ಸಕ್ಕರೆ ಉತ್ಪಾದನೆಯಲ್ಲಿ ಕುಸಿತ; ರಫ್ತು ನಿಷೇಧಿಸಲಿರುವ ಕೇಂದ್ರ

Date:

  • ಪ್ರಸ್ತುತ ಭಾರತದಿಂದ 58 ಲಕ್ಷ ಟನ್‌ ಸಕ್ಕರೆ ರಫ್ತು
  • ಸಚಿವರ ಸಭೆಯಲ್ಲಿ ರಫ್ತು ನಿಷೇಧ ನಿರ್ಧಾರ

ದೇಶದಲ್ಲಿ ಸಕ್ಕರೆ ಉತ್ಪಾದನೆ ಕುಸಿದಿರುವ ಕಾರಣದಿಂದ ಸಕ್ಕರೆಯ ರಫ್ತನ್ನು ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಮುಂದಿನ ವರ್ಷದ ಲೋಕಸಭೆ ಚುನಾವಣೆ ವೇಳೆ ಹಣದುಬ್ಬರದಂತಹ ಪರಿಸ್ಥಿತಿ ನಿರ್ಮಾಣವಾಗುವುದನ್ನು ತಡೆಯಲು ಕೇಂದ್ರ ಈ ಕ್ರಮ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ.

ಎಲ್ಲ ಸಚಿವರನ್ನು ಒಳಗೊಂಡ ಸಮಿತಿಯು ಈ ಕುರಿತು ಚರ್ಚೆ ನಡೆಸಿ ಗಿರಣಿಗಳಿಂದ ರವಾನೆಯಾಗುವ ಸಕ್ಕರೆ ರಫ್ತನ್ನು ತಕ್ಷಣದಿಂದ ಅನ್ವಯವಾಗುವಂತೆ ನಿಲ್ಲಿಸಲು ತೀರ್ಮಾನಿಸಿದೆ. ಏಪ್ರಿಲ್ 27ರಂದು ನಡೆದ ಸಚಿವರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಕ್ಕರೆ ರಫ್ತು ಕುರಿತ ಚರ್ಚೆ ನಡೆಸಿದ ಸಚಿವರ ಸಮಿತಿ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಭಾಗವಹಿಸಿದ್ದರು. ಸಕ್ಕರೆಯ ರಫ್ತು ನಿಷೇಧದ ಬಗ್ಗೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿವೆ.

2022-23ನೇ (ಅಕ್ಟೋಬರ್‌-ಸೆಪ್ಟೆಂಬರ್) ಸಾಲಿನ ಭಾರತದ ಸಕ್ಕರೆಯ ಉತ್ಪಾದನೆ 327 ಲಕ್ಷ ಟನ್ ಇದೆ. ಇದು ಹಿಂದಿನ ವರ್ಷ 359 ಲಕ್ಷ ಟನ್‌ ಇತ್ತು. “ಸಕ್ಕರೆ ಪ್ರಮಾಣ ಈಗ 275 ಲಕ್ಷ ಟನ್‌ ಇದೆ. ಇದು ಸದ್ಯದ ದೇಶೀಯ ಬಳಕೆಯ ಬೇಡಿಕೆಯನ್ನಷ್ಟೇ ಪೂರೈಸುತ್ತದೆ. ಆದರೆ, ರಫ್ತು ಮುಂದುವರಿಸಿದ ಪರಿಣಾಮವಾಗಿ, ಈ ವರ್ಷ ರಾಜ್ಯಗಳ ವಿಧಾನಸಭೆ ಮತ್ತು ಮುಂದಿನ ವರ್ಷ ಮಾರ್ಚ್‌-ಏಪ್ರಿಲ್‌ನಲ್ಲಿ ಲೋಕಸಭೆ ಚುನಾವಣೆ ಸಂದರ್ಭಗಳಲ್ಲಿ ಹಣದುಬ್ಬರದ ಸ್ಥಿತಿ ಉಂಟಾಗದಿರಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಕ್ಕರೆ ಚಿಲ್ಲರೆ ಬೆಲೆ ಶುಕ್ರವಾರ (ಏಪ್ರಿಲ್‌ 28) ಕೆಜಿಗೆ ಭಾರತ ಮಟ್ಟದಲ್ಲಿ ಸರಾಸರಿ ₹42.24 ಇತ್ತು ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ದತ್ತಾಂಶ ಹೇಳಿದೆ.

2022-23ನೇ ಹಣಕಾಸಿನ ವರ್ಷದಲ್ಲಿ (ಏಪ್ರಿಲ್‌-ಮಾರ್ಚ್‌) ಭಾರತದ ಸಕ್ಕರೆಯ ರಫ್ತಿನ ಮೌಲ್ಯ 5,770.64 ದಶಲಕ್ಷ ಅಮೆರಿಕನ್‌ ಡಾಲರ್‌ ಇತ್ತು. ಇದು 2021-22ರಲ್ಲಿ 4,602.65 ಅಮೆರಿಕನ್‌ ಡಾಲರ್‌ ಇತ್ತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಮೀಕ್ಷೆ | ಬಿಜೆಪಿಗೆ ನಿದ್ರಾಭಂಗ; ಕಾಂಗ್ರೆಸ್‌ನಲ್ಲಿ ಹೊಸ ಹುಮ್ಮಸ್ಸು

2021-22ನೇ ಸಾಲಿನಲ್ಲಿ ಸಕ್ಕರೆಯ ರಫ್ತು ಗರಿಷ್ಠ 110 ಲಕ್ಷ ಟನ್‌ ತಲುಪಿತ್ತು. ಪ್ರಸ್ತುತ ವರ್ಷ ಈವರೆಗೆ 58 ಲಕ್ಷ ಟನ್ ಸಕ್ಕರೆಯು ರಫ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ.4ರಿಂದ ಮತ್ತೆ ಚುನಾವಣಾ ಬಾಂಡ್: ‘ಬಿಜೆಪಿಗೆ ಚಿನ್ನದ ಫಸಲು’ ಎಂದ ಪಿ ಚಿದಂಬರಂ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿವಾದಾತ್ಮಕ ಚುನಾವಣಾ ಬಾಂಡ್‌ಗಳನ್ನು ವಿತರಣೆ...

ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಾಸಕಿಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ಬಿಜೆಪಿ ಸಂಸದ ಸತೀಶ್ ಗೌತಮ್

ಉತ್ತರ ಪ್ರದೇಶದ ಬಿಜೆಪಿ ಸಂಸದ ಸತೀಶ್ ಗೌತಮ್ ಸಾರ್ವಜನಿಕ ಕಾರ್ಯಕ್ರಮವೊಂದರ ವೇದಿಕೆಯಲ್ಲೇ...

ದೆಹಲಿ | ಆಝಾದ್‌ಪುರ ಮಂಡಿಯಲ್ಲಿ ಭೀಕರ ಬೆಂಕಿ ಅವಘಡ

ಟೊಮ್ಯಾಟೋ ಬೆಲೆ ಏರಿಕೆ ಸಂದರ್ಭದಲ್ಲಿ ತರಕಾರಿ ಕೊಂಡುಕೊಳ್ಳಲಾಗದೆ ವ್ಯಾಪಾರಿ ರಾಮೇಶ್ವರ್‌ ಅವರ...

ಪಿಟಿಐ ಅಧ್ಯಕ್ಷರಾಗಿ ‘ಪ್ರಜಾವಾಣಿ’ಯ ನಿರ್ದೇಶಕ ಕೆ ಎನ್ ಶಾಂತಕುಮಾರ್ ಆಯ್ಕೆ

ದೇಶದ ಖ್ಯಾತ ಸುದ್ದಿ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ(ಪಿಟಿಐ)ದ...