ಫೇಸ್‌ಬುಕ್ ಉದ್ಯೋಗ ಕಡಿತಕ್ಕೆ ಆಕ್ರೋಶ; ಮಾರ್ಕ್ ಝುಕರ್‌ಬರ್ಗ್‌ಗೆ ಸಿಬ್ಬಂದಿಗಳಿಂದ ಛೀಮಾರಿ

Date:

  • ಮಾರ್ಚ್ 14 ರಂದು 10 ಸಾವಿರ ಉದ್ಯೋಗಗಳ ವಜಾ
  • ಕಳೆದ ನವೆಂಬರ್‌ನಲ್ಲಿ 11 ಸಾವಿರ ಉದ್ಯೋಗ ಕಡಿತ

ಪದೇ ಪದೇ ಉದ್ಯೋಗ ಕಡಿತಕ್ಕೆ ಮುಂದಾಗಿರುವ ಮೆಟಾ ಸಂಸ್ಥೆಯ ವಿರುದ್ಧ ಆಕ್ರೋಶಗೊಂಡಿರುವ ಉದ್ಯೋಗಿಗಳು, ಫೇಸ್‌ಬುಕ್‌ ಸಿಇಒ ಮಾರ್ಕ್ ಝುಕರ್‌ಬರ್ಗ್‌ಗೆ ಛೀಮಾರಿ ಹಾಕಿರುವ ಘಟನೆ ನಡೆದಿದೆ.

ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಇತ್ತೀಚಿಗೆ 10 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಹೇಳಿತ್ತು. ಈ ಘೋಷಣೆ ಬಳಿಕ ಕಂಪನಿಯ ಉದ್ಯೋಗಿಗಳ ಜೊತೆ ನಡುವೆ ನಡೆದ ಸಭೆಯಲ್ಲಿ ಸಿಇಒ ಮಾರ್ಕ್ ಝುಕರ್‌ಬರ್ಗ್‌ಗೆ ಸಿಬ್ಬಂದಿಗಳು ಛೀಮಾರಿ ಹಾಕಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ 11 ಸಾವಿರ ಉದ್ಯೋಗ ಕಡಿತಗೊಳಿಸಿದ ಬಳಿಕ ಪುನಃ ಮಾರ್ಚ್ 14 ರಂದು 10 ಸಾವಿರ ಉದ್ಯೋಗಗಳನ್ನು ಕೈಬಿಡುವುದಾಗಿ ತೀರ್ಮಾನ ಮಾಡಲಾಗಿತ್ತು. ಈ ನಿರ್ಧಾರ ಪ್ರಕಟಿಸಿದ ನಂತರ ಸಂಸ್ಥೆಯು ತನ್ನ ಉದ್ಯೋಗಿಗಳ ಸಾಮಾನ್ಯ ಸಭೆ ಕರೆದಾಗ ಮಾರ್ಕ್ ಝುಕರ್‌ಬರ್ಗ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಾಮಾಜಿಕ ಮಾಧ್ಯಮಗಳಲ್ಲಿ ನಿರ್ಬಂಧ ತೆರವು; ‘ಐ ಆಮ್ ಬ್ಯಾಕ್’ ಎಂದ ಡೊನಾಲ್ಡ್ ಟ್ರಂಪ್

ಈ ರೀತಿ ಉದ್ಯೋಗಿಗಳನ್ನು ವಜಾ ಮಾಡುತ್ತಾ ಹೋದರೆ ಕಂಪನಿಯ ಮೇಲೆ ವಿಶ್ವಾಸವಿಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ನಿರಂತರವಾಗಿ ಉದ್ಯೋಗವನ್ನು ಕಡಿತಗೊಳಿಸಿದರೆ ಹೊಸ ಉದ್ಯೋಗಿಗಳು ಯಾವ ನಂಬಿಕೆಯಿಂದ ಕಂಪನಿ ಸೇರುತ್ತಾರೆ. ಇಂತಹ ನಿರ್ಧಾರಗಳಿಂದ ಕಂಪನಿಗಳಿಗೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಲ್ಲದೆ ಇದು ಉದ್ಯೋಗಿಗಳ ಭವಿಷ್ಯವನ್ನು ಹಾಳು ಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಝುಕರ್‌ಬರ್ಗ್‌ ಉದ್ಯೋಗಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಸಿಬ್ಬಂದಿಗಳ ಆವೇಶ ಮಾತ್ರ ಕಡಿಮೆಯಾಗಲಿಲ್ಲ.

ವೇತನ ಕಡಿತಕ್ಕೊಳಗಾದವರ ಆರ್ಥಿಕ ಸುರಕ್ಷತೆಗೂ ಮೆಟಾ ಮಂಡಳಿ ನಿರ್ಧರಿಸಿದ್ದು, ಇದಕ್ಕಾಗಿ 115 ಕೋಟಿ ರೂ.ಗಳನ್ನು ಹೆಚ್ಚುವರಿ ಹಣ ಮೀಸಲಿಡಲಾಗಿದೆ.

Suprabha
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಅಲ್ಪಾವಧಿ ಸಾಲ ನೀಡುವ ಜಾಲದ ಕುರಿತು ಎಚ್ಚರವಿರಲಿ ಎಂದ ಪೊಲೀಸರು

ಸಾಲವನ್ನು ಪಡೆಯುವುದು ಈಗ ಸರಳ ಹಾಗೂ ಸುಲಭವಾಗಿದೆ. ಆ್ಯಪ್‌ಗಳ ಮುಖಾಂತರ ಕ್ಷಣ...

ಹಲೋ ಯುಪಿಐ | ಧ್ವನಿ ಮೂಲಕ ಹಣ ಪಾವತಿಸುವ ಫೀಚರ್ ಶೀಘ್ರ ಪ್ರಾರಂಭ

ಪಠ್ಯದ ಬದಲು ಧ್ವನಿ ಆಧಾರಿತ ಮೂಲಕ ಯುಪಿಐಯಲ್ಲಿ ಪಾವತಿ ಸೇವೆಗಳನ್ನು ಶೀಘ್ರದಲ್ಲಿಯೇ...

ಎಟಿಎಂ ಕಾರ್ಡ್ ಬಳಸದೆಯೇ, ಇನ್ನು ಮುಂದೆ ಯುಪಿಐ ಬಳಸಿ ನಗದು ವಿತ್ ಡ್ರಾ ಮಾಡಬಹುದು

ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದೆ ಇನ್ನು ಮುಂದೆ ಎಟಿಎಂನಲ್ಲಿ ನಗದು ವಿತ್‌...

ಚಂದ್ರನ ಮೇಲೆ ಇಸ್ರೋ ಮತ್ತೊಂದು ಪ್ರಯೋಗ; ವಿಕ್ರಮ್ ಲ್ಯಾಂಡರ್ ಮತ್ತೆ ಸಾಫ್ಟ್ ಲ್ಯಾಂಡ್

ಚಂದ್ರಯಾನ-3ರ 'ವಿಕ್ರಮ್ ಲ್ಯಾಂಡರ್' ಮತ್ತೊಮ್ಮೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆಯಿತು...