ಕೇಂದ್ರೀಯ ಸಂಸ್ಥೆ ದುರುಪಯೋಗ ಪ್ರಶ್ನೆ; ಸಿಡಿಮಿಡಿಗೊಂಡ ಮೋದಿ, ಸ್ಕ್ರಿಪ್ಟ್‌ ಮಿಸ್ ಆಯ್ತ ಎಂದ ನೆಟ್ಟಿಗರು

Date:

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಎನ್‌ಐಗೆ ಸಂದರ್ಶನ ನೀಡಿದ್ದು, ಕೇಂದ್ರೀಯ ಸಂಸ್ಥೆಯ ದುರುಪಯೋಗದ ಪ್ರಶ್ನೆ ಕೇಳಿದಾಗ ಸಿಡಿಮಿಡಿಗೊಂಡಿದ್ದು, ಪ್ರಧಾನಿಗೆ ಯಾವ ರೀತಿ ಪ್ರಶ್ನೆ ಕೇಳಬೇಕೆಂದು ಸಂಶೋಧನೆ ನಡೆಸಿ ಬರಬೇಕು ಎಂದಿದ್ದಾರೆ.

- Advertisement -

ಸಂದರ್ಶನದಲ್ಲಿ ಎಎನ್‌ಐ ಪತ್ರಕರ್ತ “ವಿರೋಧಿಗಳನ್ನು ಹತ್ತಿಕ್ಕಲು ಇಡಿ, ಐಟಿ, ಸಿಬಿಐ ಅನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿಪಕ್ಷಗಳ ಆರೋಪವಾಗಿದೆ” ಎಂದು ಪ್ರಶ್ನಿಸಿದ್ದು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಿಡಿಮಿಡಿಗೊಂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ, “ಸ್ಕ್ರಿಪ್ಟ್ ಮಿಸ್‌ ಆಗಿದೆಯಾ” ಎಂದು ಗೇಲಿ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಎಎನ್‌ಐ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ವಿಪಕ್ಷಗಳು ನಿಮಗೆ ಈ ಕಸವನ್ನು ನೀಡಿದೆ, ಈ ಕಸವನ್ನು ಹಿಡಿದುಕೊಂಡು ನೀವು ನಮ್ಮ ಬಳಿ ಬರುತ್ತೀರಿ. ಸರ್ಕಾರ ಮತ್ತು ಪ್ರಧಾನಿಗೆ ಯಾವ ಪ್ರಶ್ನೆ ಕೇಳಬೇಕು ಎಂದು ಮಾಧ್ಯಮಗಳು ಸಂಶೋಧನೆ ಮಾಡಬೇಕು” ಎಂದು ಹೇಳಿದ್ದಾರೆ.

“ನೀವು ಹೇಳುವುದಕ್ಕೆ ಸಾಕ್ಷಿ ಏನಿದೆ? ಕಾನೂನಿನ ನಿಯಮ ಏನಿದೆ? ಎಂದು ವಿಪಕ್ಷಗಳನ್ನು ಪ್ರಶ್ನಿಸಿ. ಆ ಧೈರ್ಯ ನಿಮ್ಮಲಿಲ್ಲ. ಆದರೆ ಅವರು ಎಸೆದ ಕಸವನ್ನು (ಆರೋಪ) ಎತ್ತಿಗೊಂಡು ನನ್ನ ಬಳಿ ಬರುತ್ತೀರಿ” ಎಂದಿದ್ದಾರೆ.

ಇದನ್ನು ಓದಿದ್ದೀರಾ?  ಪ್ರಾಯಶ್ಚಿತ್ತಕ್ಕಾಗಿ ಮೋದಿ ಕನ್ಯಾಕುಮಾರಿಗೆ ಹೋಗಬೇಕೆಂದುಕೊಂಡಿದ್ದರೆ ಒಳ್ಳೆಯದು: ಕಪಿಲ್ ಸಿಬಲ್

ಈ ವಿಡಿಯೋವನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು, “ಸ್ಕ್ರಿಪ್ಟ್ ತಪ್ಪಾಗಿದೆಯೇ” ಎಂದು ಗೇಲಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ನವೀನ್ ಎಂಬ ನೆಟ್ಟಿಗರು, “ಇದು ಕೂಡಾ ಸ್ಕ್ರಿಪ್ಟ್” ಎಂದು ವ್ಯಂಗ್ಯವಾಡಿದ್ದಾರೆ. ಮೋದಿ ಸಂದರ್ಶನಗಳು ಸಂಪೂರ್ಣವಾಗಿ ಸ್ಕ್ರಿಪ್ಟ್ ಆಗಿರುತ್ತದೆ ಎಂದು ಇನ್ನೂ ಕೆಲವರು ಹೇಳಿದ್ದಾರೆ.

ಇನ್ನು ಜನಾರ್ದನ ಎಂಬ ನೆಟ್ಟಿಗರೊಬ್ಬರು, “ಹೌದು, ಇದು ಸ್ಕ್ರಿಪ್ಟ್. ಟೆಲಿಪ್ರಾಪ್ಟರ್‌ ಅನ್ನು ನೆಲದ ಮೇಲೆ ಪ್ರಧಾನಿಗೆ ಕಾಣುವಂತೆ ಇರಿಸಲಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಪ್ರಧಾನಿ ಮೋದಿ ಟೆಲಿಪ್ರಾಪ್ಟರ್‌ನಲ್ಲಿರುವುದನ್ನು ಓದಲು ಸಾಧ್ಯವಾಗಿಲ್ಲ” ಎಂದು ಲೇವಡಿ ಮಾಡಿದ್ದಾರೆ.

ಈ ವಿಡಿಯೋದಲ್ಲೇ ಪ್ರಧಾನಿ ಮೋದಿ “ವಿಪಕ್ಷಗಳು ಎಸೆದ ಕಸವನ್ನು ನೀವು ನನಗೆ ತಂದು ಎಸೆದರೆ ನಾನು ಅದನ್ನು ರಿಸೈಕಲಿಂಗ್ ಮಾಡುತ್ತೇನೆ. ಜನರಿಗೆ ಸಹಾಯವಾಗುವಂತೆ ಮಾಡುತ್ತೇನೆ” ಎಂದಿದ್ದಾರೆ. ಮೋದಿಯ ಈ ಹೇಳಿಕೆಯನ್ನು ಕೂಡಾ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

“ರಿಸೈಕಲ್ ಅಂದರೆ ಹೇಮಂತ್ ಬಿಸ್ವಾ, ಅಜಿತ್ ಪವಾರ್, ಜಿಂದಾಲ್ ಮೊದಲಾದವರೇ” ಎಂದು ಭ್ರಷ್ಟಾಚಾರ ಆರೋಪದ ಬಳಿಕ ಬಿಜೆಪಿ ಸೇರಿದವರ ಪಟ್ಟಿಯನ್ನು ನೀಡಿದ್ದಾರೆ. ಹಾಗೆಯೇ ವಾಷಿಂಗ್ ಮಷೀನ್ ಬಳಸಿ ರಿಸೈಕಲ್ ಮಾಡಿಕೊಳ್ಳಿ ಎಂದೂ ನೆಟ್ಟಿಗರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

?s=150&d=mp&r=g
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿ ಪ್ರತಿಭಟನೆ ತಡೆಯಲು ಮೆಟ್ರೋ, ರೈಲು ಬಂದ್: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಸಿಪಿಐಎಂ ನಾಯಕ ಎಂ ಎ ಬೇಬಿ

ಅಕ್ಟೋಬರ್ 10ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ವಿವಿಧ ಪ್ರತಿಪಕ್ಷಗಳು...

ಅ. 10ರ ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್; ಕಠಿಣ ಕ್ರಮದ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತರ (CEC) ಹೊಣೆಗಾರಿಕೆ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಾರ್ಟಿ'...

ಪಂಜಾಬ್ ಸಿಎಂ ಕಚೇರಿ ಭ್ರಷ್ಟಾಚಾರದ ಸಿಬಿಐ ತನಿಖೆ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ...