2013ರಲ್ಲಿ ರಾಹುಲ್ ಗಾಂಧಿಯವರ ಅತ್ಯಾಪ್ತ ರಘುರಾಂ ರಾಜನ್ ನೇತೃತ್ವದಲ್ಲಿ “ರಾಜ್ಯಗಳ ಸಂಯೋಜಿತ ಅಭಿವೃದ್ಧಿ ಸೂಚ್ಯಂಕವನ್ನು ಅಭಿವೃದ್ಧಿಪಡಿಸುವ ಸಮಿತಿ”ಯ ಶಿಫಾರಸ್ಸಿನ ಮೇಲೆ ಕರ್ನಾಟಕದ ತೆರಿಗೆ ಹಂಚಿಕೆ ಪ್ರಮಾಣವನ್ನು 4.13% ನಿಂದ 3.73% ಕ್ಕೆ ಇಳಿಸಿ, ಕಾಂಗ್ರೆಸ್ ಕರ್ನಾಟಕಕ್ಕೆ ಬಹುದೊಡ್ಡ ಅನ್ಯಾಯವನ್ನು ಮಾಡಿತ್ತು ಎಂದು ಬಿಜೆಪಿ ಆರೋಪಿಸಿದೆ.
ಮೋದಿ ಕುರಿತು ಸಿಎಂ ಸಿದ್ದರಾಮಯ್ಯ ಅವರ ಸರಣಿ ಟ್ವೀಟ್‌ಗಳಿಗೆ ಪ್ರತ್ಯುತ್ತರ ನೀಡಿರುವ ರಾಜ್ಯ ಬಿಜೆಪಿ, “ಸರಣಿ ಸುಳ್ಳುಗಾರ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಎಷ್ಟೇ ಅನ್ಯಾಯವಾದರೂ, ತಮ್ಮ ಕುರ್ಚಿ ಉಳಿದರೆ ಸಾಕು ಎಂಬ ಸ್ವಾರ್ಥದ ಕಾರಣಕ್ಕೆ ತೆರಿಗೆ ವಿಕೇಂದ್ರೀಕರಣದ ಕುರಿತು ಅಂದಿನ ಯುಪಿಎ ಸರ್ಕಾರ ಮಂಡಿಸಿದ ಒಪ್ಪಂದಕ್ಕೆ “ಜೈ” ಎಂದಿದ್ದರು” ಎಂದು ಟೀಕಿಸಿದೆ.
“ಸಹಜವಾಗಿ ಅಂದು ಯುಪಿಎ ಸರ್ಕಾರ ನೀಡಿದ ವರದಿಯ ಶಿಫಾರಸುಗಳ ಮೇಲೆ ಹಣಕಾಸು ಆಯೋಗ ಕಾರ್ಯನಿರ್ವಹಿಸಿತು. ಕರ್ನಾಟಕಕ್ಕೆ ಯು.ಪಿ.ಎ ಸಮಯದಲ್ಲಾದ ಅನ್ಯಾಯವನ್ನು ಸರಿಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಕರ್ನಾಟಕದ ತೆರಿಗೆ ಆದಾಯದ ಪಾಲನ್ನು ಮೂರು ಪಟ್ಟು ಹೆಚ್ಚಿಸುವ ಮೂಲಕ ಹಾಗೂ ಅನುದಾನವನ್ನು ದ್ವಿಗುಣಗೊಳಿಸುವ ಮೂಲಕ, ಕರ್ನಾಟಕಕ್ಕೆ ನ್ಯಾಯ ಒದಗಿಸಿದೆ” ಎಂದು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡಿದೆ.
ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದೇ ಕಾಂಗ್ರೆಸ್ ಕಾಲದಲ್ಲಿ!!
2013ರಲ್ಲಿ ರಾಹುಲ್ ಗಾಂಧಿಯವರ ಅತ್ಯಾಪ್ತ ರಘುರಾಂ ರಾಜನ್ ನೇತೃತ್ವದಲ್ಲಿ "ರಾಜ್ಯಗಳ ಸಂಯೋಜಿತ ಅಭಿವೃದ್ಧಿ ಸೂಚ್ಯಂಕವನ್ನು ಅಭಿವೃದ್ಧಿಪಡಿಸುವ ಸಮಿತಿ"ಯ ಶಿಫಾರಸ್ಸಿನ ಮೇಲೆ ಕರ್ನಾಟಕದ ತೆರಿಗೆ ಹಂಚಿಕೆ ಪ್ರಮಾಣವನ್ನು 4.13% ನಿಂದ 3.73% ಕ್ಕೆ ಇಳಿಸಿ,… https://t.co/N37uzofcdu
— BJP Karnataka (@BJP4Karnataka) February 9, 2024
“ಸಿಎಂ ಸಿದ್ದರಾಮಯ್ಯರವರೇ ನಿಮಗೆ ನಿಜಕ್ಕೂ ತಾಕತ್ತು, ದಮ್ಮು ಹಾಗೂ ನಿಮ್ಮ ಅಂತರಾಳದಲ್ಲಿ ನಿಜಕ್ಕೂ ಕನ್ನಡಿಗರ ಮೇಲೆ ಮಮತೆಯಿದ್ದರೆ, ಕರ್ನಾಟಕಕ್ಕೆ ಮಹಾದ್ರೋಹ ಮಾಡಿದ ದೆಹಲಿಯ ಎಐಸಿಸಿ ಕಚೇರಿ ಮುಂದೆ ಹಾಗೂ ರಾಹುಲ್ ಗಾಂಧಿಯವರ ಮನೆ ಮುಂದೆ ಪ್ರತಿಭಟಿಸಬೇಕು” ಎಂದು ತಿರುಗೇಟು ನೀಡಿದೆ.
“ನೆಹರು ಗಾಂಧಿ ಕುಟುಂಬದ ಮುಂದೆ ನಡು ಬಗ್ಗಿಸಿ ನಿಲ್ಲುವ ನಿಮಗೆ ಕನ್ನಡಿಗರ ಮೇಲೆ ಮಮತೆಯೂ ಇಲ್ಲ, ಕರ್ನಾಟಕದ ಬಗ್ಗೆ ಒಲವೂ ಇಲ್ಲ, ನಿಮ್ಮದೇನಿದ್ದರೂ ಕುರ್ಚಿ ಉಳಿಸಿಕೊಳ್ಳುವ ಸರ್ಕಸ್ ಹೊರತು ಉಳಿದಿದ್ದೆಲ್ಲವೂ ಬರೀ ಬೊಗಳೆ” ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.