC Venugopal pic.twitter.com/fcksz92VVK
— ANI (@ANI) March 9, 2024
ದ್ರಾವಿಡ ಪಕ್ಷವು ಕಾಂಗ್ರೆಸ್‌ಗೆ ತಮಿಳುನಾಡಿನಲ್ಲಿ 9 ಮತ್ತು ಪುದುಚೇರಿಯಲ್ಲಿ ಒಂದು ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಆ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಮತ್ತು ಡಿಎಂಕೆ ಶನಿವಾರ ಅಂತಿಮಗೊಳಿಸಿವೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಡಿಎಂಕೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಸಲ್ಲಪೆರುಂತಾಗೈ ಅವರು ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿದರು.
Had an extremely fruitful meeting with Thiru MK Stalin and we are happy to announce that our alliance with the DMK for Tamil Nadu and Puducherry has been sealed for the Lok Sabha Elections!
The INDIA alliance is all set to send 40 MPs to the Lok Sabha and it will form the next… pic.twitter.com/jkv3I3ufHP
— K C Venugopal (@kcvenugopalmp) March 9, 2024
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, “ತಮಿಳುನಾಡು ಹಾಗೂ ಪುದುಚೇರಿಯ ಎಲ್ಲಾ 40 ಸೀಟುಗಳನ್ನು ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿ ಗೆಲ್ಲಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
