ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಎನ್‌ಐಗೆ ಸಂದರ್ಶನ ನೀಡಿದ್ದು, ಕೇಂದ್ರೀಯ ಸಂಸ್ಥೆಯ ದುರುಪಯೋಗದ ಪ್ರಶ್ನೆ ಕೇಳಿದಾಗ ಸಿಡಿಮಿಡಿಗೊಂಡಿದ್ದು, ಪ್ರಧಾನಿಗೆ ಯಾವ ರೀತಿ ಪ್ರಶ್ನೆ ಕೇಳಬೇಕೆಂದು ಸಂಶೋಧನೆ ನಡೆಸಿ ಬರಬೇಕು ಎಂದಿದ್ದಾರೆ.
ಸಂದರ್ಶನದಲ್ಲಿ ಎಎನ್‌ಐ ಪತ್ರಕರ್ತ “ವಿರೋಧಿಗಳನ್ನು ಹತ್ತಿಕ್ಕಲು ಇಡಿ, ಐಟಿ, ಸಿಬಿಐ ಅನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿಪಕ್ಷಗಳ ಆರೋಪವಾಗಿದೆ” ಎಂದು ಪ್ರಶ್ನಿಸಿದ್ದು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಿಡಿಮಿಡಿಗೊಂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ, “ಸ್ಕ್ರಿಪ್ಟ್ ಮಿಸ್ ಆಗಿದೆಯಾ” ಎಂದು ಗೇಲಿ ಮಾಡಿದ್ದಾರೆ.
When BJP in-house agency ANI’s journalist asked questions to Modi about misuse of central agency,
Modi got angry and said you should research which type of questions should be asked to the Prime Minister. pic.twitter.com/NygF0swDep
— Shantanu (@shaandelhite) May 28, 2024
ಎಎನ್‌ಐ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ವಿಪಕ್ಷಗಳು ನಿಮಗೆ ಈ ಕಸವನ್ನು ನೀಡಿದೆ, ಈ ಕಸವನ್ನು ಹಿಡಿದುಕೊಂಡು ನೀವು ನಮ್ಮ ಬಳಿ ಬರುತ್ತೀರಿ. ಸರ್ಕಾರ ಮತ್ತು ಪ್ರಧಾನಿಗೆ ಯಾವ ಪ್ರಶ್ನೆ ಕೇಳಬೇಕು ಎಂದು ಮಾಧ್ಯಮಗಳು ಸಂಶೋಧನೆ ಮಾಡಬೇಕು” ಎಂದು ಹೇಳಿದ್ದಾರೆ.
“ನೀವು ಹೇಳುವುದಕ್ಕೆ ಸಾಕ್ಷಿ ಏನಿದೆ? ಕಾನೂನಿನ ನಿಯಮ ಏನಿದೆ? ಎಂದು ವಿಪಕ್ಷಗಳನ್ನು ಪ್ರಶ್ನಿಸಿ. ಆ ಧೈರ್ಯ ನಿಮ್ಮಲಿಲ್ಲ. ಆದರೆ ಅವರು ಎಸೆದ ಕಸವನ್ನು (ಆರೋಪ) ಎತ್ತಿಗೊಂಡು ನನ್ನ ಬಳಿ ಬರುತ್ತೀರಿ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಪ್ರಾಯಶ್ಚಿತ್ತಕ್ಕಾಗಿ ಮೋದಿ ಕನ್ಯಾಕುಮಾರಿಗೆ ಹೋಗಬೇಕೆಂದುಕೊಂಡಿದ್ದರೆ ಒಳ್ಳೆಯದು: ಕಪಿಲ್ ಸಿಬಲ್
ಈ ವಿಡಿಯೋವನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು, “ಸ್ಕ್ರಿಪ್ಟ್ ತಪ್ಪಾಗಿದೆಯೇ” ಎಂದು ಗೇಲಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ನವೀನ್ ಎಂಬ ನೆಟ್ಟಿಗರು, “ಇದು ಕೂಡಾ ಸ್ಕ್ರಿಪ್ಟ್” ಎಂದು ವ್ಯಂಗ್ಯವಾಡಿದ್ದಾರೆ. ಮೋದಿ ಸಂದರ್ಶನಗಳು ಸಂಪೂರ್ಣವಾಗಿ ಸ್ಕ್ರಿಪ್ಟ್ ಆಗಿರುತ್ತದೆ ಎಂದು ಇನ್ನೂ ಕೆಲವರು ಹೇಳಿದ್ದಾರೆ.
Oops. Script misplaced? https://t.co/er9fjCz909
— Satish Acharya (@satishacharya) May 29, 2024
ಇನ್ನು ಜನಾರ್ದನ ಎಂಬ ನೆಟ್ಟಿಗರೊಬ್ಬರು, “ಹೌದು, ಇದು ಸ್ಕ್ರಿಪ್ಟ್. ಟೆಲಿಪ್ರಾಪ್ಟರ್ ಅನ್ನು ನೆಲದ ಮೇಲೆ ಪ್ರಧಾನಿಗೆ ಕಾಣುವಂತೆ ಇರಿಸಲಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಪ್ರಧಾನಿ ಮೋದಿ ಟೆಲಿಪ್ರಾಪ್ಟರ್‌ನಲ್ಲಿರುವುದನ್ನು ಓದಲು ಸಾಧ್ಯವಾಗಿಲ್ಲ” ಎಂದು ಲೇವಡಿ ಮಾಡಿದ್ದಾರೆ.
ಈ ವಿಡಿಯೋದಲ್ಲೇ ಪ್ರಧಾನಿ ಮೋದಿ “ವಿಪಕ್ಷಗಳು ಎಸೆದ ಕಸವನ್ನು ನೀವು ನನಗೆ ತಂದು ಎಸೆದರೆ ನಾನು ಅದನ್ನು ರಿಸೈಕಲಿಂಗ್ ಮಾಡುತ್ತೇನೆ. ಜನರಿಗೆ ಸಹಾಯವಾಗುವಂತೆ ಮಾಡುತ್ತೇನೆ” ಎಂದಿದ್ದಾರೆ. ಮೋದಿಯ ಈ ಹೇಳಿಕೆಯನ್ನು ಕೂಡಾ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
“ರಿಸೈಕಲ್ ಅಂದರೆ ಹೇಮಂತ್ ಬಿಸ್ವಾ, ಅಜಿತ್ ಪವಾರ್, ಜಿಂದಾಲ್ ಮೊದಲಾದವರೇ” ಎಂದು ಭ್ರಷ್ಟಾಚಾರ ಆರೋಪದ ಬಳಿಕ ಬಿಜೆಪಿ ಸೇರಿದವರ ಪಟ್ಟಿಯನ್ನು ನೀಡಿದ್ದಾರೆ. ಹಾಗೆಯೇ ವಾಷಿಂಗ್ ಮಷೀನ್ ಬಳಸಿ ರಿಸೈಕಲ್ ಮಾಡಿಕೊಳ್ಳಿ ಎಂದೂ ನೆಟ್ಟಿಗರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.