ಯೋಗಿ ಸಿಎಂ ಆದ ನಂತರ ರಾಜ್ಯದಲ್ಲಿ 15 ದಿನಕ್ಕೊಂದು ಎನ್‌ಕೌಂಟರ್‌

Date:

  • 2017ರಿಂದ ಪೊಲೀಸ್ ಎನ್‌ಕೌಂಟರ್‌ನಲ್ಲಿ 186 ಆರೋಪಿಗಳ ಹತ್ಯೆ
  • ಹತ್ಯೆಯಾದವರ ಪೈಕಿ 96 ಆರೋಪಿಗಳ ವಿರುದ್ಧ ಕೊಲೆ ಪ್ರಕರಣಗಳು ದಾಖಲು

ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾದ 2017ರ ನಂತರದಲ್ಲಿ ಪ್ರತಿ ಹದಿನೈದು ದಿನಕ್ಕೊಮ್ಮೆ ಒಬ್ಬರನ್ನು ಎನ್‌ಕೌಂಟರ್‌ ಮಾಡಲಾಗುತ್ತಿದೆ.

ಪೊಲೀಸ್ ದಾಖಲೆಗಳ ತನಿಖೆಯ ಅನುಸಾರ ಮಾರ್ಚ್ 2017ರಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡಾಗಿನಿಂದ ಮತ್ತು ಇಲ್ಲಿಯವರೆಗೆ ರಾಜ್ಯದಲ್ಲಿ 186 ಎನ್‌ಕೌಂಟರ್‌ ನಡೆದಿವೆ. ಈ ಎನ್‌ಕೌಂಟರ್‌ಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ಒಂದಕ್ಕಿಂತ ಹೆಚ್ಚು ಆರೋಪಿಗಳು ಪೊಲೀಸರಿಂದ ಹತ್ಯೆಯಾಗಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಈ ಆರು ವರ್ಷಗಳಲ್ಲಿ, ಪ್ರತಿ 15 ದಿನಗಳಿಗೊಮ್ಮೆ 30ಕ್ಕೂ ಹೆಚ್ಚು ಆರೋಪಿಗಳ ಮೇಲೆ ಗುಂಡು ಹಾರಿಸಲಾಗಿದೆ. ಎನ್‌ಕೌಂಟರ್‌ನಲ್ಲಿ ಹತರಾದವರನ್ನು ಹೊರತುಪಡಿಸಿದರೆ, ಕಾಲಿಗೆ/ ದೇಹದ ಇತರ ಭಾಗಗಳಿಗೆ ಗುಂಡು ಹಾರಿಸಿದ ಕಾರಣ ಗಾಯಗೊಂಡವರ ಸಂಖ್ಯೆ 5,046ಕ್ಕೆ ಏರುತ್ತದೆ.

2017ರಿಂದ 186 ಮಂದಿ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಕೊಲೆಯಾಗಿದ್ದಾರೆ ಎಂದು ಪೊಲೀಸ್‌ ದಾಖಲೆಗಳು ಹೇಳುತ್ತವೆ. ಹತ್ಯೆಯಾದವರ ಪೈಕಿ 96 ಆರೋಪಿಗಳ ವಿರುದ್ಧ ಕೊಲೆ ಪ್ರಕರಣಗಳು ದಾಖಲಾಗಿವೆ. ಅವರಲ್ಲಿ ಇಬ್ಬರು ಕಿರುಕುಳ ಮತ್ತು ಸಾಮೂಹಿಕ ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣಗಳನ್ನು ಎದುರಿಸಿದ್ದಾರೆ.

ಅಧಿಕೃತ ದಾಖಲೆಗಳ ಪ್ರಕಾರ, 2016 ಮತ್ತು 2022ರ ನಡುವೆ, ರಾಜ್ಯದಲ್ಲಿ ಅಪರಾಧ ಸಂಖ್ಯೆಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ ಎಂದು ಪೊಲೀಸರೇ ಮಾಹಿತಿ ನೀಡುತ್ತಾರೆ. ಅಧಿಕೃತ ದಾಖಲೆಗಳ ಪ್ರಕಾರ ಡಕಾಯಿತಿಯಲ್ಲಿ ಶೇ. 82 ಮತ್ತು ಕೊಲೆ ಪ್ರಕರಣಗಳಲ್ಲಿ ಶೇ. 37 ಇಳಿಕೆ ಕಂಡುಬಂದಿವೆ.

ಈ ಸುದ್ದಿ ಓದಿದ್ದೀರಾ? ಜಿಂಬಾಬ್ವೆ ವಿಶ್ವದ ಅತ್ಯಂತ ದಟ್ಟದರಿದ್ರ ರಾಷ್ಟ್ರ: ಭಾರತದ ಸ್ಥಾನ ಎಷ್ಟು ಗೊತ್ತೆ?

“ಘೋರ ಅಪರಾಧಗಳನ್ನು ನಿಯಂತ್ರಿಸಲು ಅಥವಾ ಕಠಿಣ ಅಪರಾಧಿಗಳ ಮೇಲೆ ನಿಗಾ ಇರಿಸಲು ಪೊಲೀಸ್ ಎನ್‌ಕೌಂಟರ್‌ಗಳು ಎಂದಿಗೂ ನಮ್ಮ ಕಾರ್ಯತಂತ್ರದ ಭಾಗವಾಗಿರಲಿಲ್ಲ” ಎಂದು ಉತ್ತರ ಪ್ರದೇಶದ ಅಪರಾಧ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಡಿಜಿ ಪ್ರಶಾಂತ್ ಕುಮಾರ್ ಹೇಳುತ್ತಾರೆ.

ದಾಖಲೆಗಳು ಹೇಳುವ ಪ್ರಕಾರ ಬಹುತೇಕ ಎನ್‌ಕೌಂಟರ್‌ಗಳು ಅನುಮಾನಾಸ್ಪದ ಹಾಗೂ ಪ್ರಶ್ನಿಸದೆ ಉಳಿದುಕೊಳ್ಳುತ್ತವೆ.

ದಾಖಲೆಗಳ ಪ್ರಕಾರ 161 ಎನ್‌ಕೌಂಟರ್‌ಗಳಲ್ಲಿ ಬಹುತೇಕ ಯಾರಿಂದಲೂ ಆಕ್ಷೇಪಣೆಯಿಲ್ಲದೆ ಪ್ರಕರಣಗಳು ಪೂರ್ಣಗೊಂಡಿವೆ ಮತ್ತು ವಿಲೇವಾರಿ ಮಾಡಲಾಗಿದೆ ಎಂದು ಮ್ಯಾಜಿಸ್ಟ್ರೇಟ್ ವಿಚಾರಣೆಗಳಿಂದ ತಿಳಿದುಬಂದಿದೆ. ಇವುಗಳಲ್ಲಿ 25 ಪ್ರಕರಣಗಳು ಇನ್ನು ಬಾಕಿಯಿವೆ.

ಎನ್‌ಕೌಂಟರ್ ದತ್ತಾಂಶಗಳ ಪರಿಶೀಲನೆಯ ಪ್ರಕಾರ, ಮೀರತ್ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಅಥವಾ 65 ಅಪರಾಧಿಗಳನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ವಾರಣಾಸಿ ಮತ್ತು ಆಗ್ರಾ ವಲಯಗಳು ಕ್ರಮವಾಗಿ ಶೇ 20 ಮತ್ತು 14 ರಷ್ಟಿವೆ.

‘ಆಪರೇಷನ್ ಲಾಂಗ್ಡಾ’ದಲ್ಲಿ (ಇದರಲ್ಲಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಗಾಯಗೊಳಿಸುವುದು) ಮಾರ್ಚ್ 2017 ಮತ್ತು ಏಪ್ರಿಲ್ 2023ರ ನಡುವೆ 5,046 ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ. ಇಲ್ಲಿಯೂ ಮೀರತ್ ವಲಯವು ಅಗ್ರಸ್ಥಾನದಲ್ಲಿದೆ. 1,752 ಆರೋಪಿಗಳು ಪೊಲೀಸರ ಗುಂಡಿನ ದಾಳಿಯಿಂದ ಗಾಯಗೊಂಡಿದ್ದಾರೆ.

ಈ ಬಗ್ಗೆ ಉತ್ತರ ಪ್ರದೇಶ ಪೊಲೀಸ್ ವಿಶೇಷ ಡಿಜಿ ಅವರು ಮಾಧ್ಯಮಗಳಿಗೆ ಉತ್ತರಿಸಿ, “ಪಶ್ಚಿಮ ಉತ್ತರ ಪ್ರದೇಶವು ಸಾಂಪ್ರದಾಯಿಕವಾಗಿ ಅಪರಾಧ ಪೀಡಿತ ಪ್ರದೇಶ” ಎಂದು ಹೇಳಿದ್ದಾರೆ.

ಈ ಆರು ವರ್ಷಗಳ ಅವಧಿಯಲ್ಲಿ ಅಪರಾಧಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 13 ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು 1,443 ಮಂದಿ ಗಾಯಗೊಂಡಿದ್ದಾರೆ. 13 ಪೊಲೀಸರ ಪೈಕಿ ಒಬ್ಬರು ಹಾಗೂ ಗಾಯಗೊಂಡ 405 ಪೊಲೀಸರು ಮೀರತ್ ವಲಯದವರಾಗಿದ್ದಾರೆ.

2017ರ ನಂತರ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲು ಎನ್‌ಕೌಂಟರ್‌ನಲ್ಲಿ ಬಲಿಯಾದವನು ಗುರ್ಮೀತ್ ಎಂದು ಗುರುತಿಸಲಾಗಿದೆ. ಈತ ಸಹರಾನ್‌ಪುರದ ನಂಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ನಂದನ್‌ಪುರ ಗ್ರಾಮದ ನಿವಾಸಿಯಾಗಿದ್ದು, ಗುಂಡಿನ ಚಕಮಕಿಯಲ್ಲಿ ಹತ್ಯೆಯಾಗಿದ್ದಾನೆ.

ಇತ್ತೀಚಿನ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಮೇ 14ರಂದು ಕಾನ್ಪುರ ವಲಯದ ಜಲೌನ್‌ನಲ್ಲಿ ಪೊಲೀಸ್ ಪೇದೆ ಭೇದಜೀತ್ ಸಿಂಗ್ ಹತ್ಯೆಯ ಆರೋಪಿಗಳಾಗಿದ್ದ 27 ವರ್ಷದ ಉಮೇಶ್ ಚಂದ್ರ ಅಲಿಯಾಸ್ ಕಲ್ಲು, ಮತ್ತು 40 ವರ್ಷದ ರಮೇಶ್ ಎಂಬುವರು ಪೊಲೀಸರ ಗುಂಡಿಗೆ ಬಲಿಯಾದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟ್ರಸ್ಟ್‌ಗಳ ಕಾರ್ಯನಿರ್ವಹಣೆಗೆ ಹೆಚ್ಚಿನ ಬಲ ತುಂಬುವೆ : ಸಚಿವ ಶಿವರಾಜ್ ತಂಗಡಗಿ

ವಿವಿಧ ಟ್ರಸ್ಟ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ಸಚಿವರು ಕನ್ನಡ ಮತ್ತು ಸಂಸ್ಕೃತಿ...

ಇದು ನನ್ನ ಕೊನೆ ಚುನಾವಣೆ; ಸಕ್ರಿಯ ರಾಜಕಾರಣದಲ್ಲಿದ್ದು ಸೇವೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವರುಣಾ ಕ್ಷೇತ್ರದ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ ರಾಜ್ಯದ ಜನ ಬಿಜೆಪಿಯ...

ದಲಿತರ ಹತ್ಯಾಕಾಂಡ | 42 ವರ್ಷಗಳ ಬಳಿಕ ತೀರ್ಪಿತ್ತ ಕೋರ್ಟ್‌; ನ್ಯಾಯ ದಕ್ಕಿದ್ದು ಯಾರಿಗೆ?

ಇಲ್ಲಿ ನ್ಯಾಯ ತೋರುತ್ತಿದೆಯೇ? ನಾನು ನನ್ನ ಇಡೀ ಜೀವನವನ್ನು ನ್ಯಾಯಕ್ಕಾಗಿ ಕಾಯುವುದರಲ್ಲೇ...

ನಮ್ಮ ಸಚಿವರು | ಮಾಸ್ ಲೀಡರ್ ಆಗುವ ಲಕ್ಷಣವುಳ್ಳ ಪ್ರಿಯಾಂಕ್ ಖರ್ಗೆ; ಕ್ಷೇತ್ರದ ಅಭಿವೃದ್ಧಿಗೆ ನೀಡಬೇಕಿದೆ ಆದ್ಯತೆ

ಪ್ರಿಯಾಂಕ್ ಖರ್ಗೆ ಅವರು  ಕಾಂಗ್ರೆಸ್‌ನಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದಾರೆ. ತಂದೆಯ ಹಾದಿಯಲ್ಲಿಯೇ...