ಬೋಟ್‌ ದುರಂತಗಳಲ್ಲಿ 200ಕ್ಕೂ ಅಧಿಕ ಮಂದಿ ಬಲಿ; ಪಾಠ ಕಲಿಯದ ಕೇರಳ!

Date:

ಕೇರಳದ ಮಲಪ್ಪುರಂ ಜಿಲ್ಲೆಯ ತಾನೂರಿನಲ್ಲಿ ಭಾನುವಾರ ಸಂಭವಿಸಿದ ಬೋಟ್‌ ದುರಂತದಲ್ಲಿ 7 ಮಕ್ಕಳು ಸೇರಿದಂತೆ 22 ಮಂದಿ ಮೃತಪಟ್ಟಿದ್ದರು.

ತಾನೂರಿನ ಒಟ್ಟುಂಪುರಂನ ತೂವಲ್ ತೀರಂ ಎಂಬಲ್ಲಿ ಭಾನುವಾರ ಸಂಜೆ 6.30ರ ಸಮಯದಲ್ಲಿ  ಈ ದುರಂತ ಸಂಭವಿಸಿದೆ. ದುರಂತಕ್ಕೀಡಾದ ಬೋಟ್‌ನಲ್ಲಿ ಸುಮಾರು 40 ಮಂದಿ  ಪ್ರಯಾಣಿಸುತ್ತಿದ್ದರು.  ಬೋಟ್‌ನಿಂದ ಜಿಗಿದು ಹಲವರು ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದರು.

ರಸ್ತೆ, ರೈಲು ಸಾರಿಗೆಯ ಜೊತೆಗೆ ಕೇರಳದ ಕೆಲ ಪ್ರದೇಶಗಳಲ್ಲಿ ಪ್ರಮುಖವಾಗಿ ಜಲ ಸಾರಿಗೆಯನ್ನೇ ಸಾರ್ವಜನಿಕರು ಅವಲಂಬಿಸಿದ್ದಾರೆ. ಇದರ ಜೊತೆಗೆ ʻದೇವರ ಸ್ವಂತ ಊರಿನಲ್ಲಿ ಜಲ ದುರಂತಗಳು ಪದೇ ಪದೇ ಮರುಕಳಿಸುತ್ತಲೇ ಇದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

1923ರಿಂದ 2023ರ ಮೇ7ರ ವರೆಗೂ ಕೇರಳದ ಹಲವು ಕಡೆಗಳಲ್ಲಿ ನಡೆದ ಬೋಟ್‌ ದುರಂತಗಳಲ್ಲಿ 200ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಜನವರಿ 24, 1924: ಕೊಲ್ಲಂನಿಂದ ಕೊಟ್ಟಾಯಂಗೆ 151 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬೋಟ್‌ ಪಲ್ಲಾನ ನದಿಯಲ್ಲಿ ಮುಳುಗಡೆಯಾಗಿತ್ತು. ಈ ದುರಂತದಲ್ಲಿ 24 ಜನರು ಮೃತಪಟ್ಟಿದ್ದರು. ಕೇರಳದ ಮಹಾಕವಿ ಎಂದೇ ಕರೆಯಲ್ಪಡುವ ಕುಮಾರನಾಶಾನ್, ಈ ದುರಂತದಲ್ಲಿ ಮೃತಪಟ್ಟಿದ್ದರು.

ಮಾರ್ಚ್ 19, 1980: ಕೊಚ್ಚಿಯ ಕನ್ನಮಲಿಯಲ್ಲಿ ನಡೆದ ಬೋಟ್‌ ದುರಂತದಲ್ಲಿ 30 ಮಂದಿ  ಯಾತ್ರಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು. ಮೃತರೆಲ್ಲರೂ ಸ್ಥಳೀಯ ಚರ್ಚ್‌ಗೆ ಭೇಟಿ ನೀಡಲು ತೆರಳುತ್ತಿದ್ದ ವೇಳೆ ಈ ದರ್ಘಟನೆ ನಡೆದಿತ್ತು.

ಸೆಪ್ಟೆಂಬರ್ 25, 1983: ಚರ್ಚ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೃಳುತ್ತಿದ್ದ ವೇಳೆ ಎರ್ನಾಕುಲಂ ಜಿಲ್ಲೆಯ ವಲ್ಲಾರ್‌ಪಾಡಂ ಪ್ರದೇಶದಲ್ಲಿ ದೋಣಿ  ಮಗುಚಿ 18 ಜನರು ಸಾವನ್ನಪ್ಪಿದ್ದರು.

ಜುಲೈ 27, 2002: ಅಲಪ್ಪುಝದ ಮುಹಮ್ಮ ಎಂಬಲ್ಲಿಂದ ಹೊರಟಿದ್ದ ಕೇರಳ ಜಲಸಾರಿಗೆ ಇಲಾಖೆಗೆ ಸೇರಿದ್ದ ಎ53 ಬೋಟ್, ಅಧಿಕ ಭಾರ ತಾಳಲಾರದೆ ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್ ಬಳಿಯ ವೆಂಬನಾಡ್ ಸರೋವರದಲ್ಲಿ ಮುಳುಗಿತ್ತು. ಈ ದುರಂತದಲ್ಲಿ 15 ಮಹಿಳೆಯರು ಮತ್ತು ಒಂಬತ್ತು ತಿಂಗಳ ಮಗು ಸೇರಿದಂತೆ 29 ಜನರು ಮೃತಪಟ್ಟಿದ್ದರು. ಪಿಎಸ್‌ಸಿ ಉದ್ಯೋಗಾಕಾಂಕ್ಷಿಗಳು ಪರೀಕ್ಷೆಗೆ ಹಾಜರಾಗಲು ಕೊಟ್ಟಾಯಂಗೆ  ಇದೇ ಬೋಟ್‌ನಲ್ಲಿ ತೆರಳುತ್ತಿದ್ದರು.

ಈ ಸುದ್ದಿ ಓದಿದ್ದೀರಾ?: ಕೇರಳ | ಬೋಟ್‌ ದುರಂತ; 18 ಮಂದಿ ಸಾವು

ಆಗಸ್ಟ್ 30, 2004: ಕೊಲ್ಲಂನ ಕರಾವಳಿಯಲ್ಲಿ ದೋಣಿ  ಮುಳುಗಿ 7 ಕಾರ್ಮಿಕರು ಮೃತಪಟ್ಟಿದ್ದರು.

ಜನವರಿ 2, 2005: ವೆಂಬನಾಡ್ ಸರೋವರದಲ್ಲಿ ಐಷಾರಾಮಿ ಬೋಟ್‌ ವೊಂದು ಮುಳುಗಿದ ಪರಿಣಾಮ ಒಬ್ಬ ಅರಬ್ ಪ್ರಜೆ  ಸೇರಿದಂತೆ 4 ಜನರು ಪ್ರಾಣ ತೆತ್ತಿದ್ದರು. .

ಫೆಬ್ರವರಿ 20, 2007: ಎರ್ನಾಕುಳಂ ಜಿಲ್ಲೆಯ ಪೆರಿಯಾರ್ ನದಿಯ ಬಳಿಯ ತಟ್ಟೆಕಾಡ್‌ ಎಂಬಲ್ಲಿ  ಸೋರಿಕೆಯಿಂದಾಗಿ ಬೋಟ್‌ ಒಳಗಡೆಗೆ ನೀರು ನುಗ್ಗಿದ ಪರಿಣಾಮ ಮುಳುಗಡೆಯಾಗಿತ್ತು. ಈ ವೇಳೆ ಶಾಲೆಯಿಂದ ಪಿನಿಕ್‌ ಹೊರಟಿದ್ದ 14 ಮಕ್ಕಳು ಮತ್ತು ಮೂವರು ಶಿಕ್ಷಕರು ಸಾವನ್ನಪ್ಪಿದ್ದರು. 6 ಮಂದಿ ಪ್ರಯಾಣಿಸಬಹುದಾಗಿದ್ದ ಈ ದೋಣಿಯಲ್ಲಿ ದುರಂತ ನಡೆದ ವೇಳೆ 61 ಪ್ರಯಾಣಿಕರಿದ್ದರು ಎಂದು ತನಿಖೆ ವೇಳೆ ಬಯಲಾಗಿತ್ತು.

ಸೆಪ್ಟೆಂಬರ್ 30, 2009: ಇಡುಕ್ಕಿಯ ತೆಕ್ಕಡಿ ಸರೋವರದ ಮಾಣಿಕ್ಕಾವಲ ಪ್ರದೇಶದಲ್ಲಿ ʻಜಲಕನ್ಯಕʼ ಹೆಸರಿನ ಡಬಲ್ ಡೆಕ್ಕರ್ ಪ್ರಯಾಣಿಕ ಬೋಟ್‌ ಮುಳುಗಡೆಯಾದ ಪರಿಣಾಮ7 ಮಕ್ಕಳು ಮತ್ತು 23 ಮಹಿಳೆಯರು ಸೇರಿದಂತೆ ಒಟ್ಟು 45 ಮಂದಿ ಪ್ರವಾಸಿಗರು ನೀರುಪಾಲಾಗಿದ್ದರು. ಅವೈಜ್ಞಾನಿಕವಾಗಿ ಬೋಟ್ ನಿರ್ಮಾಣ, ಓವರ್ ಲೋಡ್, ಲೈಫ್ ಜಾಕೆಟ್ ಇಲ್ಲದಿರುವುದು ಅಪಘಾತಕ್ಕೆ ಕಾರಣ ಎಂದು ಎಂದು ತನಿಖೆ ವೇಳೆ ಬಯಲಾಗಿತ್ತು.

ಡಿಸೆಂಬರ್ 12, 2011: ಅಲಪ್ಪುಝ ಜಿಲ್ಲೆಯ ಕುಥಿಯಾಥೋಡು ಎಂಬಲ್ಲಿ ದೋಣಿಯೊಂದು ಮುಳುಗಿ 2 ಜನರ ಸಾವನ್ನಪ್ಪಿದ್ದರು.

ಜನವರಿ 26, 2013: ಆಲಪ್ಪುಝ ಜಿಲ್ಲೆಯ ಪುನ್ನಕ್ಕಾಡ್ ಪ್ರದೇಶದಲ್ಲಿ ಪ್ರಯಾಣಿಕ ದೋಣಿಯೊಂದು ಮುಳುಗಿ 4 ಮಂದಿ ಸಾವು.

ಜೂನ್ 11, 2013: ಅಲಪ್ಪುಝದ ಪುನ್ನಕ್ಕಾಡ್ ಪ್ರದೇಶದಲ್ಲಿ ‘ಶಿಕಾರ’ ಮಗುಚಿ ಇಬ್ಬರು ಸಾವು.

ಮೇ 7, 2023: ಮಲಪ್ಪುರಂ ಜಿಲ್ಲೆಯ ತನೂರ್ ಪ್ರದೇಶದ ತೂವಲ್‌ ತೀರಂ ಕಡಲತೀರದ ಸಮೀಪದಲ್ಲಿ ಡಬಲ್ ಡೆಕ್ಕರ್ ದೋಣಿ ಮುಳುಗಿ 7 ಮಕ್ಕಳು ಸೇರಿದಂತೆ 22 ಮಂದಿ ಮೃತಪಟ್ಟಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ 2ನೇ ಹಂತದ ಚುನಾವಣೆ: ಇವಿಎಂ ವಿರುದ್ಧ 290 ದೂರು ಸ್ವೀಕಾರ, ಶೇ.39 ಮತದಾನ

ದೇಶದ 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ...

ಕೋಮು ದ್ವೇಷ ಭಾಷಣ; ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚು.ಆಯೋಗಕ್ಕೆ 93 ನಿವೃತ ಅಧಿಕಾರಿಗಳ ಪತ್ರ

ರಾಜಸ್ಥಾನದ ಬನ್ಸ್‌ವಾರಾದಲ್ಲಿ ಏಪ್ರಿಲ್ 21ರಂದು ನಡೆದ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ...

‘ನೋಟಾ’ಗೆ ಹೆಚ್ಚು ಮತ ಬಂದರೆ ಮುಂದೇನು? ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ಅಭ್ಯರ್ಥಿಗಳಿಗಿಂತ ‘ನೋಟಾ’ಗೆ ಹೆಚ್ಚು ಮತಗಳು ಬಂದರೆ ಏನು ಮಾಡಬೇಕೆಂಬ ಸಾರ್ವಜನಿಕ ಹಿತಾಸಕ್ತಿ...

ಬಿಹಾರ| ಹೊತ್ತಿ ಉರಿದ ಮದುವೆಯ ಮಂಟಪ; ಆರು ಮಂದಿ ಸಜೀವ ದಹನ

ಬಿಹಾರದ ದರ್ಬಂಗಾ ಜಿಲ್ಲೆಯ ಮದುವೆಯ ಮಂಟಪ ಹೊತ್ತಿ ಉರಿದಿದ್ದು, ಈ ಅಗ್ನಿ...