ಯಾವುದೇ ಕಾರಣಕ್ಕೂ ಹಮಾಸ್ ವಿರುದ್ಧ ನಡೆಸುತ್ತಿರುವ ಯುದ್ಧವನ್ನು ನಿಲ್ಲಿಸುವುದಿಲ್ಲ. ಯುದ್ಧ ವಿರಾಮ ಘೋಷಿಸಿದರೆ ನಾವು ಹಮಾಸ್ಗೆ ಶರಣಾದಂತೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ನೆತನ್ಯಾಹು, ಹಮಾಸ್ ವಿರುದ್ಧದ ಕದನ ಎರಡನೇ ಹಂತಕ್ಕೆ ತಲುಪಿದೆ. ಕದನ ವಿರಾಮಕ್ಕೆ ನಾವು ಕರೆ ಕೊಡುವುದೆಂದರೆ ಅದು ಹಮಾಸ್ಗೆ ಇಸ್ರೇಲ್ ಶರಣಾದಂತೆ. ಹಾಗಾಗಿ, ಅದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಹಮಾಸ್ ಒತ್ತೆಯಾಳಾಗಿ ಇರಿಸಿದವರನ್ನು ತಕ್ಷಣ ಯಾವುದೇ ಷರತ್ತುಗಳಿಲ್ಲದೆ ಬಿಡುಗಡೆಗೊಳಿಸಬೇಕೆಂದು ಅಂತಾರಾಷ್ಟ್ರೀಯ ಸಮುದಾಯ ಆಗ್ರಹಿಸಬೇಕು ಎಂದು ಅವರು ಹೇಳಿದ್ದಾರೆ.
Statement by Prime Minister Benjamin Netanyahu to the Foreign Media:
“The horrors that Hamas perpetrated on October 7th remind us that we will not realize the promise of a better future unless we, the civilized world, are willing to fight the barbarians.”https://t.co/8QZPL9WvzT pic.twitter.com/1cgCegRgRD— Prime Minister of Israel (@IsraeliPM) October 30, 2023
ಈ ಹೇಳಿಕೆ ಮೂಲಕ ಕದನ ವಿರಾಮ ಇಲ್ಲ ಎಂದಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹು, ಹಮಾಸ್ನ ಬಲ ಕುಗ್ಗಿಸುವುದು, ಒತ್ತೆಯಾಳುಗಳ ಬಿಡುಗಡೆ ಮಾಡುವುದು ನಮ್ಮ ಗುರಿ. ಈಗಾಗಲೇ ಉತ್ತರ ಗಾಝಾದಲ್ಲಿ ದಾಳಿ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.
Israel continues bombardment of Gaza despite calls for compliance with international humanitarian laws.
🔴 Follow our LIVE coverage: https://t.co/YhdfpFoOgC pic.twitter.com/5QdQSfKxpr
— Al Jazeera English (@AJEnglish) October 31, 2023
ಅಕ್ಟೋಬರ್ 7ರಿಂದ ಆರಂಭಗೊಂಡಿರುವ ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಇದುವರೆಗೆ ಸಾವಿರಾರು ಮಂದಿ ಪ್ಯಾಲೆಸ್ತೀನಿಯರು ಹಾಗೂ ಇಸ್ರೇಲ್ ನಾಗರಿಕರು ಸಾವನ್ನಪ್ಪಿದ್ದಾರೆ.
ಇಸ್ರೇಲ್ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದ್ದು, ಇದುವರೆಗೆ ಕನಿಷ್ಠ 8,300 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಮಕ್ಕಳೇ ಇದ್ದಾರೆ ಎಂದು ಪ್ಯಾಲೆಸ್ತೀನಿನ ಆರೋಗ್ಯ ಸಚಿವಾಲಯ ತಿಳಿಸಿದೆ.
Death and grief | Gaza. pic.twitter.com/dYBf5Vfr63
— TIMES OF GAZA (@Timesofgaza) October 30, 2023
ಹಮಾಸ್, ಇಸ್ರೇಲ್ನ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಸುಮಾರು 240 ಮಂದಿಯನ್ನು ತನ್ನ ಒತ್ತೆಯಾಳಾಗಿರಿಸಿಕೊಂಡಿದೆ. ಹಮಾಸ್ ಅನ್ನು ನಿರ್ನಾಮ ಮಾಡಿ, ಒತ್ತೆಯಾಳುಗಳನ್ನು ಕಾಪಾಡುವುದಾಗಿ ಇಸ್ರೇಲ್ ಪದೇ ಪದೇ ಹೇಳುತ್ತಲೇ ಇದೆ.
She is home.
PVT Megidish was abducted by Hamas on October 7. Tonight, she was rescued during ground operations.
Ori is now home with her family. pic.twitter.com/SZsqpvPQux
— Israel Defense Forces (@IDF) October 30, 2023
ಈ ಎಲ್ಲ ಬೆಳವಣಿಗಗಳ ನಡುವೆ ಹಮಾಸ್ನ ಒತ್ತೆಯಾಳಾಗಿದ್ದ ಇಸ್ರೇಲ್ ಯೋಧೆ ಒರಿ ಮೆಗಿದಿಶ್ ರಕ್ಷಿಸಿದ್ದೇವೆ. ಆರೋಗ್ಯವಾಗಿದ್ದು, ಆಕೆ ಈಗ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾಳೆ ಎಂದು ಇಸ್ರೇಲ್ ಸೇನೆ(ಇಸ್ರೇಲ್ ಡಿಫೆನ್ಸ್ ಫೋರ್ಸ್) ತಿಳಿಸಿದೆ.