ಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಮುಖ ದೇವಸ್ಥಾನದೊಳಗೆ ಪ್ರವೇಶಿಸದಂತೆ ಅಸ್ಸಾಂನ ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ತಡೆದು ನಿಲ್ಲಿಸಿರುವುದಾಗಿ ವರದಿಯಾಗಿದೆ.
ಅಸ್ಸಾಂನ ಪೊಲೀಸರು ಭದ್ರತೆಯ ಕಾರಣಗಳನ್ನೊಡ್ಡಿ ತಡೆದಿರುವುದಾಗಿ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸಹಿತ ಎಲ್ಲ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಧರಣಿ ನಡೆಸುತ್ತಿದ್ದಾರೆ.
श्री श्री शंकरदेव जी ने असम की सोच को सबसे अच्छी तरह से सबके सामने रखा है।
वे हमारे गुरु हैं, हम भी उनके रास्ते पर चलते हैं। मैं जब यहां आया था, तब मैंने यहां मत्था टेकने का सोचा था।
11 तारीख को हमें आमंत्रण आया था, मगर फिर हमें कहा गया कि सब लोग जा सकते हैं, लेकिन राहुल गांधी… pic.twitter.com/hgqlWTXEjW
— Congress (@INCIndia) January 22, 2024
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್‌ನ ಮುಖಂಡ ಕೆ ಸಿ ವೇಣುಗೋಪಾಲ್, ಇಂದು ನಮ್ಮ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಪೂರ್ವಾನುಮತಿ ಪಡೆದಿದ್ದರೂ ಕೂಡ ವಿದ್ವಾಂಸರಾದ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವಾದ ನಾಗಾಂವ್‌ನಲ್ಲಿರುವ ಬಟಾದ್ರವ ಸತ್ರ ದೇವಸ್ಥಾನಕ್ಕೆ ಭೇಟಿ ನೀಡದಂತೆ ಅಸ್ಸಾಂನ ಅಧಿಕಾರಿಗಳು ತಡೆಯುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದೊಂದು ಹೊಸತು. ದೇವಸ್ಥಾನಕ್ಕೆ ಯಾರು ಮತ್ತು ಯಾವ ಸಮಯದಲ್ಲಿ ಹೋಗಬೇಕು ಎಂಬುದನ್ನು ಬಿಜೆಪಿ ನಿರ್ಧರಿಸುತ್ತದೆ. ಈ ಸರ್ವಾಧಿಕಾರಿ ಆಡಳಿತ ತನ್ನ ದಿನಗಳು ಎಣಿಸಿವೆ ಎಂಬುದನ್ನು ಅರಿತುಕೊಳ್ಳಬೇಕು. ಇಂತಹ ನಿರಂಕುಶಾಧಿಕಾರಕ್ಕೆ ಭಾರತದ ಜನರು ಅವಕಾಶ ನೀಡುವುದಿಲ್ಲ. ಶ್ರೀಮಂತ ಶಂಕರದೇವ ಮುಂದೆ ನಮಸ್ಕರಿಸುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ” ಎಂದು ತಿಳಿಸಿದ್ದಾರೆ.
Today the BJP stopped Rahul ji from going to Batadrava Satra, despite prior permission.
We have entered a new phase of democracy where the BJP will decide who should go to a temple and at what time.
This dictatorial regime must realise that its days are numbered. People of… pic.twitter.com/Psr2NT4zWV
— K C Venugopal (@kcvenugopalmp) January 22, 2024
ಘಟನೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ನಾಗಾಂವ್‌ನಲ್ಲಿ ಧರಣಿ ನಡೆಸಿದರು. ಸ್ಥಳದಲ್ಲೇ ಕಾರ್ಯಕರ್ತರು ‘ರಘುಪತಿ ರಾಘವ ರಾಜಾರಾಮ್’ ಭಕ್ತಿ ಗೀತೆ ಹಾಡಿದರು.
“ನಾವು ಯಾವುದೇ ಸಮಸ್ಯೆಗಳನ್ನು ಸೃಷ್ಟಿಸಲು ಬಯಸುವುದಿಲ್ಲ, ನಾವು ಕೇವಲ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಬಯಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಾವು ದೇವಾಲಯಕ್ಕೆ ಭೇಟಿ ನೀಡಲು ಬಯಸುತ್ತೇವೆ. ನಾನು ದೇವಾಲಯಕ್ಕೆ ಭೇಟಿ ನೀಡಲಾಗದಂತಹ ಅಪರಾಧವೇನು ಮಾಡಿದ್ದೇವೆ” ಎಂದು ಪ್ರಶ್ನಿಸಿದ್ದಾರೆ.
असम के नगाँव में भारत जोड़ो न्याय यात्रा को श्री शंकरदेव की जन्मस्थली स्थित मंदिर पर जाने से रोका गया है। आज यात्रा की शुरुआत महान वैष्णव संत श्री शंकरदेव जी के सत्र से होना था।
भाजपा की बौखलाहट साफ़ दिख रहा है।
यात्रा से इतना डर क्यूँ! #BharatJodoNyayYatra pic.twitter.com/LOmtRq0ECt— Yogendra Yadav (@_YogendraYadav) January 22, 2024
ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ದಿನವಾದ ಸೋಮವಾರ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಗೆ ತೆರಳಲಿರುವ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳ ಸೂಕ್ಷ್ಮ ಮಾರ್ಗಗಳಲ್ಲಿ ಕಮಾಂಡೋಗಳನ್ನು ನಿಯೋಜಿಸಲಾಗುವುದು ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.