ಮೋಹನ್ ಚರಣ್ ಮಾಝಿ: ಹಿಂದುತ್ವಧಾರಿ ಬುಡಕಟ್ಟು ಮುಖ್ಯಮಂತ್ರಿ

Date:

Advertisements

ಕೆಲವರು, ಅದರಲ್ಲೂ ರಾಜಕೀಯದಲ್ಲಿರುವವರು ಮಗುವಿನಂತೆ ಮುಗ್ಧಮುಖದೊಂದಿಗೆ ನಿಗರ್ವಿ ಅಥವಾ ವಿನಮ್ರವಾಗಿ ನೋಡುವುದು, ಕಾಣಿಸಿಕೊಳ್ಳುವುದು ಕೂಡ ವಂಚನೆಯ ಭಾಗವೇ ಆಗಿರುತ್ತದೆ. ಆ ಮುಗ್ಧ ಮುಖದ ಹಿಂದೆ ಅಡಗಿರುವುದು ಮನುಷ್ಯ ಬೇರೆಯೇ ಆಗಿರುತ್ತಾನೆ. ಜನಸಾಮಾನ್ಯರೊಂದಿಗೆ ಬದುಕುವ ಮತ್ತು ಅವರ ಹಿತಕ್ಕಾಗಿ ಹೋರಾಡುವ ದೃಢ ಸಂಕಲ್ಪಹೊಂದಿರುವ ವ್ಯಕ್ತಿ, ಹಿಂದುತ್ವ-ಕೋಮುವಾದವನ್ನು ತನ್ನ ತೋಳಿನಲ್ಲಿ ಧರಿಸಿದ್ದಾರೆ – ಇದು ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಬಗ್ಗೆ ಅವರ ಹಿಂದಿನ ನಿಕಟವರ್ತಿಯೊಬ್ಬರು ಹೇಳಿದ ಮಾತು.

ಬಿಜೆಪಿ ಅಧಿಕಾರದಲ್ಲಿರುವ ಮತ್ತು ಇತ್ತೀಚೆಗೆ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಮೋದಿ-ಶಾ ಜೋಡಿ ಅನಿರೀಕ್ಷಿತವಾಗಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದೆ. ಬದಲಿಸಿದೆ. ಅಂತಹ ಆಯ್ಕೆಗಳಲ್ಲಿ ಮಾಝಿ ಕೂಡ ಒಬ್ಬರು.

ಇತ್ತೀಚಿನ ವರ್ಷಗಳಲ್ಲಿ ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ಆದಿವಾಸಿಗಳು ಮತ್ತು ಹಿಂದುಗಳ ನಡುವೆ ವ್ಯತ್ಯಾಸವಿದೆ. ಜನಗಣತಿಯಲ್ಲಿ ಬುಡಕಟ್ಟು ಜನಾಂಗಗಳಿಗೆ ಸ್ವತಂತ್ರ ಧಾರ್ಮಿಕ ಸಂಹಿತೆಯನ್ನು ಜಾರಿಗೆ ತರಬೇಕು ಎಂಬ ಒತ್ತಾಯ, ಚರ್ಚೆಗಳನ್ನು ಮುನ್ನೆಲೆಗೆ ತಂದಿವೆ. ಇಂತಹ ವಿವಾದಗಳ ನಡುವೆ, ಅದಕ್ಕೆ ಪ್ರತಿಕ್ರಿಯೆಯಾಗಿಯೂ, ತನ್ನ ಕಾರ್ಯತಂತ್ರದ ಭಾಗವಾಗಿಯೂ ಮಾಝಿ ಅವರನ್ನು ಒಡಿಶಾದ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ಆಯ್ಕೆ ಮಾಡಿದೆ.

Advertisements

ಮಾಝಿ ಅವರು ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಹಲವಾರು ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಂತಲ್ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಇದೇ ಬುಡಕಟ್ಟು ಸಮುದಾಯವರು.

ಆದರೆ, ಮಾಝಿ ಬುಡಕಟ್ಟು ಸಮುದಾಯಕ್ಕೆ ಸೇರಿದ್ದರೂ, ಆರ್‌ಎಸ್‌ಎಸ್‌ನ ದೊಡ್ಡ ಪ್ರತಿಪಾದಕರು. ಅವರು ತನ್ನೊಳಗಿರುವ ಹಿಂದುತ್ವವನ್ನು ನಿರಂತರವಾಗಿ ಬಹಿರಂಗವಾಗಿಯೇ ತೋರ್ಪಡಿಸಿಕೊಂಡು ಬಂದಿದ್ದಾರೆ. ಎರಡು ವರ್ಷಗಳ ಹಿಂದೆ, ಅವರು ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಮುಖ್ಯ ಸಚೇತಕರಾಗಿದ್ದಾಗಲೂ ಸಹ, 1999ರಲ್ಲಿ ಆಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೇನ್ಸ್ ಹತ್ಯೆಯ ಅಪರಾಧಿ ಬಜರಂಗದಳದ ಕಾರ್ಯಕರ್ತ ದಾರಾ ಸಿಂಗ್ ಬಿಡುಗಡೆ ಮಾಡಬೇಕೆಂಬ ಬೇಡಿಕೆಗೆ ಬೆಂಬಲ ನೀಡಿದ್ದರು.

ಈಗ, ಒಡಿಶಾದಲ್ಲಿ ಬಿಜೆಪಿಗೆ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಪುರಿ ಜಗನ್ನಾಥ ದೇವಾಲಯದ ಎಲ್ಲ ನಾಲ್ಕು ದ್ವಾರಗಳನ್ನು ತೆರೆಯುವ ಮೂಲಕ ಮಾಝಿ ಸರ್ಕಾರವು ಧಾರ್ಮಿಕತೆ ಮೇಲೆ ತನ್ನ ಆಟವನ್ನು ಆರಂಭಿಸಿದೆ. ಮುಖ್ಯಮಂತ್ಇರ ಮಾಝಿ ಮತ್ತು ಅವರ ಮಂತ್ರಿ ಸಹೋದ್ಯೋಗಿಗಳು ದೇವಾಲಯದ ಮುಂದೆ ಸಾಷ್ಟಾಂಗ ನಮಸ್ಕಾರ ಹಾಕಿ, ತಮ್ಮ ಹಿಂದುತ್ವ ಕೋಮುವಾದಿ ತನವನ್ನು ಪ್ರದರ್ಶಿಸಿದ್ದಾರೆ.

ಬಾಲ್ಯದಿಂದಲೂ ಆರ್‌ಎಸ್‌ಎಸ್‌ ಜೊತೆಗಿದ್ದ ಮಾಝಿಗೆ ಮತ್ತೊಂದು ಆಯಾಮವಿದೆ. ಅವರು ಅದೇ ಬಾಲ್ಯದಿಂದಲೂ ಜನರ ನಡುವಿನ ವ್ಯಕ್ತಿ ಮತ್ತು ಜನಪರ ಹೋರಾಟಗಾರನೂ ಆಗಿದ್ದರು ಎಂದು ಅವರ ನಿಕಟವರ್ತಿಗಳು ಹೇಳುತ್ತಾರೆ. “ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಪ್ರದೇಶದಲ್ಲಿ ಬಡತನದ ಹಿನ್ನೆಲೆಯಿಂದ ಬಂದಿರುವ ಅವರು ಎಲ್ಲ ಸಂಕಷ್ಟಗಳನ್ನು ನೇರವಾಗಿ ಎದುರಿಸಿದ್ದಾರೆ. ಅವರು ತಮ್ಮ ಬಾಲ್ಯದಲ್ಲಿಯೇ ಆರ್‌ಎಸ್‌ಎಸ್‌ ಜೊತೆ ತೊಡಗಿಸಿಕೊಂಡಿದ್ದರು. ಕಿಯೋಂಜಾರ್ ಜಿಲ್ಲೆಯ ಜುಂಪುರದಲ್ಲಿ ಆರ್‌ಎಸ್‌ಎಸ್ ನಡೆಸುತ್ತಿರುವ ಸರಸ್ವತಿ ಶಿಶು ಮಂದಿರ ಶಾಲೆಯಲ್ಲಿ ಗುರೂಜಿಯಾಗಿ (ಶಿಕ್ಷಕ) ಅವರು ಕೆಲಸ ಮಾಡಿದ್ದರು. ಅದಾಗ್ಯೂ, ಸಹಾನುಭೂತಿ, ಪರಿಶ್ರಮ – ಇವು ಮುವತ್ತು ವರ್ಷಗಳ ಅವರ ರಾಜಕೀಯದಲ್ಲಿ ಅವರು ಪ್ರದರ್ಶಿಸಿಕೊಂಡು ಬಂದಿರುವ ಗುಣಗಳು” ಎಂದು ವನವಾಸಿ ಕಲ್ಯಾಣ ಆಶ್ರಮದ ಸಂಘಟನಾ ಕಾರ್ಯದರ್ಶಿ (ಪೂರ್ವ ವಲಯ) ಬಿಸ್ವಾಮಿತ್ರ ಮೊಹಾಂತ ಹೇಳುತ್ತಾರೆ.

ಮಾಝಿ ಅವರು ತಮ್ಮ ಸ್ಥಳೀಯ ಗ್ರಾಮ ರಾಯ್ಕಲದ ಸರಪಂಚ್‌ಆಗಿ ಆಯ್ಕೆಯಾಗುವ ಮೂಲಕ ರಾಜಕೀಯವನ್ನು ಆಂಭಿಸಿದರು. ಬಳಿಕ, ಕಿಯೋಂಜಾರ್‌ನಿಂದ 2000ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಅವರಿಗೆ ಟಿಕೆಟ್ ನೀಡಿತು. ಅವರು 2000 ಮತ್ತು 2004ರ ಚುನಾವಣೆಗಳಲ್ಲಿ ಆಗಿನ BJD-BJP ಮೈತ್ರಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಅದೇ ಸಮಯದಲ್ಲಿ, 22% ಬುಡಕಷ್ಟು ಸಮುದಾಯದ ಪ್ರಾಬಲ್ಯ ಹೊಂದಿರುವ ರಾಜ್ಯದಲ್ಲಿ ಪ್ರಮುಖ ಬುಡಕಟ್ಟು ಸಮುದಾಯದ ಧ್ವನಿಯಾಗಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾಗಿ ಮುಂಚೂಣಿಗೆ ಬಂದರು. ಅದಾಗ್ಯೂ, ಅವರು 2009 ಮತ್ತು 2014ರ ಚುನಾವಣೆಗಳಲ್ಲಿ ಸೋತರು. ಪರಾಜಿತರಾಗಿದ್ದ ಆ ಸಮಯದಲ್ಲಿ MA ಮತ್ತು LLB ಪದವಿಗಳನ್ನು ಪಡೆದುಕೊಂಡರು. 2013 ಮತ್ತು 2017ರ ನಡುವೆ ಹಲವಾರು ಜಿಲ್ಲೆಗಳ ಉಸ್ತುವಾರಿಯಾಗಿ, ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ವ್ಯಾಪಕವಾಗಿ ಕೆಲಸ ಮಾಡಿದರು.

ಆದಾಗ್ಯೂ, ಮಾಝಿ ಅವರು 2019ರಲ್ಲಿ ಮತ್ತೆ ವಿಧಾನಸಭೆ ಆಯ್ಕೆಯಾದರು. ಆ ವೇಳೆಗೆ, ಬಿಜೆಪಿ ಮತ್ತು ಬಿಜೆಡಿ ನಡುವಿನ ಮೈತ್ರಿ ಮುರಿದಿತ್ತು. ಆಗ, ಪ್ರತಿಪಕ್ಷದ ಮುಖ್ಯ ಸಚೇತಕರಾಗಿ, ಆಡಳಿತಾರೂಢ ಬಿಜೆಡಿ ವಿರುದ್ಧ ಗಟ್ಟಿ ದನಿಯಲ್ಲಿ ಪ್ರಶ್ನಿಸುವ ಮೂಲಕ ರಾಜ್ಯದ ಗಮನ ಸೆಳೆದರು. ಬಿಜೆಪಿಯ ಫೈರ್‌ಬ್ರಾಂಡ್ ಮುಖವಾಗಿ ಗುರುತಿಸಿಕೊಂಡರು. ಸದನದಲ್ಲಿ ಪ್ರಮುಖ ವಿಷಯಗಳ ಬಗ್ಗೆ ತಮ್ಮ ನಿಲುವುಗಳನ್ನು ಪ್ರತಿಪಾದಿಸುವ ಮೂಲಕ ಜನರ ಸಮಸ್ಯೆಗಳ ಹೋರಾಟಗಾರರಾಗಿ, ಬುಡಕಟ್ಟು ಸಮುದಾಯಗಳ ಮೇಲಿನ ಶೋಷಣೆ ಮತ್ತು ಭ್ರಷ್ಟಾಚಾರದ ವಿರುದ್ಧದ ದನಿಯಾಗಿ ಬಿಂಬಿಸಿಕೊಂಡರು.

ಈ ವರದಿ ಓದಿದ್ದೀರಾ?: ದರ್ಶನ್‌ನ ಸ್ತ್ರೀ ವಿರೋಧಿ, ಕೊಲ್ಲುವ ಮನಸ್ಥಿತಿಗೆ ಬಲಪಂಥೀಯ ಸಿದ್ದಾಂತ ಕಾರಣ! ಆತನ ಸೈದ್ದಾಂತಿಕ ಗುರು ಯಾರು ಗೊತ್ತೇ?

ಬುಡಕಟ್ಟು ಜನಾಂಗದವರು ತಮ್ಮ ಭೂಮಿಯನ್ನು ಬುಡಕಟ್ಟು ಅಲ್ಲದವರಿಗೆ ಮಾರಾಟ ಮಾಡಲು ಅವಕಾಶ ಕೊಡುವ ಉದ್ದೇಶದಿಂದ ‘1956ರ ಒಡಿಶಾದ ಪರಿಶಿಷ್ಟ ಪ್ರದೇಶಗಳ ಸ್ಥಿರಾಸ್ತಿ ವರ್ಗಾವಣೆ ಕಾಯ್ದೆ’ಗೆ ಬಿಜೆಡಿ ಸರ್ಕಾರ ತಂದಿದ್ದ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ಜೊತೆಗೆ, ಮಧ್ಯಾಹ್ನದ ಬಿಸಿಯೂಟದ ಯೋಜನೆಗಾಗಿ ಬೇಳೆಕಾಳುಗಳ ಖರೀದಿಯಲ್ಲಿ ನಡೆದ ‘700 ಕೋಟಿ ಹಗರಣ’ದ ಬಗ್ಗೆ ಗಮನ ಸೆಳೆಯಲು ಸ್ಪೀಕರ್ ವೇದಿಕೆಯ ಮೇಲೆ ಬೇಳೆಕಾಳು ಎಸೆದಿದ್ದ ಮಾಝಿ ಅವರನ್ನು 2023ರಲ್ಲಿ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿತ್ತು.

ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅವರ ಆಯ್ಕೆ ರಾಜ್ಯದ ಪ್ರಮುಖ ನಾಯಕರಿಗೆ ಆಶ್ಚರ್ಯವೇನು ತಂದಿಲ್ಲ. ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳನ್ನು ಅವರು ಹೊಂದಿದ್ದರು. ಆದರೆ, ಆರ್‌ಎಸ್‌ಎಸ್‌ ಹಿನ್ನೆಲೆಯನ್ನು ಹೊಂದಿರುವ ಅವರು, ಮುಂದಿನ ರಾಜಕೀಯವನ್ನು ಹೇಗೆ ನಡೆಸುತ್ತಾರೆ. ಸರ್ಕಾರವನ್ನು ಯಾವ ರೀತಿ ಸಮರ್ಥವಾಗಿ ಮುನ್ನಡೆಸುತ್ತಾರೆ. ಬುಡಕಟ್ಟು ಸಮುದಾಯಗಳ ವಿಚಾರದಲ್ಲಿ ಅವರ ಮುಂದಿನ ನಡೆ, ನಿಲುವು ಏನಾಗಲಿದೆ ಎಂಬುದನ್ನು ಕಾದು ನೋಡುಬೇಕು.

ಮಾಹಿತಿ ಮೂಲ: ಟಿಎನ್‌ಐಇ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X