ಖಲಿಸ್ತಾನ್ ನಾಯಕ ಅಮೃತ್‌ಪಾಲ್‌ ಬಂಧನಕ್ಕೆ ಸಜ್ಜು; ಪಂಜಾಬ್‌ನಾದ್ಯಂತ ಇಂಟರ್‌ನೆಟ್‌ ಸ್ಥಗಿತ

Date:

  • ಅಹಿತಕರ ಘಟನೆಗಳನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ನಾಳೆಯವರೆಗೂ ಇಂಟರ್‌ನೆಟ್‌ ಸ್ಥಗಿತ
  • ‘ವಾರಿಸ್ ಪಂಜಾಬ್‌ ದೇ’ ಎಂಬ ಮೂಲಭೂತ ಸಂಘಟನೆಯ ನೇತೃತ್ವ ವಹಿಸಿರುವ ಅಮೃತಪಾಲ್ ಸಿಂಗ್

ಖಲಿಸ್ತಾನ್ ಪ್ರಮುಖ ನಾಯಕ ಅಮೃತ್‌ ಪಾಲ್‌ ಬಂಧನಕ್ಕೆ ಪಂಜಾಬ್‌ ಪೊಲೀಸರು ತೀವ್ರಗತಿಯಲ್ಲಿ ಸಜ್ಜಾಗಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

ಈಗಾಗಲೇ ಅಮೃತ್‌ಪಾಲ್‌ ಸಿಂಗ್‌ನ 6 ಕ್ಕೂ ಹೆಚ್ಚು ಸಹಚರರನ್ನು ಬಂಧಿಸಲಾಗಿದೆ. ಅಹಿತಕರ ಘಟನೆಗಳನ್ನು ತಡೆಯಲು ಪಂಜಾಬ್‌ನಲ್ಲಿ  ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಪಂಜಾಬ್‌ನ ಏಳು ಜಿಲ್ಲೆಗಳಲ್ಲಿ ಅಮೃತಪಾಲ್ ಸಿಂಗ್ ಸಹಚರರ ಬಂಧನಕ್ಕೆ ಬಲೆ ಬೀಸಲಾಗಿದೆ. ಜಲಂಧರ್‌ನ ಶಾಹಕೋಟ್‌ನ ಮೆಹತ್‌ಪುರ ಗ್ರಾಮದಲ್ಲಿ ಈತನ ಸಹಚರರನ್ನು ಪೊಲೀಸರು ಸುತ್ತುವರೆದಿದ್ದಾರೆ. ಅಮೃತಪಾಲ್ ಸಿಂಗ್ ಶಾಹಕೋಟ್‌ಗೆ ಭೇಟಿಯ ಮುನ್ಸೂಚನೆ ಇದ್ದ ಕಾರಣ ಪೊಲೀಸರು ಶಾಹಕೋಟ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಲ್ಲಾ ರಸ್ತೆಗಳನ್ನು ಮುಚ್ಚಿ ಬೃಹತ್ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತನ್ನ ಪ್ರಮುಖ ಸಹಚರ, ಅಪಹರಣದಲ್ಲಿ ಭಾಗಿಯಾಗಿರುವ ಆರೋಪಿ ಲವ್‌ಪ್ರೀತ್ ಸಿಂಗ್ ಬಂಧನದ ವಿರುದ್ಧ ಅಮೃತಪಾಲ್ ಸಿಂಗ್, ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಖಡ್ಗ, ಬಂದೂಕು, ಬಡಿಗೆ ಹಿಡಿದು ಅಮೃತಸರದ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಲವ್‌ಪ್ರೀತ್ ಸಿಂಗ್ ಬಿಡುಗಡೆಗೆ ಆಗ್ರಹಿಸಿದ್ದ. ವಾರಿಸ್ ಪಂಜಾಬ್ ದೇ ಸಂಘಟನೆ ಹೋರಾಟಕ್ಕೆ ಬೆದರಿದ ಪಂಜಾಬ್ ಪೊಲೀಸ್, ಒಂದು ದಿನದಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತ್ತು. ಪಂಜಾಬ್ ಪೊಲೀಸರ ಮನವಿ ಪುರಸ್ಕರಿಸಿದ ಅಜ್ನಾಲ ಕೋರ್ಟ್, ಆರೋಪಿಯನ್ನು ಬಿಡುಗಡೆ ಮಾಡಲು ಆದೇಶಿಸಿತ್ತು.

ಅಮೃತಪಾಲ್ ಸಿಂಗ್ ‘ವಾರಿಸ್ ಪಂಜಾಬ್‌ ದೇ’ ಎಂಬ ಮೂಲಭೂತ ಸಂಘಟನೆಯ ನೇತೃತ್ವ ವಹಿಸಿದ್ದಾನೆ. ಕಳೆದ ವರ್ಷ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಟ ಹಾಗೂ ಕಾರ್ಯಕರ್ತ ದೀಪ್ ಸಿಧು ಆರಂಭಿಸಿದ್ದ ‘ವಾರಿಸ್ ಪಂಜಾಬ್‌ ದೇ’ ಸಂಘಟನೆಯನ್ನು ಈತ ಮುನ್ನಡೆಸುತ್ತಿದ್ದಾನೆ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ 2ನೇ ಹಂತದ ಚುನಾವಣೆ: ಇವಿಎಂ ವಿರುದ್ಧ 290 ದೂರು ಸ್ವೀಕಾರ, ಶೇ.39 ಮತದಾನ

ದೇಶದ 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ...

ಕೋಮು ದ್ವೇಷ ಭಾಷಣ; ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚು.ಆಯೋಗಕ್ಕೆ 93 ನಿವೃತ ಅಧಿಕಾರಿಗಳ ಪತ್ರ

ರಾಜಸ್ಥಾನದ ಬನ್ಸ್‌ವಾರಾದಲ್ಲಿ ಏಪ್ರಿಲ್ 21ರಂದು ನಡೆದ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ...

‘ನೋಟಾ’ಗೆ ಹೆಚ್ಚು ಮತ ಬಂದರೆ ಮುಂದೇನು? ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ಅಭ್ಯರ್ಥಿಗಳಿಗಿಂತ ‘ನೋಟಾ’ಗೆ ಹೆಚ್ಚು ಮತಗಳು ಬಂದರೆ ಏನು ಮಾಡಬೇಕೆಂಬ ಸಾರ್ವಜನಿಕ ಹಿತಾಸಕ್ತಿ...

ಬಿಹಾರ| ಹೊತ್ತಿ ಉರಿದ ಮದುವೆಯ ಮಂಟಪ; ಆರು ಮಂದಿ ಸಜೀವ ದಹನ

ಬಿಹಾರದ ದರ್ಬಂಗಾ ಜಿಲ್ಲೆಯ ಮದುವೆಯ ಮಂಟಪ ಹೊತ್ತಿ ಉರಿದಿದ್ದು, ಈ ಅಗ್ನಿ...