ದೆಹಲಿಯಲ್ಲಿ ಎನ್‌ಡಿಎ (NDA) ನಾಯಕರು ಅಂಗೀಕರಿಸಿದ ಪ್ರಸ್ತಾವನೆಯಲ್ಲಿ ನರೇಂದ್ರ ಮೋದಿ ಅವರನ್ನು ತಮ್ಮ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಸರ್ಕಾರ ರಚನೆ ಸಂಬಂಧ ಚರ್ಚೆಗಾಗಿ ಇಂದು ದೆಹಲಿಯ ನರೇಂದ್ರ ಮೋದಿಯವರ ನಿವಾಸದಲ್ಲಿ ಎನ್‌ಡಿಎ ನಾಯಕರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಸೇರಿದಂತೆ ಎಲ್ಲ ಎನ್‌ಡಿಎ ನಾಯಕರು ಭಾಗವಹಿಸಿದ್ದರು.
NDA leaders unanimously elect Narendra Modi as their leader in the proposal passed by the leaders of the NDA in Delhi. pic.twitter.com/dJat3JR9KI
— ANI (@ANI) June 5, 2024
ಈ ಸಭೆಯಲ್ಲಿ ಎಲ್ಲ ನಾಯಕರು ಮೋದಿ ಅವರನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಾಗಿ ಎನ್‌ಡಿಎ ಪ್ರಕಟಣೆಯ ಮೂಲಕ ತಿಳಿಸಿದೆ.
“ನರೇಂದ್ರ ಮೋದಿ ಪ್ರಧಾನಿಯಾಗಲಿ. ನಮ್ಮ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಾಧ್ಯವಾದಷ್ಟು ಬೇಗ ಸರ್ಕಾರ ರಚನೆಯಾಗಲಿ. ಸರ್ಕಾರ ರಚನೆಯಲ್ಲಿ ವಿಳಂಬ ಧೋರಣೆ ಬೇಡ” ಎಂದು ನಿತೀಶ್ ಕುಮಾರ್ ಸಲಹೆ ನೀಡಿರುವುದಾಗಿ ತಿಳಿದುಬಂದಿದೆ.
ಖಾತೆ ಹಂಚಿಕೆ ಬಗ್ಗೆ ಬೇಡಿಕೆ ಇದ್ದರೂ ಸಹ ಸರ್ಕಾರ ರಚನೆಗೆ ಮುಖ್ಯ ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ಎನ್‌ಡಿಎ ಸರ್ಕಾರ ರಚನೆಗೆ ಒಕ್ಕೂಟದ ನಾಯಕರು ‘ಗ್ರೀನ್ ಸಿಗ್ನಲ್’ ನೀಡಿದ್ದಾರೆ. ಎನ್‌ಡಿಎಯ ಇಂದಿನ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ಕರ್ನಾಟಕದ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸೇರಿದಂತೆ ಒಟ್ಟು 21 ನಾಯಕರು ಭಾಗವಹಿಸಿದ್ದರು.
#WATCH | On being asked about being a part of the NDA, TDP chief N Chandrababu Naidu says “How can we contest elections if we are not a part of NDA? We fought this collectively. The meeting was good…” pic.twitter.com/L7LICROqPm
— ANI (@ANI) June 5, 2024
