ಹೆಚ್‌ಎಸ್‌ಆರ್‌ಪಿ ಪ್ಲೇಟ್‌ ಅಳವಡಿಸದಿದ್ದಲ್ಲಿ ದಂಡ ಕಡ್ಡಾಯ: ಸಚಿವ ರಾಮಲಿಂಗಾರೆಡ್ಡಿ

Date:

Advertisements

“ನಿಗದಿತ ದಿನಾಂಕದೊಳಗೆ ಹೆಚ್.ಎಸ್.ಆರ್.ಪಿ ಅಳವಡಿಸದಿದ್ದಲ್ಲಿ, ಮೊದಲನೇ ಅಪರಾಧಕ್ಕೆ ರೂ 500 ಹಾಗೂ ಎರಡನೇ ಮತ್ತು ನಂತರದ ಅಪರಾಧಗಳಿಗೆ ರೂ.1000ದಂತೆ ಹಾಗೂ ಕಾಲಕಾಲಕ್ಕೆ ಹೊರಡಿಸಲಾಗುವ ಸರ್ಕಾರದ ಆದೇಶದಂತೆ ದಂಡವನ್ನು ವಿಧಿಸಲಾಗುವುದು” ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.

ವಿಧಾನ ಪರಿಷತ್ತು ಕಾರ್ಯಕಲಾಪದ ವೇಳೆ ಶಾಸಕ ಮಧು ಜಿ. ಮಾದೇಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿ ಆಗಿರುವ ವಾಹನಗಳ ಸಂಖ್ಯೆ ಎಷ್ಟು ಹಾಗೂ ಇಲ್ಲಿಯವರೆಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಆಳವಡಿಸಿಕೊಂಡಿರುವ ವಾಹಗಳ ಸಂಖ್ಯೆ ಮತ್ತು ಇದರ ಶೇಕಡವಾರು ಪ್ರಮಾಣ ಎಷ್ಟು ಎಂದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಸಚಿವರು ತಿಳಿಸಿದರು.

“2023ರ ಆಗಸ್ಟ್ 18 ರಿಂದ- 2024ರ ಫೆಬ್ರವರಿ 12ರ ವರೆಗೆ 18,32,787 ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ, ಎಲ್ಲಾ ರಾಜ್ಯಗಳಲ್ಲಿಯೂ ಅತಿ ಸುರಕ್ಷತಾ ನೋಂದಣಿ ಫಲಕಗಳನ್ನು ಅಳವಡಿಸಲಾಗುತ್ತಿದ್ದು, ಅದೇ ರೀತಿಯಾಗಿ ರಾಜ್ಯದಲ್ಲಿಯೂ ಸಹ ಫಲಕಗಳನ್ನು ಅಳವಡಿಸಲು ಆದೇಶಿಸಲಾಗಿದ್ದು, ರಾಜ್ಯದಲ್ಲಿ ಏಪ್ರಿಲ್ 2019ಕ್ಕಿಂತ ಮೊದಲು ಅಂದಾಜು 2.45 ಕೋಟಿ ವಾಹನಗಳು ನೋಂದಣಿಯಾಗಿದ್ದು, ಸುಮಾರು 2 ಕೋಟಿ ವಾಹನಗಳು ಅಸ್ತಿತ್ವದಲ್ಲಿವೆ ಹಾಗೂ ಇಲ್ಲಿಯವರೆಗೆ ಶೇ.9.16% ಪ್ರಮಾಣದ ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ” ಎಂದು ಹೇಳಿದರು.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್‌ಗೆ ರೆಡ್ ಕಾರ್ಪೆಟ್, ರೈತರಿಗೆ ಮುಳ್ಳಿನ ಬೇಲಿ- ಇದು ಮೋದಿ ಶೈಲಿ

“ವಾಹನಗಳಿಗೆ ಹೆಚ್.ಎಸ್.ಅರ್.ಪಿ ಅಳವಡಿಸುವ ಸಂಬಂಧ ಪಾರದರ್ಶಕತೆ ಮತ್ತು ಹೆಚ್ಚುವರಿ ಶುಲ್ಕ ವಿಧಿಸುವುದನ್ನು ತಡೆಗಟ್ಟಲು OEM ಗಳ ಅಧಿಕೃತ ಹೆಚ್.ಎಸ್.ಅರ್.ಪಿ ತಯಾರಕರು ಅಧಿಕೃತಗೊಳಿಸಿದ ಪೋರ್ಟಲ್ ಮೂಲಕ ವಾಹನದ ಮಾಲೀಕರು ಆನ್ ಲೈನ್ ನಲ್ಲಿ ಮಾತ್ರ ಶುಲ್ಕ ಪಾವತಿಸಿ, ಪ್ಲೇಟ್ ಅಳವಡಿಸಿಕೊಳ್ಳಲು ಅವರಿಗೆ ಅನುಕೂಲಕರವಾದ ಸ್ಥಳ ಮತ್ತು ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ” ಎಂದು ತಿಳಿಸಿದರು.

“ಇ-ವಾಹನ್ ಪೋರ್ಟಲ್ ನಲ್ಲಿ ಇರುವ ವಾಹನದ ವಿವರಗಳು ಹಾಗೂ ಹೆಚ್.ಎಸ್.ಆರ್.ಪಿ ತಯಾರಕರು ಅಧಿಕೃತಗೊಳಿಸಿದ ಆನ್ ಲೈನ್ ಪೋರ್ಟಲ್ ನಲ್ಲಿನ ವಾಹನದ ವಿವರಗಳೊಂದಿಗೆ ಪರಿಶೀಲನೆಯಾಗಿ ತಾಳೆಯಾದಲ್ಲಿ ಮಾತ್ರ ಹೆಚ್.ಎಸ್.ಆರ್.ಪಿ ಅಳವಡಿಸಲು ಅನುಮತಿ ದೊರೆಯುತ್ತದೆ. ಆರ್.ಸಿ ಮಾನ್ಯತೆ ಇಲ್ಲದ ವಾಹನಗಳಿಗೆ ಹೆಚ್.ಎಸ್.ಆರ್.ಪಿ ನೀಡಿ ಕಾನೂನುಬದ್ಧಗೊಳಿಸುವ ಪ್ರಶ್ನೆ ಉದ್ಬವಿಸುವುದಿಲ್ಲ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X