ಪ್ರಧಾನಿ ಮೋದಿಯ ಶಿವಮೊಗ್ಗ ಕಾರ್ಯಕ್ರಮ; ಜನರನ್ನು ಕರೆತರಲು ₹3.90 ಕೋಟಿ ಖರ್ಚು!

Date:

  • ಬಸ್‌ಗಳ ಬಾಡಿಗೆ ಬಿಲ್‌ ಪಾವತಿಸಿದ್ದು ಕಾರ್ಯಪಾಲಕ ಇಂಜಿನಿಯರ್‌
  • ಫೆಬ್ರವರಿ 27ರ ಕಾರ್ಯಕ್ರಮಕ್ಕೆ ಖರ್ಚಾಯಿತು 3 ಕೋಟಿ 90 ಲಕ್ಷ ರೂ.

ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿ ಬರೋಬ್ಬರಿ ಒಂದು ತಿಂಗಳು ಕಳೆದಿದೆ. ಆದರೆ, ಮೋದಿಯವರ ಎರಡು ಗಂಟೆಯ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಕೋಟ್ಯಾಂತರ ರೂಪಾಯಿ ಖರ್ಚಾಗಿರುವುದು ಇದೀಗ ಬೆಳಕಿಗೆ ಬಂದಿದೆ.

ಹೌದು, ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮವನ್ನು ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿತ್ತು. ಎರಡರಿಂದ ಮೂರು ಗಂಟೆಯ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಕೆಎಸ್‌ಆರ್‌ಟಿಸಿಯ ಸುಮಾರು 1,600 ಬಸ್‌ಗಳು ಬಳಕೆಯಾಗಿವೆ. ಬರೀ ಇದರ ಬಿಲ್‌, ಮೂರು ಕೋಟಿ ತೊಂಬತ್ತು ಲಕ್ಷ ರೂಪಾಯಿ.

ಫೆಬ್ರವರಿ 27ರ ಕಾರ್ಯಕ್ರಮಕ್ಕೆ ಬಳಸಲಾಗಿರುವ ಬಸ್‌ಗಳ ಸಂಖ್ಯೆ ಮತ್ತು ಅದಕ್ಕೆ ತಗುಲಿರುವ ಖರ್ಚಿನ ವಿವರ ಆಕಾಶ್ ಪಾಟೀಲ್ ಎಂಬುವವರ ಮಾಹಿತಿ ಹಕ್ಕಿನಿಂದ ಹೊರಬಿದ್ದಿದೆ.ಶಿವಮೊಗ್ಗ ಕಾರ್ಯಕ್ರಮ

ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗಕ್ಕೆ ಮಾಹಿತಿ ಹಕ್ಕು ಸಲ್ಲಿಸಿದ್ದ ಆಕಾಶ್ ಪಾಟೀಲ್, “ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಕೆಎಸ್‌ಆರ್‌ಟಿಸಿಯ ಎಷ್ಟು ಬಸ್‌ಗಳನ್ನು ಬಳಸಲಾಗಿತ್ತು. ಇದರಿಂದಾದ ಖರ್ಚು ಎಷ್ಟು ಮತ್ತು ಈ ಮೊತ್ತವನ್ನು ಪಾವತಿಸಿದರು ಯಾರು?” ಎಂದು ಕೇಳಿದ್ದರು.

ಆಕಾಶ್ ಪಾಟೀಲ್ ಅವರ ಪ್ರಶ್ನೆಗೆ ಮಾಹಿತಿ ನೀಡಿರುವ ಕೆಎಸ್‌ಆರ್‌ಟಿಸಿ, “ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಜನರನ್ನು ಕರೆತರಲು ಸುಮಾರು 1,600 ಬಸ್‌ಗಳನ್ನು ಬಳಸಲಾಗಿದೆ. ಇದಕ್ಕೆ 3,93,92,565 ರೂಪಾಯಿ ಬಿಲ್‌ ಆಗಿದೆ” ಎಂದು ಅಚ್ಚರಿಯ ಮಾಹಿತಿ ನೀಡಿದೆ.

ಈ ಸುದ್ದಿ ಓದಿದ್ದೀರಾ? ಐಟಿ ಅಧಿಕಾರಿಗಳ ರಕ್ಷಣೆಯಲ್ಲಿ ಬಿಜೆಪಿ ಸರ್ಕಾರ ಒಬ್ಬೊಬ್ಬ ಅಭ್ಯರ್ಥಿಗೂ ₹10 ಕೋಟಿ ಸಾಗಿಸುತ್ತಿದೆ: ದಿನೇಶ್ ಗುಂಡೂರಾವ್

1,600 ಬಸ್‌ಗಳ ಬಾಡಿಗೆಯನ್ನು ಶಿವಮೊಗ್ಗದ ಕಾರ್ಯಪಾಲಕ ಇಂಜಿನಿಯರ್‌ ಪಾವತಿಸಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಕೇವಲ ಎರಡರಿಂದ ಮೂರು ಗಂಟೆಯ ಕಾರ್ಯಕ್ರಮಕ್ಕೆ ಬರೀ ಜನರನ್ನು ಕರೆತಲು ಮೂರು ಕೋಟಿ ತೊಂಬತ್ತು ಲಕ್ಷ ರೂಪಾಯಿ ಖರ್ಚಾಗಿರುವುದು ಅಚ್ಚರಿ ಮೂಡಿಸಿದೆ. ಜನರನ್ನು ಕರೆತರಲಷ್ಟೇ ಇಷ್ಟು ರೂಪಾಯಿ ಖರ್ಚಾಗಿರುವಾಗ ಇನ್ನೂ ಬೇರೆ ಬೇರೆ ಕಾರ್ಯಕ್ಕೆ ಇನ್ನೆಷ್ಟು ಖರ್ಚಾಗಿರಬಹುದು ಎನ್ನುವ ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಎಲ್ಲಾ ರಾಜಕೀಯ ಪಕ್ಷಗಳು ಹೀಗೆಯೇ ಮಾಡುವರು. ಯಾರೂ ಸ್ವ ಇಚ್ಛೆಯಿಂದ ಪ್ರಧಾನಮಂತ್ರಿಗಳ ಮತ್ತು ಇತರೇ ರಾಜಕೀಯ ವ್ಯಕ್ತಿಗಳ ಭಾಷಣ ಕೇಳಲು ಬರುವುದಿಲ್ಲ, ಆ ತರಹದ ವಾತಾವರಣ ನಿರ್ಮಾಣವಾಗಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ಸಚಿವರು | ಅಪ್ಪ ಹಾಕಿದ ಆಲದಮರದಡಿ ‘ಸುಭದ್ರ ರಾಜಕಾರಣ’ ಮಾಡುತ್ತಿರುವ ಈಶ್ವರ್ ಖಂಡ್ರೆ

ಭಾಲ್ಕಿ ಕ್ಷೇತ್ರದ ಕಳೆದ 70 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಮೂರು ಅವಧಿ...

ಧಾರವಾಡ ಲೋಕಸಭಾ ಕ್ಷೇತ್ರ | ಪ್ರಲ್ಹಾದ್‌ ಜೋಶಿ ಬದಲು ಹೊಸ ಮುಖಕ್ಕೆ ಮನ್ನಣೆ ನೀಡಲು ಲಿಂಗಾಯತರ ಒತ್ತಾಯ

2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ 13 ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್‌...

ಆಗಸ್ಟ್‌ 1 ರಂದು ಗೃಹಜ್ಯೋತಿ, ಆಗಸ್ಟ್‌ 17-18 ರಂದು ಗೃಹಲಕ್ಷ್ಮಿ ಯೋಜನೆ ಜಾರಿ : ಸಿಎಂ ಸಿದ್ದರಾಮಯ್ಯ

ಯೋಜನೆಗಳ ಅನುಷ್ಠಾನ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ...

ಜೂನ್ 10ರಂದು ಕ್ಷೇತ್ರದ ಜನರಿಗೆ ಕೃತಜ್ಞತಾ ಸಭೆ ಆಯೋಜಿಸಿದ ಸಿಎಂ

ವರುಣಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಮುಂದಾದ ಸಿದ್ದರಾಮಯ್ಯ ವರುಣ ಕ್ಷೇತ್ರ ವ್ಯಾಪ್ತಿಯ...