ಮಕ್ಕಾ ಮಸೀದಿಯಲ್ಲಿ ಜೈ ಶ್ರೀರಾಮ್‌ ಘೋಷಣೆ; ಕನ್ನಡಿಗ ಸೇರಿದಂತೆ ಮೂವರ ಬಂಧನ

Date:

  • ಹೈದರಾಬಾದ್‌ನಲ್ಲಿರುವ ಐತಿಹಾಸಿಕ ಮಕ್ಕಾ ಮಸೀದಿ
  • ಮಹಾರಾಷ್ಟ್ರದ ಇಬ್ಬರು, ಕರ್ನಾಟಕದ ಅಮೋಲ್ ಬಂಧನ

ಹೈದರಾಬಾದ್‌ನಲ್ಲಿರುವ ಐತಿಹಾಸಿಕ ಮಕ್ಕಾ ಮಸೀದಿಯಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿದ ಆರೋಪದ ಮೇರೆಗೆ ಕರ್ನಾಟಕ ಮೂಲದ ಓರ್ವ ಯುವಕ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ.

ಬಂಧಿತ ಮೂವರನ್ನು ಮಹಾರಾಷ್ಟ್ರದ ವೆಂಕಟ್, ವಿಶಾಲ್ ಮತ್ತು ಕರ್ನಾಟಕದ ಅಮೋಲ್ ಎಂದು ಗುರುತಿಸಲಾಗಿದೆ.

ಗುರುವಾರ ಸಂಜೆ ಮೆಕ್ಕಾ ಮಸೀದಿಗೆ ಆಗಮಿಸಿದ್ದ ಆರೋಪಿಗಳು, ಮಸೀದಿಯ ಮೆಟ್ಟಿಲುಗಳ ಮೇಲೆ ಕುಳಿತು ʻಧಾರ್ಮಿಕ ಘೋಷಣೆʼಗಳನ್ನು ಕೂಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ?: ಸಕ್ಕರೆ ಉತ್ಪಾದನೆಯಲ್ಲಿ ಕುಸಿತ; ರಫ್ತು ನಿಷೇಧಿಸಲಿರುವ ಕೇಂದ್ರ

ಘೋಷಣೆಗಳನ್ನು ಕೂಗುತ್ತಿದ್ದ ವೇಳೆ ಸ್ಥಳದಲ್ಲಿದ್ದವರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೆಕ್ಕಾ ಮಸೀದಿಯ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಹುಸೈನಿ ಆಲಂ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್ 295(ಎ), 298 ಆರ್/ಡಬ್ಲ್ಯೂ 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ಬಳಿಕ ಹೈದರಾಬಾದ್‌ನ ಚಾರ್ಮಿನಾರ್ ಪ್ರದೇಶದಲ್ಲಿರುವ ಐತಿಹಾಸಿಕ ಮೆಕ್ಕಾ ಮಸೀದಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಂಪತಿಗೆ ಕನ್ನಡ ನಟ ನಾಗಭೂಷಣ್​ ಕಾರು ಡಿಕ್ಕಿ: ಮಹಿಳೆ ಮೃತ್ಯು

ಬೆಂಗಳೂರಿನ ವಸಂತನಗರ ಮುಖ್ಯರಸ್ತೆಯ ಬಳಿ ಶನಿವಾರ ರಾತ್ರಿ ನಡೆದ ಘಟನೆ ರಾತ್ರಿ ವಾಕಿಂಗ್‌...

2 ಸಾವಿರ ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಅ. 7ರವರೆಗೆ ಅವಧಿ ವಿಸ್ತರಿಸಿದ ಆರ್‌ಬಿಐ

ಅಕ್ಟೋಬರ್ 7ರವರೆಗೂ 2000 ರೂ. ನೋಟು ವಿನಿಮಯಕ್ಕೆ ಅವಕಾಶ ಅ.8ರ ನಂತರ 2000...

‘ಲಿಪ್‌ಸ್ಟಿಕ್‌ ಹಾಕಿದ ಮಹಿಳೆಯರು ಮುಂದೆ ಬರುತ್ತಾರೆ’; ಮಹಿಳಾ ಮೀಸಲಾತಿ ಬಗ್ಗೆ ಆರ್‌ಜೆಡಿ ನಾಯಕ ಸೆಕ್ಸಿಸ್ಟ್ ಹೇಳಿಕೆ

ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರದಿಂದ ‘ಲಿಪ್‌ಸ್ಟಿಕ್‌ ಮತ್ತು ಬಾಬ್-ಕಟ್ ಹೇರ್ ಸ್ಟೈಲ್’...

ನಿತೀಶ್ ಪ್ರಯಾಣಕ್ಕೆ ಸಂಚಾರ ತಡೆ; ಟ್ರಾಫಿಕ್‌ನಲ್ಲಿ ಸಿಲುಕಿದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗು

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಯಾಣಕ್ಕಾಗಿ ಪೊಲೀಸರು ರಸ್ತೆಯಲ್ಲಿ ಇತರ ವಾಹನ...