ಮೊಬೈಲ್‌ ಕೊಡದೆ ಕಟ್ಟುನಿಟ್ಟು ಮಾಡಿದ್ದಕ್ಕೆ ತಾಯಿಯನ್ನೇ ಕೊಲ್ಲಲು ಹೊರಟ ಮಗಳು!

Date:

Advertisements

ಮೊಬೈಲ್‌ನಲ್ಲಿ ಹೆಚ್ಚು ಆಡವಾಡುವ, ಅದನ್ನು ಗೀಳಾಗಿಸಿಕೊಂಡಿರುವ ಮಕ್ಕಳನ್ನು ನೋಡಿರುತ್ತೇವೆ. ಒಂದು ವೇಳೆ ಮೊಬೈಲ್‌ ನೀಡದಿದ್ದರೆ, ಕೊಡಿಸದಿದ್ದರೆ ಮುನಿಸಿಕೊಳ್ಳುವುದು ಅಥವಾ ಹಠ ಮಾಡುವುದನ್ನು ನೋಡಿರುತ್ತೇವೆ. ಕೆಲವರಂತೂ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಓದಿರುತ್ತೇವೆ. ಆದರೆ ಈ ಘಟನೆ ಮಾತ್ರ ಇನ್ನೂ ವಿಚಿತ್ರವಾಗಿದೆ. ಮೊಬೈಲ್‌ ಕೊಡದೆ ಕಟ್ಟುನಿಟ್ಟು ಮಾಡಿದ ಹೆತ್ತ ತಾಯಿಯನ್ನೇ ಕೊಲ್ಲಲು ಪ್ರಯತ್ನಿಸಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.

ಈ ಪ್ರಕರಣದಲ್ಲಿ 13 ವರ್ಷದ ಬಾಲಕಿ ಇಡೀ ದಿನ ಮೊಬೈಲಿನಲ್ಲೇ ಮುಳುಗಿರುತ್ತಿದ್ದಳು. ಸ್ನೇಹಿತರೊಟ್ಟಿಗೆ ಚಾಟ್‌ ಮಾಡೋದು, ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್‌ ನೋಡೋದು. ಹೀಗೆ ದಿನವಿಡಿ ಮೊಬೈಲ್‌ ಫೋನಿನಲ್ಲೇ ನಿರತವಾಗಿದ್ದ ಬಾಲಕಿ, ಓದುತ್ತಿರಲಿಲ್ಲ. ಇದನ್ನು ಗಮನಿಸಿದ ತಾಯಿ ಕೆಲವು ದಿನಗಳ ಹಿಂದೆ ಬಾಲಕಿಯ ಬಳಿ ಇದ್ದ ಮೊಬೈಲ್ ಫೋನ್ ಕಿತ್ತುಕೊಂಡು ವಾಪಸ್ ಕೊಡುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ್ದರು.

ಈ ಸುದ್ದಿ ಓದಿದ್ದೀರಾ? ಝೀ ಸಂಸ್ಥೆಯ ಸುಭಾಷ್ ಚಂದ್ರ, ಪುತ್ರನ ವಿರುದ್ಧ ತುರ್ತು ಕ್ರಮ ಜರುಗಿಸಲು ಸೆಬಿ ಸೂಚನೆ

Advertisements

ನಂತರ ಕೆಲ ದಿನಗಳಲ್ಲಿ ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯಲು ಶುರುವಾದವು. ಸಕ್ಕರೆ ಡಬ್ಬದಲ್ಲಿ ಕೀಟನಾಶಕದ ಪುಡಿ ಸಿಗುತ್ತಿತ್ತು. ಬಚ್ಚಲು ಮನೆಯಲ್ಲಿ ಫೆನಾಯಿಲ್ ಸುರಿದ ದ್ರವ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಗಾಬರಿಯಾದ ಪೋಷಕರು ಸಮಸ್ಯೆಗೆ ಏನು ಕಾರಣವೆಂದು ಅಭಯಂ ಎಂಬ ಆಪ್ತ ಸಮಾಲೋಚನಾ ಸಹಾಯವಾಣಿಗೆ ಕರೆ ಮಾಡಿದ್ದಾರೆ.

ಪೋಷಕರ ಮನವಿಯ ಮೇರೆಗೆ ಆಗಮಿಸಿದ ಸಹಾಯವಾಣಿ ಸಿಬ್ಬಂದಿ ಹಾಗೂ ಮನಃಶಾಸ್ತ್ರಜ್ಞರು ಮನೆಯವರ ನಂತರ ಬಾಲಕಿಯನ್ನು ಕೌನ್ಸೆಲಿಂಗ್ ನಡೆಸಿದಾಗ ಶಾಕಿಂಗ್ ಸಂಗತಿ ಹೊರಬಿದ್ದಿದೆ. ತನಗೆ ಮೊಬೈಲ್‌ ನೀಡದ ಕಾರಣಕ್ಕಾಗಿ ತಾಯಿಯನ್ನು ಕೊಲೆ ಮಾಡಲು ಈ ರೀತಿಯಲ್ಲಿ ಸಂಚು ಮಾಡಿರುವುದಾಗಿ ಮಗಳು ಆಪ್ತ ಸಮಾಲೋಚನಾ ಸಿಬ್ಬಂದಿಗೆ ಬಾಯಿ ಬಿಟ್ಟಿದ್ದಾಳೆ. ಸದ್ಯ ಸಮಾಲೋಚನಾ ಸಿಬ್ಬಂದಿ ಬಾಲಕಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

2022ರಲ್ಲಿ ಲಖನೌದಲ್ಲಿ ನಡೆದ ಇದೇ ರೀತಿಯ ಪ್ರಕರಣದಲ್ಲಿ 16 ವರ್ಷದ ಬಾಲಕನೊಬ್ಬ ಮೊಬೈಲ್ ಗೇಮ್‌ಗಳನ್ನು ಆಡಲು ಬಿಡಲಿಲ್ಲ ಎಂಬ ಕಾರಣಕ್ಕೆ ತನ್ನ ತಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಶವವನ್ನು ಮುಚ್ಚಿಟ್ಟಿದ್ದ. ತಾಯಿಯ ಮೃತದೇಹ ಕೊಳೆತು ದುರ್ವಾಸನೆ ಬರಲಾರಂಭಿಸಿದಾಗ ಬಾಲಕ ಸುಳ್ಳು ಕಥೆ ಕಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ ನಂತರ ಸತ್ಯ ಬಯಲಿಗೆ ಬಂದಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X