- ರಾಜ್ಯದಲ್ಲಿ ಮತ್ತೆ ಬಿಜೆಪಿ ಕಟ್ಟಬೇಕು ಎಂಬುದು ನಮ್ಮ ಅಪೇಕ್ಷೆ
- ‘ದೇಶಕ್ಕೆ ಪ್ರಧಾನಿ ಮೋದಿ ಬೇಕಾಗಿದೆ, ವಿಶ್ವಕ್ಕೂ ಮೋದಿ ಬೇಕಾಗಿದೆ’
ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಕಟ್ಟಬೇಕು ಎಂಬುದು ನಮ್ಮ ಅಪೇಕ್ಷೆ. ಯಾರೇ ಪಕ್ಷ ಬಿಟ್ಟಿದ್ದರೂ ಅವರೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಬಿಜೆಪಿಗೆ ವಾಪಸ್ ಬನ್ನಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮುಕ್ತ ಆಹ್ವಾನ ನೀಡಿದರು.
ಚಿಕ್ಕಮಗಳೂರಲ್ಲಿ ಮಾತನಾಡಿದ ಅವರು, “ಮೋದಿಗಾಗಿ, ದೇಶಕ್ಕಾಗಿ, ಮುಂದಿನ ಪೀಳಿಗೆಗಾಗಿ ನೀವೆಲ್ಲ ಬಿಜೆಪಿಗೆ ಮರಳಿ ಆಗಮಿಸಬೇಕು” ಎಂದು ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಅವರಿಗೆ ಹೇಳಿದ್ದಾರಾ ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ.
“ಪಕ್ಷ ಬಿಟ್ಟು ಹೋದವರನ್ನು ಮತ್ತೆ ಬಿಜೆಪಿ ಜೊತೆ ಸೇರಿಸಿಕೊಂಡು ಪಕ್ಷವನ್ನು ಗಟ್ಟಿಯಾಗಿ ಮಾಡಬೇಡು. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮ ವಹಿಸಬೇಕು. ದೇಶಕ್ಕೆ ಮೋದಿ ಬೇಕಾಗಿದೆ. ವಿಶ್ವಕ್ಕೂ ಮೋದಿ ಬೇಕಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಲ್ಕಿಸ್ ಕಾನೂನು ಸಮರ – ನ್ಯಾಯವ್ಯವಸ್ಥೆಯ ಅಣಕ
“ಈ ಹಿಂದೆ ನಮ್ಮ ಪಕ್ಷದ ತತ್ವ-ವಿಚಾರ ಒಪ್ಪಿ ಕೆಲವು ನಾಯಕರು ಬಿಜೆಪಿ ಸೇರಿದ್ದರು. ಅವರು ಇಲ್ಲೇ ಇರುತ್ತಾರೆ ಎನ್ನುವ ವಿಶ್ವಾಸವಿದೆ. ಅಧಿಕಾರಕ್ಕಾಗಿ ಬಂದರು, ಅಧಿಕಾರ ಇಲ್ಲದಾಗ ಹೋದರು ಎಂಬ ಕೆಟ್ಟ ಹೆಸರನ್ನು ಯಾರೂ ತೆಗೆದುಕೊಳ್ಳುವುದಿಲ್ಲ ಎನ್ನುವ ವಿಶ್ವಾಸವಿದೆ” ಎಂದು ಹೇಳಿದರು.
“ಯಾರೇ ಪಕ್ಷ ಬಿಟ್ಟಿದ್ದರೂ ಮೋದಿಗಾಗಿ ಪಕ್ಷಕ್ಕೆ ಸ್ವಾಗತವಿದೆ ಎನ್ನುವುದು ನನ್ನ ಪ್ರಾರ್ಥನೆ. ಪಕ್ಷ ಬಿಟ್ಟೋದವರ ಜೊತೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆದಿಲ್ಲ. ಮೋದಿಯಂತ ನಾಯಕ ಈ ದೇಶಕ್ಕೆ ಮತ್ತೆ ಸಿಗಲ್ಲ, ದೇಶದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ I.N.D.I.A ಹಾಗೂ ಯಾವ ಪಕ್ಷದಲ್ಲೂ ಮೋದಿಯಂತಹ ನಾಯಕ ಸಿಗಲ್ಲ” ಎಂದು ಹೇಳಿದರು.